ಎಲ್ಲಮ್ಮ ದೇವಿಗೆ ಸೀರೆ ನೀಡುವುದಾಗಿ ಹರಕೆ: 70 ವರ್ಷಗಳ ನಂತರ ಪೂರೈಕೆ

Vow to give a saree to Ellamma Devi: Delivery after 70 years

ಎಲ್ಲಮ್ಮ ದೇವಿಗೆ ಸೀರೆ ನೀಡುವುದಾಗಿ ಹರಕೆ: 70 ವರ್ಷಗಳ ನಂತರ ಪೂರೈಕೆ  

ಉಗರಗೋಳ 11: ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರ ಸಂಕಲ್ಪದಂತೆ, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಘಟ್ಟದ ಅಡವಿಲಿಂಗ ಮಹಾರಾಜರು ಸುಮಾರು ರೂ 4.5 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಿದ ಸೀರೆಯನ್ನು ರೇಣುಕಾ ಯಲ್ಲಮ್ಮ ದೇವಿಗೆ ಗುರುವಾರ ರಾತ್ರಿ ಅರ​‍್ಿಸಿದರು. 1955ರಲ್ಲಿ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರು ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಆಗ ದೇವಿಗೆ ಇಂಥ ಸೀರೆ ನೀಡುವುದಾಗಿ ಬೇಡಿಕೊಂಡಿದ್ದರು. 70 ವರ್ಷಗಳ ನಂತರ, ಕಾಶಿಯ ಬನಾರಸನಲ್ಲಿ ರೇಷ್ಮೆಯಿಂದ ತಯಾರಿಸಿದ ಮತ್ತು ಚಿನ್ನದ ಝರಿಗಳನ್ನು  ಒಳಗೊಂಡ ಸೀರೆಯನ್ನು ದೇವಿಗೆ ಅರ​‍್ಿಸಿ ಭಕ್ತಿ ಮೆರೆದರು. ಸಕಲ ಜೀವರಾಶಿಗೆ ಒಳಿತಾಗಲೆಂದು ಪ್ರಾರ್ಥಿಸಿದರು. ನಂತರ ದೇವಿಗೆ ಉಡಿ ತುಂಬಿ ಹರಕೆ ತೀರಿಸಿದರು. ಶುಕ್ರವಾರ ಬೆಳಿಗ್ಗೆ ಮಡಿಭಜನೆ, ಧಾರ್ಮಿಕ ಸಭೆ ನೆರವೇರಿದವು. ರಾಯಚೂರು, ವಿಜಯಪುರ, ಬಳ್ಳಾರಿ ಜಿಲ್ಲೆಗಳಿಂದ ಬಂದಿದ್ದ ನೂರಾರು ಕಲಾವಿದರು ನಿರಂತರ 3 ದಿನಗಳವರೆಗೂ ಭಜನೆ ಪ್ರಸ್ತುತಪಡಿಸಿದರು. ವೀರಘಟ್ಟದ ಅಡವಿಲಿಂಗ ಮಹಾರಾಜರು, ವಿವೇಕ ಚಿಂತಾಮಣಿ ಶ್ರೀಗಳು, ವಿಜಯಪೂರದ ಮಧುವನ ಹೊಟೇಲ್‌ನ ಬಾಬುರಾಯಗೌಡ ಬಿರಾದಾರ, ಕಲಾವತಿ ಬಿರಾದಾರ, ಜ್ಞಾನಸಿಂಧು ಶ್ರೀಗಳು, ಬಯಲು ಬಸವೇಶ್ವರ ಶ್ರೀಗಳು, ಸಿ ಎನ್ ಕುಲಕರ್ಣಿ, ಆರ್ ಎಚ್ ಸವದತ್ತಿ, ಗಡ್ಡಯ್ಯ ಋಷಿಗಳು, ಅಲ್ಲಮಪ್ರಭು ಪ್ರಭುನವರ, ಜಿ ಸಿ ಕಗದಾಳ, ಎನ್ ಎಸ್ ಸಬರದ, ಗೀರೀಶ ಅನಂತರಡ್ಡಿ, ದೇವಪ್ಪ ಶ್ರೀಗಳು, ಎಸ್ ಬಿ ಮಹಜನಶೇಟ್ಟಿ, ಸಂಗನಗೌಡ ಪಾಟೀಲ, ಶರಣಬಸಪ್ಪ ಹರವಿ, ರಾಮನಗೌಡ ಲಿಂಗಡೂಣಿ, ಶಾಂತಯ್ಯ ಮುತ್ಯಾ, ಜಂಬಗಿ ದೇಶಮುಖ ಮನೆತನದ ಭಕ್ತರು, ವಿಜಯಕುಮಾರ ನಾರಾಯಣಪೂರ, ರಾಘು ಹಿರೇಮಠ, ಮಹೇಶ ಕುಂಬಾರ, ಮಹದೇವ ಬಿರಾದಾರ, ಮಲ್ಲಿಕಾರ್ಜುನ ಬುಯ್ಯಾರ, ಮಂಜನಗೌಡ ಸಂಧಿಮನಿ, ಪಂಡಿತ ಯಡೂರಯ್ಯ ಹಾಗೂ ನೂರಾರು ಭಕ್ತರು ಇದ್ದರು.