ಕುಡಿತಿನಿ, ಕೊಟ್ಟೂರು ಪಟ್ಟಣ ಪಂಚಾಯ್ತಿಗಳಿಗೆ ಶೇ.72.17 ರಷ್ಟು ಮತದಾನ

ಲೋಕದರ್ಶನ ವರದಿ

ಬಳ್ಳಾರಿ01: ಜಿಲ್ಲೆಯ ಎರಡು ನಗರ ಸ್ಥಳೀಯ ಸಂಸ್ಥೆಗಳಾದ ಕುಡಿತಿನಿ,ಕೊಟ್ಟೂರು ಪಟ್ಟಣ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಶುಕ್ರವಾರ ಸುಸೂತ್ರವಾಗಿ ಮತದಾನ ನಡೆಯಿತು. ಸಂಜೆ 5ರವರೆಗೆ ಶೇ.72.17ರಷ್ಟು ಮತದಾನವಾಗಿದ್ದು, ಅಭ್ಯಥರ್ಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದ್ದು, ಸೆ.03ರಂದು ಹಣೆಬರಹ ನಿಧರ್ಾರವಾಗಲಿದೆ. ಬೆಳಗ್ಗೆ 9ರವರೆಗೆ ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಮಾಡುವ ಪ್ರಕ್ರಿಯೆ ಸ್ವಲ್ಪ ಮಂದಗತಿಯಲ್ಲಿತ್ತು. 9ರ ನಂತರ ಮತದಾನ ಪ್ರಕ್ರಿಯೆ ಚುರುಕು ಪಡೆಯಿತು. 19 ಸ್ಥಾನಗಳ ಹೊಂದಿರುವ ಕುಡಿತಿನಿ ಪಟ್ಟಣ ಪಂಚಾಯಿತಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಜನರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ಶೇ.75.38 ಇಲ್ಲಿ ಮತದಾನವಾಗಿದೆ 49 ಜನರು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

  ಈ ಕುಡಿತಿನಿ ಪಟ್ಟಣ ಪಂಚಾಯ್ತಿ ಮತದಾನ ಪ್ರಕ್ರಿಯೆಯಾಗಿ 19 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಅವುಗೆಳೆಲ್ಲವು ಸೂಕ್ಷ್ಮವಾಗಿರುವ ಹಿನ್ನೆಲೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.  20 ಸ್ಥಾನ ಹೊಂದಿರುವ ಕೊಟ್ಟೂರು ಪಟ್ಟಣ ಪಂಚಾಯ್ತಿಗೆ ಶೇ.70.33 ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ. ಇಲ್ಲಿ 55 ಜನರು ಅಂತಿಮ ಕಣದಲ್ಲಿಳಿದಿದ್ದರು. 20 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 5 ಹೆಚ್ಚುವರಿ ಮತಗಟ್ಟೆಗಳ ವ್ಯವಸ್ಥೆ ಸಹ ಇಲ್ಲಿ ಮಾಡಲಾಗಿತ್ತು. ಇಲ್ಲಿ 9 ಸೂಕ್ಷ್ಮ ಮತ್ತು 06 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅವುಗಳಿಗೆ ಹೆಚ್ಚಿನ ಭದ್ರತೆಯನ್ನು ಜಿಲ್ಲಾಡಳಿತ ಕಲ್ಪಿಸಿತ್ತು.

ನಗರ ಸ್ಥಳೀಯ ಚುನಾವಣೆಯನ್ನು ಮುಕ್ತ, ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಸಕಲಸಿದ್ಧತೆಗಳನ್ನು ಮಾಡಿಕೊಂಡ ಪರಿಣಾಮ ಯಾವುದೇ ರೀತಿಯ ಗಲಾಟೆಗಳಿಲ್ಲದೆ ಅತ್ಯಂತ ಸೂಸುತ್ರವಾಗಿ ಮತದಾನ ನಡೆದಿದೆ. ಕುಡಿತಿನಿ ಮತ್ತು ಕೊಟ್ಟೂರು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಸುಗಮವಾಗಿ ನಡೆಸಲು 4 ಜನ ಚುನಾವಣಾಧಿಕಾರಿಗಳು ಮತ್ತು 4 ಜನ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. 4 ಜನ ಸೆಕ್ಟರ್ ಅಧಿಕಾರಿಗಳನ್ನು ಹಾಗೂ 4 ಜನ ವೆಚ್ಚದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. 

  ಚುನಾವಣಾ ವಿಶೇಷ ವೀಕ್ಷಕರಾಗಿ ನಿಯೋಜನೆಯಾದ ಕೃಷಿ ಮಾರುಕಟ್ಟೆ ನಿದರ್ೇಶಕ ಐಎಎಸ್ ಅಧಿಕಾರಿ ಎಂ.ಬಿ.ರಾಜೇಶಗೌಡ, ಸಾಮಾನ್ಯ ವೀಕ್ಷಕರಾದ ಕೃಷಿ ಇಲಾಖೆ ಜಂಟಿ ನಿದರ್ೇಶಕಿ ಬಿ.ಶೋಭಾ ಅವರು ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಿದರು. ತಾಲೂಕು ಕೇಂದ್ರ ಸ್ಥಳಗಳಲ್ಲಿ ಸೆ.03ರಂದು ಬೆಳಗ್ಗೆ 8ರಿಂದ ಮತ ಏಣಿಕೆ ನಡೆಯಲಿದೆ.