ಡಿ. 22 ರಂದು ವೃಕ್ಷೋಥಾನ್ ಹೆರಿಟೇಜ್ ರನ್‌- 2024

ವಿಜಯಪುರ, ನ. 08: ಡಿಸೆಂಬರ್ 22 ರಂದು ವೃಕ್ಷೋಥಾನ್ ಹೆರಿಟೇಜ್ ರನ್‌- 2024 ಆಯೋಜನೆ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಪದಾಧಿಕಾರಿಗಳು ಗುರುವಾರ ನಗರದ ಜಿಓಸಿಸಿ ಬ್ಯಾಂಕಿನ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 

ಈ ಸಭೆಯಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಹೆರಿಟೇಜ್ ರನ್ ಆಯೋಜನೆ ಉದ್ದೇಶ ಪ್ರವಾಸೋದ್ಯಮ ಮತ್ತು ಪರಿಸರ ಸಂರಕ್ಷಣೆ ಕುರಿತು ಜಿಲ್ಲೆಯ ಜನರಿಗೆ ಆಗಲಿರುವ ಅನುಕೂಲಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅವರ ನೀರಾವರಿ ಯೋಜನೆಗಳಿಂದ ಪ್ರಕೃತಿಯಲ್ಲಿ ಉಂಟಾಗಿರುವ ಬದಲಾವಣೆ, ರೈತರು ಮತ್ತು ಜನಸಾಮಾನ್ಯರ ಬದುಕಿನಲ್ಲಿ ಆಗಿರುವ ಆರ್ಥಿಕ ಸುಧಾರಣೆ ಕುರಿತು ಎಳೆ ಎಳೆಯಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ್ ಅಧ್ಯಕ್ಷ ಅರ್ಜುನ ಲಮಾಣಿ, ಸಚಿವ ಎಂ.ಬಿ.ಪಾಟೀಲ ಅವರ ದೂರದೃಷ್ಟಿಯ ಫಲವಾಗಿ ಜಿಲ್ಲೆ ಸವಾಂರ್ಗೀಣ ಅಭಿವೃದ್ಧಿಯಾಗುತ್ತಿದೆ. ಈಗ ಆಯೋಜಿಸಲಾಗಿರುವ ಹೆರಿಟೇಜ್ ರನ್ ಗೆ ಸಕಲ ರೀತಿಯಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಶೋಕ ಚನ್ನಬಸುಗೋಳ, ನಿರ್ದೇಶಕರಾದ ಹಣಮಂತ ಕೊಣದಿ, ಚಂದ್ರಶೇಖರ ಜತ್ತಿ, ಉಮೇಶ ಗುಡ್ನಾಳ, ಆನಂದಗೌಡ ಬಿರಾದಾರ, ಪ್ರಧಾನ ವ್ಯವಸ್ಥಾಪಕಿ ಎಂ.ಬಿ.ಪರ್ವತಿ, ವ್ಯವಸ್ಥಾಪಕ ಎಂ.ಕೆ.ಜೋಶಿ, ಕಂಪ್ಯೂಟರ್ ಎಂಜಿನಿಯರ್ ಸಿ. ಎಸ್‌. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.