ರಾಂಚಿ, ಡಿ 23, ಜಾರ್ಖಂಡ್
ವಿಧಾನಸಭೆಯ 81 ಕ್ಷೇತ್ರಗಳ ಮತ ಎಣಿಕೆ ಸೋಮವಾರಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆರಂಭವಾಗಿದೆ.82 ಕೊಠಡಿಗಳಲ್ಲಿ
ಮತಎಣಿಕೆ ನಡೆಯುತ್ತಿದ್ದು, ಇದಕ್ಕಾಗಿ 1478 ಟೇಬಲ್‍ಗಳನ್ನು ಹಾಕಲಾಗಿದೆ. ಮೊದಲ ಮುನ್ನಡೆ ವಿವರಗಳುಬೆಳಿಗ್ಗೆ
9 ಗಂಟೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಮೊದಲ ಫಲಿತಾಂಶ 1 ಗಂಟೆಗೆ ಹೊರಬೀಳಲಿದ್ದು, ಎಲ್ಲ ಸುತ್ತಿನ
ಮತಎಣಿಕೆ ಮಧ್ಯಾಹ್ನ 2 ಗಂಟೆಗೆ ಕೊನೆಗೊಳ್ಳುವ ನಿರೀಕ್ಷೆ ಇದೆ. ಟೊರ್ಪಾ ಮತ್ತು ಚಂದಂಕಿಯಾರಿ ಕ್ಷೇತ್ರಗಳಿಗೆ
ಕೇವಲ 13 ಸುತ್ತು ಮತಎಣಿಕೆ ನಡೆಯುವುದರಿಂದ ಇವುಗಳ ಫಲಿತಾಂಶ ಮೊದಲು ಹೊರಬೀಳಲಿದೆ. ಆದರೆ 28 ಸುತ್ತುಗಳ ಮತಎಣಿಕೆ ನಡೆಯುವ ಚಾತ್ರದಲ್ಲಿ ಫಲಿತಾಂಶ
ವಿಳಂಭವಾಗಲಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭಿಸಲಾಗಿದೆ. ಮತಎಣಿಕೆಗಾಗಿ ಹಟಿಯಾದಲ್ಲಿ
ಕನಿಷ್ಠ 14 ಟೇಬಲ್‌ಗಳನ್ನು ಹಾಕಲಾಗಿದ್ದು, ಸರೈಕೆಲಾ ಕ್ಷೇತ್ರದಲ್ಲಿ ಗರಿಷ್ಠ 26 ಟೇಬಲ್‌ಗಳನ್ನು
ಹಾಕಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿನಯ್ ಕುಮಾರ್ ಚೌಬೆ ತಿಳಿಸಿದ್ದಾರೆ.ಮೊದಲು
ಅಂಚೆ ಮತಪತ್ರಗಳನ್ನು ಎಣಿಸಲಾಗುತ್ತದೆ. ನಂತರ ಇವಿಎಂನಲ್ಲಿನ
ಮತಗಳನ್ನು ಎಣಿಸಲಾಗುತ್ತದೆ. ಒಂದುಸುತ್ತಿನ ಎಣಿಕೆಯನ್ನು ಅಂತಿಮಗೊಳಿಸಿದ ನಂತರ ಎರಡನೇ ಸುತ್ತಿನ ಎಣಿಕೆ
ಮಾತ್ರ ನಡೆಯುತ್ತದೆ. ಪ್ರತಿ ಎಣಿಕೆಯ ಟೇಬಲ್‍ನಲ್ಲಿ ಎಣಿಕೆಯ ಸಹಾಯಕ, ಎಣಿಕೆಯ ಮೇಲ್ವಿಚಾರಕ ಮತ್ತು
ಎಣಿಕೆಯ ಸೂಕ್ಷ್ಮ ವೀಕ್ಷಕ ಇರುತ್ತಾರೆ. ವಿವಿಧ ಪಕ್ಷಗಳ ಎಣಿಕೆಯ ಏಜೆಂಟರುಮತ್ತು ಚುನಾವಣಾಧಿಕಾರಿ
ಸಹ ಮೇಜಿನ ಬಳಿ ಇರುತ್ತಾರೆ. ಹಿಂದಿನ 2014 ರ ವಿಧಾನಸಭಾ
ಚುನಾವಣೆಯಲ್ಲಿ ಬಿಜೆಪಿ 37 ,ಎಜೆಎಸ್‌ಯು 5, ಜೆಎಂಎಂ 19 , ಜೆವಿಎಂ-ಪಿ 8, ಕಾಂಗ್ರೆಸ್ 6 ಮತ್ತುಇತರರು
6 ಸ್ಥಾನಗಳನ್ನು ಗೆದ್ದಿದ್ದರು.