ಗದಗ 04: ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರ ಪಟ್ಟಿ ಪರಿಷ್ಕರಣಾ ಕಾರ್ಯ ಪರಿಶೀಲನೆ ಕುರಿತಂತೆ ನಭಾಪೂರ ಹಾಗೂ ಕಬಲಾಯಕಟ್ಟಿ ತಾಂಡಾಗಳಿಗೆ ಭೇಡಿ ನೀಡಿ ಪರಿಶೀಲಿಸಿದರು. ಗದಗ ತಹಶೀಲ್ದಾರ ಶ್ರೀನಿವಾಸಮೂತರ್ಿ ಹಾಗೂ ಮತಗಟ್ಟೆ ಅಧಿಕಾರಿ ಸಿಬ್ಬಂದಿಗಳು ಜೊತೆಗಿದ್ದರು.
ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿ ಪರಿಷ್ಕರಣೆ ಡಿಸೆಂಬರ್ 20 ರವರೆಗೆ ನಡೆಯುತ್ತಿದೆ. ಈಗಾಗಲೇ ನವೆಂಬರ್ 20 ಹಾಗೂ ತದನಂತರ ವಿಶೇಷ ಅವಧಿಯಾದ ನವೆಂಬರ್ 23 ರಿಂದ 25 ರ ಅವಧಿಯಲ್ಲಿ 1-1-2019 ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಅಥವಾ ಈವರೆಗೆ ಹೆಸರು ಸೇರಿಸದ ಅರ್ಹ ಮತದಾರರು ಮತದಾರ ಪಟ್ಟಿಯಲ್ಲಿ ಸೇರಿಕೊಳ್ಳಲು ನಿಗದಿತ ಅಜರ್ಿ ನಮೂನೆಗಳನ್ನು ದಾಖಲೆ ಸಹಿತ ನೀಡಲು ಅವಕಾಶ ನೀಡಲಾಗಿತ್ತು. ಜೊತೆಗೆ ಮತದಾರ ಪಟ್ಟಿಯಲ್ಲಿ ವಿವಿಧ ಕಾರ್ಯಗಳಿಂದ ಹೆಸರು ಕಡಿಮೆ ಅಥವಾ ವಿಳಾಸ ಬದಲಾವಣೆ ದೋಷಗಳ ನಿವಾರಣೆಗೆ ಕೂಡ ಅಜರ್ಿಗಳನ್ನು ಸ್ವೀಕರಿಸಲಾಗಿತ್ತು. ಈಗ ಅಜರ್ಿಗಳ ಪರಿಶೀಲನೆ ಕಾರ್ಯ ನಡೆದಿದ್ದು ಅಂತಿಮವಾಗಿ 2019 ರ ಜನೆವರಿ 4 ರಂದು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಮತದಾರ ಯಾದಿ ಪ್ರಕಟವಾಗಲಿದೆ.