ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ

ಲೋಕದರ್ಶನವರದಿ

ಶಿಗ್ಗಾವಿ 28: ಹದಿನೆಂಟು ವರ್ಷ ವಯಸ್ಸಿನ ಪ್ರತಿಯೊಬ್ಬ ಪ್ರಜೆಯೂ ಮತದಾನದ ಹಕ್ಕನ್ನು ಪಡೆಯಬೇಕು ಮತ್ತು ಕಡ್ಡಾಯವಾಗಿ ಮತದಾನ ಮಾಡಬೇಕು ಅಂದಾಗ ಮಾತ್ರ ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲಬರುತ್ತದೆ ಹಾಗೂ ದೇಶದ ಸಾರ್ವಭೌಮತ್ವಕ್ಕೆ ಘನತೆ ಬರುತ್ತದೆ ಎಂದು ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು. 

     ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ಏರ್ಪಡಿಸಿದ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗ ಮೊಬೈಲ್ ಆ್ಯಪ್ ಮೂಲಕ ಇಡಿ ಮತದಾರರ ಪಟ್ಟಿಯನ್ನು ಕೈ ಬೆರಳ ತುದಿಯಲ್ಲಿ ತಂದಿದೆ ಈ ಸುವಣರ್ಾವಕಾಶವನ್ನು ಎಲ್ಲರೂ ಬಳಸಿಕೊಂಡು ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರನ್ನು ಪರಿಶೀಸಿಕೊಳ್ಳಬೇಕು ಎಂದು ಹೇಳಿದರಲ್ಲದೆ ಅ.15 ರವರೆಗೆ ಇರುವ ಈ ಅವಕಾಶವನ್ನು ಬಳಸಿಕೊಂಡು ಎಲ್ಲಿಯೂ ಅಲೆದಾಡದೆ ತಮ್ಮ ಮೋಬೈಲ್ ನಲ್ಲಿಯೇ ತಮ್ಮ ಹೆಸರನ್ನು ಸೇರ್ಪಡೆ ಮಾಡುವುದು, ತೆಗೆದು ಹಾಕುವುದು, ತಿದ್ದುಪಡಿ ಮಾಡುವುದು ಹಾಗೂ ಪರಿಶೀಲನೆ ಮಾಡುವುದು ಮಾಡಬಹುದಾಗಿದೆ ಎಂದು ಹೇಳಿದರು

 ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಕೆ ಬಸಣ್ಣ ಮೊಬೈಲ್ ಆ್ಯಪ್ ಬಗ್ಗೆ ಮಾಹಿತಿ ನೀಡಿ ಅದನ್ನು ಹೇಗೆ ಬಳಸಬೇಕೆಂಬುದನ್ನು ಸಮಗ್ರವಾಗಿ ತಿಳಿಸಿಕೊಟ್ಟರು.

       ಈ ಸಂದರ್ಭದಲ್ಲಿ ಪ್ರೊ. ಎಂ ಎಸ್ ಕುರಂದವಾಡ, ಪ್ರೊ. ಕೆ ಸಿ ಹೂಗಾರ, ಪ್ರೊ. ಸುಮಿತ್ರಾ ರಾಮಾಪೂರಮಠ, ಪ್ರೊ. ಅನ್ನಪೂರ್ಣ ಅಂಕಲಕೋಟಿ, ಪ್ರೊ. ಉಮೇಶ ತಳವಾರ ಮುಂತಾದವರು ಇದ್ದರು ಡಾ. ಬರದೆಲಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.