ರಾಣೇಬೆನ್ನೂರು27: ದೇಶದಲ್ಲಿ ಪ್ರಜಾಪ್ರಭುತ್ವ ಭದ್ರವಾಗಿರಲು ಪ್ರತಿಯೊಬ್ಬರೂ ಮತದಾನದಿಂದ ಹೊರಗುಳಿಯದೇ, ಕಡ್ಡಾಯವಾಗಿ ಮತದಾನ ಮಾಡಿದಾಗ ಮಾತ್ರ ಸಾಧ್ಯವಾಗುವುದು ಎಂದು ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಬಿ.ಜಿ.ಪ್ರಮೋದ ಹೇಳಿದರು.
ಅವರು ನಗರ ಹೊರವಲಯದ ಹುಣಸಿಕಟ್ಟಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ, ರಾಷ್ಟ್ರೀಯ ಮತದಾರರ ದಿನಾಚರಣೆ ಮತ್ತು ಕಾನೂನು ಅರಿವು-ನೆರವು ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಚುನಾವಣೆಗಳಲ್ಲಿ ಪ್ರಜ್ಞಾವಂತರೇ ಮತದಾನದಿಂದ ಹಿಂದುಳಿಯುತ್ತಿರುವುದು ಈ ದೇಶದ ಅಭದ್ರತೆಗೆ ಕಾರಣವಾಗುತ್ತಲಿದೆ. ಪ್ರಜ್ಞಾವಂತರು ಮತದಾನದಿಂದ ವಂಚಿತರಾಗದೇ, ಕಡ್ಡಾಯವಾಗಿ ಮತದಾನ ಮಾಡಲು ಮುಂದಾದಾಗ ಮಾತ್ರ ಮತ್ತಷ್ಟೂ ಅಭಿವೃದ್ಧಿ ಪರವಾದ ಸುಭದ್ರ ರಾಷ್ಟ್ರವನ್ನು ಕಟ್ಟಲು ಸಹಕಾರಿಯಾಗಲಿದೆ ಎಂದರು.
ತಹಶೀಲ್ದಾರ ಬಸನಗೌಡ ಕೊಟೂರ ಅವರು ವಿದ್ಯಾಥರ್ಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ನ್ಯಾಯವಾದಿ, ನೋಟರಿ ಕುಮಾರ ಮಡಿವಾಳರ ಅವರು ನಾಗರೀಕರ ಹಕ್ಕುಗಳು ಮತ್ತು ಕರ್ತವ್ಯಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜು ಪ್ರಾಚಾರ್ಯ ಪ್ರೋ|| ಎಲ್.ವಿ.ಸಂಗಳದ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗೌಡಪ್ಪಗೌಡ್ರ, ಉಪಾಧ್ಯಕ್ಷ ವಿಠಲ್ ಪುಠಾಣಿಕರ್, ಕಾರ್ಯದಶರ್ಿ ಎನ್.ಎನ್.ಕೊಪ್ಪದ, ಪ್ರೋ|| ಹನುಮಂತಗೌಡ ಡಿ.ಎಂ., ತಾಲೂಕಾ ಕಾರ್ಯನಿವರ್ಾಹಕ ಅಧಿಕಾರಿ ಎಸ್.ಎಂ.ಕಾಂಬಳೆ, ಡಾ|| ಹೊನ್ನಪ್ಪ ಹೊನ್ನಪ್ಪನವರ, ವ್ಯವಸ್ಥಾಪಕ ಬಸವರಾಜ ಶಿಡೇನೂರ, ಪ್ರೋ|| ಮಮತಾ ಸಾವುಕಾರ, ಪ್ರೋ|| ಎಸ್.ಬಿ.ಪಾಟೀಲ, ಪೌರಾಯುಕ್ತ ಡಾ|| ಎನ್.ಮಹಾಂತೇಶ, ಗ್ರಾಮೀಣ ಸಿಪಿಐ ಸುರೇಶ ಸಗರಿ, ಪ್ರೋ|| ಅರುಣಕುಮಾರ ಚಂದನ್, ಪ್ರೋ|| ರಾಜು ಚಕ್ಕಿ, ಪ್ರೋ|| ಸುನೀಲ ಘಟರೆಡ್ಡಿ, ಅಜ್ಜಮ್ಮನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.