ಒಂದು ತಿಂಗಳೊಳಗೆ ಕುಡಿಯುವ ನೀರು ಪೂರೈಸಲು ಸಮನ್ವಯತೆಯಿಂದ ಅಧಿಕಾರಿಗಳ ಕಾರ್ಯವಾಗಬೇಕು: ಡಿಸಿ ಎಂ.ಎಸ್.ದಿವಾಕರ್ ಸೂಚನೆ. ಒಂದು ತಿಂಗಳೊಳಗೆ ಕುಡಿಯುವ ನೀರು ಪೂರೈಸಲು ಸಮನ್ವಯತೆಯಿಂದ ಅಧಿಕಾರಿಗಳ ಕಾರ್ಯವಾಗಬೇಕು: ಡಿಸಿ ಎಂ.ಎಸ್.ದಿವಾಕರ್ ಸೂಚನೆ.
ಒಂದು ತಿಂಗಳೊಳಗೆ ಕುಡಿಯುವ ನೀರು ಪೂರೈಸಲು ಸಮನ್ವಯತೆಯಿಂದ ಅಧಿಕಾರಿಗಳ ಕಾರ್ಯವಾಗಬೇಕು: ಡಿಸಿ ಎಂ.ಎಸ್.ದಿವಾಕರ್ ಸೂಚನೆ.
ಹೊಸಪೇಟೆ 08 : ಅಮೃತ್ 2.0 ಯೋಜನೆಯಡಿಯಲ್ಲಿ ಮರಿಯಮ್ಮನಹಳ್ಳಿ, ಕಮಲಾಪುರ, ಸೇರಿ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ ತಾಲೂಕುಗಳಿಗೆ ಕುಡಿಯುವ ನೀರು ಪೂರೈಕೆಗೆ ಬಾಕಿ ಇರುವಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಎಂ.ಎಸ್.ದಿವಾಕರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದಅಮೃತ್ 2.0 ಯೋಜನೆಯಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲ್ವಿಚಾರಣೆ ಸಭೆಯಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.ಅಮೃತ್ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆಗಳು, ರಸ್ತೆ ಬದಿ ಪೈಪ್ಲೈನ್ ವ್ಯವಸ್ಥೆ, ಜಾಗದ ಕೊರತೆಗಳಿದ್ದರೇ ಶೀಘ್ರವೇ ಇತ್ಯರ್ಥಗೊಳಿಸಿ ಜನರಿಗೆಕುಡಿಯುವ ನೀರು ಪೂರೈಕೆಗೆಕ್ರಮ ವಹಿಸಬೇಕು ಎಂದರು.
ನೈರ್ಮಲ್ಯ, ಕುಡಿಯುವ ನೀರು ಸೇರಿದಂತೆಚರಂಡಿ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕು.ಮರಿಯಮ್ಮನಹಳ್ಳಿಯಲ್ಲಿ ಮುಂಬರುವರಥೋತ್ಸವಕ್ಕೆ ಹೆಚ್ಚಿನಜನಸಂಖ್ಯೆ ಸೇರಲಿದ್ದಾರೆ.ಅಷ್ಟರೊಳಗೆ ಕುಡಿಯುವ ನೀರಿನಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳು ಕಾರ್ಯನ್ಮೋಖರಾಗಬೇಕು.ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದಕಾರ್ಯ ನಿರ್ವಹಿಸಬೇಕು.ಕೆಲಸದಲ್ಲಿ ನಿರಾಸಕ್ತಿ ವಹಿಸಿದರೇ ಶಿಸ್ತು ಕ್ರಮಎದುರಿಸಬೇಕಾಗುತ್ತದೆ.
ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ನಿಗಧಿತ ಸ್ಥಳದಲ್ಲಿ ಶೌಚಾಲಯ ನಿರ್ಮಾಣಕ್ಕೆಅನುದಾನ ನೀಡಿದ್ದರೂ, ನಿರ್ಮಾಣ ಕಾಮಗಾರಿಗಳಿಗೆ ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಇನ್ನು ಹದಿನೈದು ದಿನದೊಳಗೆ ಶೌಚಾಲಯಗಳ ಕಾಮಗಾರಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು.ಮೂಲಭೂತ ಸಮಸ್ಯೆಗಳಿಗೆ ಅಧಿಕಾರಿಗಳು ನಿರಾಸಕ್ತಿ ವಹಿಸಿದರೇ ಶೋಕಾಸ್ ನೊಟೀಸ್ ನೀಡಿ ಶಿಸ್ತು ಕ್ರಮಜರುಗಿಸಲಾಗುವುದುಎಂದುಎಚ್ಚರಿಕೆ ನೀಡಿದರು.
ಹೊಸಪೇಟೆ ಸಹಾಯಕಆಯುಕ್ತರಾದ ಪಿ.ವಿವೇಕಾನಂದ, ಹರಪನಹಳ್ಳಿ ಸಹಾಯಕಆಯುಕ್ತರಾದಚಿದಾನಂದಗುರುಸ್ವಾಮಿ, ನಗರಸಭೆ ಪೌರಾಯುಕ್ತಚಂದ್ರ್ಪ, ಜಿಲ್ಲಾ ನಗರಾಭಿವೃದ್ಧಿಕೋಶದಯೋಜನಾ ನಿರ್ದೇಶಕರಾದ ಮನೋಹರ್, ನಗರನೀರು ಸರಬರಾಜು ಇಲಾಖೆ ಎಇಇ ಮಲ್ಲಿಕಾರ್ಜುನ ಪಾಟೀಲ್ ಸೇರಿದಂತೆಯೋಜನಾ ನಿರ್ದೇಶಕರುರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪುರಸಭೆಯ ಮುಖ್ಯಾಧಿಕಾರಿಗಳು, ಜೆಸ್ಕಾಂಇಲಾಖೆಯಕಾರ್ಯಪಾಲಕಅಭಿಯಂತರರು, ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳು ಸಭೆಯಲ್ಲಿ ಉಪಸ್ಥಿತರಿದ್ದರು.