ನವದೆಹಲಿ, ಮಾ 12, ಜ್ಯೋತಿರಾಧಿತ್ಯ ಸಿಂಧಿಯಾ ಅವರು ಯಾವ ಸಮಯದಲ್ಲಾದರೂ ಭೇಟಿಯಾಗಲು ನನ್ನ ಮನೆಗೆ ಬರುವ ಅವಕಾಶವಿತ್ತು ಅವರು ಹೀಗೆಕೆ ಮಾಡಿದರು ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಜ್ಯೋತಿರಾಧಿತ್ಯ ಸಿಂಧಿಯಾ ಹಲವು ಭಾರೀ ಪ್ರಯತ್ನ ಮಾಡಿದ್ದರೂ ಅನುಮತಿ ನಿರಕಾರಿಸಲಾಗಿತ್ತು ಎಂಬ ವರದಿಗಳ ಹಿನ್ನಲೆಯಲ್ಲಿ ಅವರು ಈ ಸ್ಪಷ್ಟಣೆ ನೀಡಿದ್ದಾರೆ. ಸಿಂಧ್ಯಾ ಅವರು ಯಾವುದೇ ಸಮಯದಲ್ಲೂ ನನ್ನ ಮನೆಗೆ ಬರುವ ಎಲ್ಲಾ ಅವಕಾಶವಿತ್ತು ಸಲಿಗೆ ಇತ್ತು, ಸ್ವಾತಂತ್ರ್ಯವಿತ್ತು ಆದರೂ ಅವರು ಹೀಗೆಕೆ ಮಾಡಿದರು ಗೊತ್ತಿಲ್ಲ ಈಗ ಅವರು ಬಹಳ ದೂರ ಹೋಗಿದ್ದಾರೆ ಇನ್ನು ಮಾತುಕತೆ ಮುಗಿದ ಅಧ್ಯಾಯ ಎಂದು ರಾಹುಲ್ ಹೇಳಿದ್ದಾರೆ.ಈಗಾಗಲೇ ಕಾಂಗ್ರೆಸ್ ತೊರೆದಿರುವ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿಗೆ ಅಧಿಕೃತವಾಗಿ ಸೇರಿದ್ದು ಇದೆ 22 ರಂದು ಮಧ್ಯಪ್ರದೇಶದಿಂದ ನಡೆಯಲಿರುವ ರಾಜ್ಯಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.