ನರಗುಂದ ತಹಸೀಲ್ದಾರ ಕಚೇರಿಗೆ ಮತದಾರ ಪಟ್ಟಿ ವೀಕ್ಷಕರ ಭೇಟಿ


ಗದಗ 13: ಗದಗ ಜಿಲ್ಲೆಯ ಮತದಾರ ಪಟ್ಟಿ ಪರಿಶೀಲನೆ ಚುನಾವಣಾ ಆಯೋಗದ ವೀಕ್ಷಕ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿದರ್ೇಶಕ ಶಿವಯೋಗಿ ಕಳಸದ ಅವರು ನರಗುಂದ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ಪರಿಶೀಲನೆ ನಡೆಸಿದರು.

ನರಗುಂದ ತಹಸೀಲ್ದಾರ ಮಹೇಂದ್ರ ಅವರು ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕರಡು ಮತದಾರ ಪಟ್ಟಿ ಪ್ರಕಟಣೆ ಡಿ. 16ರಂದು 93,358 ಮಹಿಳೆಯರು, 96,138 ಪುರುಷರು ಹಾಗೂ ಇತರೆ ಸೇರಿದಂತೆ ಒಟ್ಟು 1,89.503 ಮತದಾರರಿದ್ದು 219 ಮತಗಟ್ಟೆಗಳಿವೆ ಎಂದು ತಿಳಿಸಿದರು. 2019ರ ಜ. 16ರಿಂದ ಡಿ. 15ರವರೆಗೆ 3252 ಹೊಸ ಹೆಸರು ಸೇರ್ಪಡೆಯಾಗಿದ್ದು, 1472 ಹೆಸರು ಕಡಿಮೆ ಮಾಡಲಾಗಿದೆ. ನಿವ್ವಳ 2060 ಮತದಾರ ಹೆಸರುಗಳು ಪಟ್ಟಿಗೆ ಸೇರ್ಪಡೆಯಾಗಿವೆ. ಮತದಾರರ ಕರಡು ಪ್ರತಿ ಪ್ರಕಟಣೆ ನಂತರ ಹೆಸರು ಸೇರ್ಪಡೆಗೆ 2678, ಹೆಸರು ತೆಗೆದು ಹಾಕಲು 933, ತಿದ್ದುಪಡಿಗೆ 748 ಹಾಗೂ ಮತಗಟ್ಟೆ ವರ್ಗಾವಣೆಗೆ 407 ಅರ್ಜಿಗಳು ಸ್ವೀಕೃತವಾಗಿವೆ. ಯುವಕರ ಮುಂದಿನ ನೋಂದಣಿ ಅವಧಿಯಲ್ಲಿ ಹೆಸರು ಸದೇರ್ಪಡೆಗೆ 1074, ಹೆಸರು ಕಡಿಮೆ ಮಾಡಲು 423, ತಿದ್ದುಪಡಿಗೆ 299 ಹಾಗೂ ಮತಗಟ್ಟೆ ವರ್ಗಾವಣೆಗೆ 177 ಅಜರ್ಿಗಳನ್ನು ಸ್ವೀಕರಿಸಲಾಗಿದೆ ಎಂದು ತಹಸೀಲ್ದಾರ ಮಹೇಂದ್ರ ಮಾಹಿತಿ ನೀಡಿದರು.

ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶೀಘ್ರ ವಿಲೇವಾರಿ ಜೊತೆಗೆ ಬೇರೆ ಬೇರೆ ಮತಪೆಟ್ಟಿಗೆಯಲ್ಲಿ ಒಂದೇ ಹೆಸರಿರುವ 353 ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ಶಿವಯೋಗಿ ಕಳಸದ ಸೂಚಿಸಿದರು. ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಕಂದಾಯ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು.