ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಉತ್ತಮ ಕಾರ್ಯ


ಗದಗ 13: ಜಿಲ್ಲಾಡಳಿತ ಹಾಗೂ ತಹಸೀಲ್ದಾರ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತಂತೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮತದಾರ ಪಟ್ಟಿ ಪರಿಷ್ಕರಣೆ ವೀಕ್ಷಕ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.

ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಮತದಾರ ಪಟ್ಟಿ ಪರಿಷ್ಕರಣೆ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಜನನ ಹಾಗೂ ಮರಣದ ವಾರ್ಷಿಕ ಸರಾಸರಿ ಮೂಲವಾಗಿಟ್ಟುಕೊಂಡು ಮತದಾರ ಪಟ್ಟಿ ಸೇರ್ಪಡೆ ಹಾಗೂ ಹೆಸರು ಕಡಿಮೆ ಮಾಡುವ ಅಂಕಿ ಅಂಶಗಳನ್ನು ನಿಖರವಾಗಿ ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಬೂತ್ ಪ್ರತಿನಿಧಿಗಳ ಸಹಕಾರದೊಂದಿಗೆ ಖಚಿತ ಮಾಹಿತಿ ಪಡೆಯಬೇಕು ಎಂದು ಕಳಸದ ಹೇಳಿದರು.

ಈಗಾಗಲೇ 2019ರ ಲೋಕಸಭಾ ಚುನಾವಣೆಯಲ್ಲಿ ವಿಸ್ತ್ರತ ಮತದಾರ ನೋಂದಣಿ ಕಾರ್ಯ ನಡೆದದ್ದು, 01ರ ಅರ್ಹತಾ ದಿನಾಂಕದಂದು ಮತದಾರರಾಗುವ ಅವಕಾಶವಿರುವ ಎಲ್ಲ ಯುವಕರು ಮತದಾರ ಪಟ್ಟಿಯಲ್ಲಿರುವಂತೆ ಅವರ ಪಾಲಕರು, ಕಾಲೇಜು ಪ್ರಾಚಾರ್ಯರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಬೂತ್ಗಳಲ್ಲಿ ಆಸಕ್ತಿ ವಹಿಸಿ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಲು ಶಿವಯೋಗಿ ಕಳಸದ ಮನವಿ ಮಾಡಿದರು.

ಭಾರತ ಚುನಾವಣಾ ಆಯೋಗದ ನಿದೇರ್ಶಶನದಂತೆ ಗದಗ ಜಿಲ್ಲೆಯಲ್ಲಿ ಜರುಗಿದ ವಿಧಾನಸಭಾ ಮತದಾರ ಪಟ್ಟಿ ವಿಶಿಷ್ಟ ಪರಿಷ್ಕರಣೆ ಅವಧಿಯಲ್ಲಿ ಡಿ.15ರ ಅಂತ್ಯಕ್ಕೆ 18,077 ಮತದಾರರು ಸೇರ್ಪಡೆಯಾಗಿದ್ದು, 8,304 ಮತದಾರರ ಹೆಸರನ್ನು ಕಡಿಮೆ ಮಾಡಲಾಗಿದೆ. 2019ರ ಜನವರಿ 16ರಂದು ಇದ್ದ 8,43,907 ಮತದಾರ ಸಂಖ್ಯೆ ಈಗ 8,53,680ರಷ್ಟು ಆಗಿದೆ. ನಿವ್ವಳ 9,773 ಮತದಾರ ಸಂಖ್ಯೆ ಹೆಚ್ಚಾಗಿದೆ. ವಿಶೇಷ ಪರಿಷ್ಕರಣೆ ಕರಡು ಮತದಾರ ಪಟ್ಟಿ ಪ್ರಕಟವಾದ ನಂತರ ಜಿಲ್ಲೆಯಲ್ಲಿ 9575 ಅಜರ್ಿಗಳನ್ನು ಹೊಸದಾಗಿ ಹೆಸರು ಸೇರ್ಪಡೆಗೆ, ಹೆಸರು ತೆಗೆದು ಹಾಕಲು 7015, ತಿದ್ದುಪಡಿಗಾಗಿ 4522 ಹಾಗೂ ಕ್ಷೇತ್ರದಲ್ಲಿ ಮತಗಟ್ಟೆ ವರ್ಗಾವಣೆಗೆ 1959 ಅಜರ್ಿಗಳು ಸೇರಿ ಒಟ್ಟು 23,071 ಅಜರ್ಿಗಳು ಸ್ವೀಕೃತವಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ವಿಶೇಷ ಪರಿಷ್ಕರಣೆ ಮಿಂಚಿನ ನೋಂದಣಿ ಅವಧಿಯಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಯಿತು. ಜ.25ರಂದು ಮತದಾರ ದಿವಸ ಆಚರಣೆ ಕುರಿತಂತೆ ವಿವಿಧ ಸ್ಪರ್ಧೆ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದಲ್ಲದೇ, ಯುವ ಮತದಾರರಿಗೆ ಎಪಿಕ್ ಕಾರ್ಡ್  ವಿತರಿಸಲಾಗುವುದು ಎಂದು ಜಿ.ಪಂ. ಸಿಇಒ ಡಾ.ಆನಂದ್.ಕೆ ತಿಳಿಸಿದರು.

ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರರು, ಬಿಜೆಪಿ ಮುಖಂಡ ರಾಜು ಕುರುಡಗಿ, ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.