ಲೋಕದರ್ಶನ ವರದಿ
ಬಾಗಲಕೋಟೆ, 29: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ವಿದ್ಯಾಥರ್ಿಗಳು ದೇಶಿ ಉಡುಗೆಯನ್ನು ತೊಟ್ಟು ಜಾಥಾದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ತಾಲೂಕಿನ ಚಿಕ್ಕಸಂಶಿ ಗ್ರಾಮದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತೋವಿವಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಜಾಥಾದಲ್ಲಿ ವಿದ್ಯಾಥರ್ಿನಿಯರು ಇಲಕಲ್ಲ ಸೀರೆ, ಹಣೆತುಂಬ ಸಿಂಧೂರ, ವಿಭೂತಿ, ಮೈಮೇಲೆ ಆಭರಣಗಳನ್ನು ಧರಿಸಿದರೆ, ವಿದ್ಯಾಥರ್ಿಗಳು ಉತ್ತರ ಕನರ್ಾಟಕ ಖ್ಯಾತಿಯ ರೇಷ್ಮೆ ಪಟಗ, ನೆಹರು ಶರ್ಟ, ದಡಿ ದೋತರ, ಹೂರಿ ಮೀಶೆ, ಹಣೆಯ ಮೇಲೆ ವಿಭೂತಿ ತೊಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ, ಮನೆ ಮನೆಗೆ ತೆರಳಿ ಮತದಾನದ ಜಾಗೃತಿ ಮೂಡಿಸಿದರು.
ಅಲ್ಲದೇ ಇತರೆ ವಿದ್ಯಾಥರ್ಿಗಳು ಇವರಿಗೆ ಸಾಥ ನೀಡಿ ಜನರಲ್ಲಿ ಮತದಾನದ ತಿಳುವಳಿಕೆ ನೀಡುವ ಘೋಷಣೆಗಳ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾಥರ್ಿ, ವಿದ್ಯಾಥರ್ಿನಿಯರು ಸತಿ ಪತಿಯರಂತೆ ಜೋಡಿಯಾಗಿ ಬಂದು ಕ್ಯಾಟ್ವಾಕ್ ಮಾಡಿದ್ದು, ಎಲ್ಲರ ಗಮನ ಸೆಳೆದರು.
ಜಾಥಾದಲ್ಲಿ ತೋಟಗಾರಿಕೆ ವಿವಿಯ ಡೀನ್ ವಿದ್ಯಾಥರ್ಿ ಕಲ್ಯಾಣ ವಿಭಾಗದ ಡಾ.ಎಸ್.ಐ.ಅಥಣಿ, ಡೀನ್ ಡಾ.ಎಚ್.ಬಿ.ಪಾಟೀಲ, ಅನಿತಾ, ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ಡಾ.ವಸಂತ ಗಾಣಿಗೇರ, ಗ್ರಾಮದ ಮುಖಂಡರಾದ ಕೆ.ಟಿ.ಪಾಟೀಲ, ರಾಜಕುಮಾರ, ರಾಘವೇಂದ್ರ, ಕೃಷ್ಣಪ್ಪನವರ, ಎನ್.ಆರ್.ಹಾದಿಮನಿ, ಎಂ.ಬಿ.ಪತ್ತಾರ ಸೇರಿದಂತೆ ಗ್ರಾಮದ ಜನತೆ ಪಾಲ್ಗೊಂಡಿದ್ದರು.