ಕೊಪ್ಪಳ 25: ಮತದಾನ ಅತ್ಯಂತ ಅಮೂಲ್ಯವಾದದ್ದು ಅದನ್ನು ಎಲ್ಲರೂ ಕಡ್ಡಾಯವಾಗಿ ಚಲಾಯಿಸಬೇಕು. 18 ವರ್ಷ ತುಂಬಿದ ಎಲ್ಲರೂ ಸಹ ಮತದಾನ ಮಾಡಬೇಕು. ನಮ್ಮ ಮತದಾನ ದೇಶದ ಉತ್ತಮ ಭವಿಷ್ಯ ನಿರ್ಮಾಣ ಮಾಡುತ್ತದೆ ಎಂದು ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲಿ ಹೇಳಿದರು.
ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಜನೆವರಿ 25ರಂದು ಆಚರಿಸುವ 'ರಾಷ್ಟ್ರೀಯ ಮತದಾರರ ದಿನಾಚರಣೆ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಮತ ದೇಶದ ಹಿತವನ್ನು ಕಾಪಾಡುತ್ತದೆ. ಆದ್ದರಿಂದ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಜಾತಿ, ಧರ್ಮ, ಜನಾಂಗ, ಸಮುದಾಯಕ್ಕೆ ಅಂಟಿಕೊಳ್ಳದೆ ನಮ್ಮ ಮತವನ್ನು ಚಲಾಯಿಸಬೇಕು. ನಾವು ನೀಡಿರುವ ಮತ ಸರ್ಕಾರವನ್ನು ನಿರ್ಮಿಸುತ್ತದೆ ಎಂದು ಹೇಳಿದರು.
ಸಹ ಪ್ರಾಧ್ಯಾಪಕ ಡಾ. ಜೆ.ಎಸ್.ಪಾಟೀಲ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ.ಎಸ್.ದಾದ್ಮಿ ಅವರು ಮಾತನಾಡಿ ವಿದ್ಯಾರ್ಥಿಗಳ ಮತದಾನದಲ್ಲಿ ಎಲ್ಲರೂ ಪಾಲ್ಗೋಳ್ಳಬೇಕು ಹಾಗೂ ಮತದಾನದ ಜಾಗೃತಿಯನ್ನು ಮೂಡಿಸಬೇಕು. ಎಲ್ಲರೂ ಮತದಾನದಲ್ಲಿ ಪಾಲ್ಗೋಳ್ಳುವಂತೆ ಪ್ರೇರೆಪಿಸಬೇಕು. ಮತದಾನ ಮಾಡುವುದರ ಜೊತೆಗೆ ಮತದಾನದ ಜಾಗೃತಿಯಲ್ಲಿ ತಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ನಂತರ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಗಳಾದ ಶರಣಪ್ಪ, ಅಜ್ಜಪ್ಪ, ವಿಜಯಕುಮಾರ, ಮಹಮ್ಮದ ರಫಿ, ಸುಭಾಷಿಣಿ, ಪಿ. ಸಂಗೀತಾ ಮತದಾನದ ಅನುಭವ ಮತ್ತು ಜಾಗೃತಿ ಕುರಿತು ಮಾತನಾಡಿದರು. ಪ್ರಾಧ್ಯಾಪಕರಾದ ಎಂ.ಎಸ್.ಬಾಚಲಾಪುರ, ಡಾ. ಬಸವರಾಜ ಪೂಜಾರ, ಡಾ. ಮಾರ್ಕಂಡೆಯ ಹಂದ್ರಾಳ, ಡಾ.ಶಶಿಕಾಂತ ಉಮ್ಮಾಪುರೆ, ಡಾ.ಕರಿಬಸವೇಶ್ವರ ಬಿ., ವೆಂಕಟೇಶ ನಾಯ್ಕ, ಶ್ರೀದೇವಿ, ರಾಜು ಹೊಸಮನಿ, ಮಹೇಶ ಬಿರಾದಾರ, ವಿನೋದ ಸಿ.ಎಂ., ಮಂಜುನಾಥ ಗಾಳಿ, ಪ್ರಶಾಂತ ಕೋಂಕಲ, ಶಿವಬಸಪ್ಪ ಮಸ್ಕಿ, ಶಿವನಗೌಡ ಪೋಲಿಸಪಾಟೀಲ ಮತ್ತು ಸಿಬ್ಬಂದಿಗಳು ಹಾಗೂ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಡಾ. ನಾಗರಾಜ ದಂಡೋತಿ ಸ್ವಾಗತಿಸಿ ನಿರೂಪಿಸಿದರು. ಅರುಣಕುಮಾರ ವಂದಿಸಿದರು.