ವಿಜಯಪುರ, ಡಿ. 20: ನಗರದಲ್ಲಿ ಡಿಸೆಂಬರ್ 22 ರಂದು ರವಿವಾರ ನಡೆಯುತ್ತಿರುವ ವೃಕ್ಷೊಥಾನ್ ಹೆರಿಟೇಜ್ ರನ್ ನಾನಾ ವಿಭಾಗಗಳಲ್ಲಿ ನಡೆಯಲಿರುವ ಈ ಓಟದ ರೂಟ್ ಮ್ಯಾಪ್ ಕೂಡ ಸಿದ್ಧವಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ರೂಟ್ ಸಮಿತಿ ಮುಖಂಡ ಸೋಮಶೇಖರ ಸ್ವಾಮಿ ತಿಳಿಸಿದ್ದಾರೆ.
21 ಕಿ. ಮಿ. ವಿಭಾಗ, 10 ಕಿ. ಮೀ. ವಿಭಾಗ ಹಾಗೂ 5 ಕಿ. ಮೀ. ವಿಭಾಗದ ಎಲ್ಲ ಓಟಗಳು ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗಿ ನಗರದ ನಾನಾ ಪ್ರಾಚೀನ ಸ್ಮಾರಕಗಳ ಮೂಲಕ ಸಂಚರಿಸಿ ಇದೇ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿವೆ ಎಂದು ಅವರು, ರೂಟ್ ಮ್ಯಾಪ್ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ವಿಭಾಗವಾರು ಓಟಗಳ ಪ್ರಾರಂಭ ಮತ್ತು ಮುಕ್ತಾಯದ ರೂಟ್ ಮ್ಯಾಪ್ ಮಾಹಿತಿ ಇಲ್ಲಿದೆ.
21 ಕಿ. ಮೀ. ವಿಭಾಗ
ಸಮಯ: ಪ್ರಾರಂಭ ಬೆಳಿಗ್ಗೆ 6 ಗಂಟೆ, ಮುಕ್ತಾಯ ಸಮಯ- ಬೆಳಿಗ್ಗೆ 9.30ರೊಳಗೆ. ಓಟ ಪ್ರಾರಂಭ ಸ್ಥಳ: ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ.
ಓಟದ ಮಾರ್ಗ- ಜಿಲ್ಲಾ ಕ್ರೀಡಾಂಗಣದಿಂದ ಸ್ಟೇಷನ್ ರಸ್ತೆಯ ಮೂಲಕ ಗೋಲಗುಂಬಜ್, ಮರಳಿ ಅದೇ ರಸ್ತೆಯಲ್ಲಿ ಅಂಬೇಡ್ಕರ್ ಚೌಕ್, ಗಗನ ಮಹಲ್, ಶ್ರೀ ನರಸಿಂಹ ದೇವಸ್ಥಾನ, ಬಾರಾ ಕಮಾನ್, ಬಸವೇಶ್ವರ ಚೌಕ್, ಗಾಂಧಿ ಚೌಕ್, ಶಿವಾಜಿ ಚೌಕ್, ವಾಟರ್ ಟ್ಯಾಂಕ್, ಇಬ್ರಾಹಿಂ ರೋಜಾ, ಜಿಲ್ಲಾಸ್ಪತ್ರೆ, ಇಟಗಿ ಪೆಟ್ರೋಲ್ ಪಂಪ್ ಬಳಿ ಯು ಟರ್ನ, ಸೈನಿಕ ಶಾಲೆ ಗೇಟ್ ನಂಬರ್-2 ಮೂಲಕ ಒಳಪ್ರವೇಶ, ಸೈನಿಕ ಶಾಲೆಯ ಮುಖ್ಯ ಕಟ್ಟಡ ಸೈನಿಕ ಶಾಲೆಯ ಗೇಟ್ ನಂಬರ್-1ರ ಮೂಲಕ ನಿರ್ಗಮನ, ವಾಟರ್ ಟ್ಯಾಂಕ್, ದರ್ಗಾ ಕ್ರಾಸ್, ಬಿ.ಎಲ್.ಡಿಇ. ಸಂಸ್ಥೆಯ ಮುಖ್ಯ ಧ್ವಾರದ ಮೂಲಕ ಒಳಪ್ರವೇಶ, ಬಿ.ಎಲ್.ಡಿ.ಇ ಕ್ಯಾಂಪಸ್, ಬಿ.ಎಲ್.ಡಿ.ಇ ಸಂಸ್ಥೆ ಶ್ರೀ ಬಿ. ಎಂ. ಪಾಟೀಲ ಆಸ್ಪತ್ರೆಯ ಮೂಲಕ ನಿರ್ಗಮನ, ಬಿ.ಎಲ್.ಡಿ.ಇ ಸಂಸ್ಥೆ ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು, ಜ್ಞಾನಯೋಗಾಶ್ರಮದಲ್ಲಿ ಒಳಪ್ರವೇಶ ಮತ್ತು ಜ್ಞಾನಯೋಗಾಶ್ರಮದಿಂದ ನಿರ್ಗಮನ, ಆಶ್ರಮ ರಸ್ತೆ, ಶ್ರೀ ಸಿದ್ಧೇಶ್ವರ ದೇವಸ್ಥಾನ, ಗಾಂಧಿ ಚೌಕ್, ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ(ಮುಕ್ತಾಯ).
10 ಕಿ. ಮೀ. ವಿಭಾಗ
ಸಮಯ: ಪ್ರಾರಂಭ ಬೆಳಿಗ್ಗೆ 6.45 ಗಂಟೆ, ಮುಕ್ತಾಯ ಸಮಯ- ಬೆಳಿಗ್ಗೆ 8.45 ರೊಳಗೆ
ಓಟ ಪ್ರಾರಂಭ ಸ್ಥಳ: ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ
ಮಾರ್ಗ- ಜಿಲ್ಲಾ ಕ್ರೀಡಾಂಗಣದಿಂದ ಸ್ಟೇಷನ್ ರಸ್ತೆಯ ಮೂಲಕ ಗೋಲಗುಂಬಜ್, ಮರಳಿ ಅದೇ ರಸ್ತೆಯಲ್ಲಿ ಅಂಬೇಡ್ಕರ್ ಚೌಕ್, ಗಗನ ಮಹಲ್, ಶ್ರೀ ನರಸಿಂಹ ದೇವಸ್ಥಾನ, ಬಾರಾ ಕಮಾನ್, ಬಸವೇಶ್ವರ ಚೌಕ್, ಗಾಂಧಿ ಚೌಕ್, ಶಿವಾಜಿ ಚೌಕ್, ಇಬ್ರಾಹಿಂ ರೋಜಾ, ಸೆಟಲೈಟ್ ಬಸ್ ನಿಲ್ದಾಣದಿಂದ ಯುಟರ್ನ, ಮರಳಿ ಅದೇ ಮಾರ್ಗವಾಗಿ ವಾಟರ್ ಟ್ಯಾಂಕ್, ಶಿವಾಜಿ ಚೌಕ್, ಗಾಂಧಿಚೌಕ್, ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ(ಮುಕ್ತಾಯ).
5 ಕಿ. ಮೀ. ವಿಭಾಗ
ಸಮಯ: ಪ್ರಾರಂಭ ಬೆಳಿಗ್ಗೆ 7.30 ಗಂಟೆ, ಮುಕ್ತಾಯ ಸಮಯ- ಬೆಳಿಗ್ಗೆ 9.00 ರೊಳಗೆ.
ಓಟ ಪ್ರಾರಂಭ ಸ್ಥಳ: ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ
ಮಾರ್ಗ- ಜಿಲ್ಲಾ ಕ್ರೀಡಾಂಗಣದಿಂದ ಸ್ಟೇಷನ್ ರಸ್ತೆಯ ಮೂಲಕ ಗೋಲಗುಂಬಜ್, ಮರಳಿ ಅದೇ ರಸ್ತೆಯಲ್ಲಿ ಅಂಬೇಡ್ಕರ್ ಚೌಕ್, ಬಸವೇಶ್ವರ ಚೌಕ್, ಗಾಂಧಿ ಚೌಕ್ ಟರ್ನ, ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ(ಮುಕ್ತಾಯ).