ಪ್ರಭುತ್ವ ಭಾರತ ನಿರ್ಮಾಣಕ್ಕೆ ಮತದಾನ ಅವಶ್ಯ : ನ್ಯಾ.ಕಟ್ಟಿ

ಬಾಗಲಕೋಟೆ25: ಪ್ರಭುತ್ವ ಭಾರತ  ನಿರ್ಮಾಣಕ್ಕೆ ಮತದಾನದ ಹಕ್ಕು ಚಲಾಯಿಸುವುದು ಅವಶ್ಯವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಅನೀಲ ಕಟ್ಟಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್ನಲ್ಲಿಂದು ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾತಿ, ಧರ್ಮ ಬೇಧಗಳನ್ನು ಲೆಕ್ಕಿಸದೇ ನಿರ್ಬಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಈ ಕುರಿತು ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಬಲಿಷ್ಠ ಪ್ರಜಾಪ್ರಭುತ್ವ ನಿಮರ್ಾಣ ಮಾಡುವಂತೆ ಯುವಕರಿಗೆ ಕರೆ ನೀಡಿದರು. 

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ನಮ್ಮ ಜಿಲ್ಲೆಯ ನಮ್ಮ ಗ್ರಾಮಗಳ ಪ್ರಗತಿ ಬಗ್ಗೆ ಅರಿವು ಇದ್ದ ನಾಗರಿಕರು ಮತದಾನದಿಂದ ಹಿಂದುಳಿಯಬಾರದು. ಮತದಾನ ಮಾಡುವುದರಿಂದ ನಮ್ಮ ವ್ಯಕ್ತಿತ್ವವನ್ನು ನಾವು ಗುರುತಿಸಿಕೊಂಡಂತಾಗುತ್ತದೆ ಎಂದರು. ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು, ರಾಜಕಾರಣಿಗಳ ಕುರಿತು ಟೀಕೆ ಟಿಪ್ಪಣಿಗಳನ್ನು ಮಾಡುವ ಮೊದಲು ಉತ್ತಮ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಮತದಾರನಿಗೆ ಇದೆ ಎಂದರು. 

ಸ್ವತಂತ್ರ ನಂತರ ಪ್ರಜಾಪ್ರಭುತ್ವ ಪ್ರಾತಿನಿಧ್ಯ ಹೊಂದಿದ ನಮ್ಮ ದೇಶಕ್ಕೆ ಮತದಾರರಿಗೆ ಕೆಲವು ಅರ್ಹತೆ ಇರಲಿ ಎಂಬ ಉದ್ದೇಶದಿಂದ ಹಾಗು ಬಡವರು, ಸಿರಿವಂತರು ಎಂಬ ಬೇಧ-ಭಾವ ಬರದಂತೆ ಪ್ರತಿಯೊಬ್ಬರು ಮುಕ್ತ ಮತದಾನ ಮಾಡುವ ಉದ್ದೇಶದಿಂದ ಹಾಗೂ ಮಹತ್ವವಾದ ಮತವನ್ನು ಯೋಗ್ಯವಾದ ಅಭ್ಯಥರ್ಿಗೆ ನೀಡಲು ಪ್ರಭುದ್ದತೆ ಅವಶ್ಯವಿರುವದರಿಂದ 18 ವರ್ಷಕ್ಕೆ ಚುನವಣಾ ಮತದಾನದ ಹಕ್ಕನ್ನು ನೀಡಲಾಯಿತು ಎಂದರು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂತೋಷ ಸಿ.ಬಿ. ಮಾನತಾಡಿ ಇಂದಿನ ಮತದಾರರು ತಮ್ಮ ಮತವನ್ನು ಯಾವುದೇ ಆಮಿಷಗಳಿಗೆ ಬಲಿಕೊಡದೇ ದೇಶದ ಅಭಿವೃದ್ಧಿಗೆ ಉತ್ತಮ ನಾಯಕರ ಆಯ್ಕೆಗೆ ತಪ್ಪದೇ ಮತ ಚಲಾಯಿಸಬೇಕು. ಅನಕ್ಷರಸ್ಥರಲ್ಲಿ ಮತದಾನದ ಕುರಿತು ತಿಳುವಳಿಕೆ ಮೂಡಿಸುವುದು ಅವಶ್ಯವಾಗಿದೆ ಎಂದು ತಿಳಿಸಿದ್ದರು.

ಉಪನ್ಯಾಸಕರಾಗಿ ಆಗಮಿಸಿದ ಈರಣ್ಣ ಎನ್.ಕುಡಚಿ ಮಾತನಾಡಿ ಮತದಾನದ ದಿನ ಎಂಬುದು ಒಂದು ರಾಷ್ಟ್ರೀಯ ಹಬ್ಬವಾಗಿದ್ದು, ಇದನ್ನು ಎಲ್ಲರೂ ಆಸಕ್ತಿಯಿಂದ ಆಚರಿಸಬೇಕು. ವಿದೇಶಗಳಲ್ಲಿ 21 ವರ್ಷದ ನಂತರ ಮತದಾನದ ಹಕ್ಕು ದೊರೆಯುತ್ತಿದೆ. ಆದರೆ ಭಾರತದಲ್ಲಿ 18 ವರ್ಷಕ್ಕೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಇದ್ದರಿಂದ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಯುವಕರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮತದಾನದ ಕುರಿತು ಹಮ್ಮಿಕೊಂಡಿದ್ದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಮತ್ತು ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಮತದಾರರ ನೋಂದಣಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಾಲಾ ಶಿಕ್ಷಕರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದಶರ್ಿ ಹೇಮಲತಾ ಹುಲ್ಲೂರ, ಜಿಲ್ಲ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಪ್ರೋಬೆಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತಹಶಿಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.