ಮತದಾರರ ಪಟ್ಟಿ ಪರಿಷ್ಕರಣೆ : ಜಿಲ್ಲೆಯಲ್ಲಿ 3722034 ಮತದಾರರು

ಬೆಳಗಾವಿ 16: ಭಾರತ ಚುನಾವಣೆ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಆದೇಶದನ್ವಯ ಜಿಲ್ಲೆಯಲ್ಲಿ 2018 ರ ಅಕ್ಟೋಬರ 10 ರಿಂದ ನವೆಂಬರ 25 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಒಟ್ಟು 37,22,034 ಮತದಾರರನ್ನು  ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜ.16) ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳ ಭಾವಚಿತ್ರವಿರುವ ಮತದಾರರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿ ಅವರು ಮಾತನಾಡಿದರು. 

     ಪುರುಷ ಮತದಾರರ ಸಂಖ್ಯೆ 18,87,283 ಹಾಗೂ ಮಹಿಳಾ ಮತದಾರರ ಸಂಖ್ಯೆ 18,34,751 ಇದ್ದು ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತ 972 ಇರುತ್ತದೆ. ಮುಖ್ಯ ಚುನವಣಾಧಿಕಾರಿಗಳ ನಿದರ್ೇಶನದಂತೆ ಗ್ರಾಮಿಣ ಪ್ರದೇಶದಲ್ಲಿ 1300 ಹಾಗೂ ನಗರ ಪ್ರದೇಶಗಳಲ್ಲಿ 1400 ಮತದಾರರಕ್ಕಿಂತ ಹೆಚ್ಚಿಗಿರುವ ಮತಗಟ್ಟೆಗಳನ್ನು ಬೇರ್ಪಡಿಸಿ ಹೊಸ ಮತಗಟ್ಟೆಯನ್ನಾಗಿ ಪರಿವತರ್ಿಸುವ ಕಾರ್ಯ ಜರುಗಿಸಲಾಗಿರುತ್ತದೆ.

ಜಿಲ್ಲೆಯಲ್ಲಿ ಮತಗಟ್ಟೆಗಳ ರ್ಯಾಶನಲೈಜೇಶನ್ ಪೂರ್ವ 4408 ಮತಗಟ್ಟೆಗಳಿದ್ದು, ರ್ಯಾಶನಲೈಜೇಶನ್ ನಂತರ 4334 ಮತಗಟ್ಟೆಗಳಾಗಿರತ್ತವೆ. ಒಟ್ಟು 26 ಮತಗಟ್ಟೆಗಳು ಹೊಸದಾಗಿ ರಚಿಸಲ್ಪಟ್ಟಿವೆ ಎಂದು ತಿಳಿಸಿದರು.  

  ಮತದಾರರ ಪಟ್ಟಿ ಪರಿಷ್ಕರಣೆ ಸಂಧರ್ಭದಲ್ಲಿ ಒಟ್ಟು 66,901 ಮತದಾರರು ಹೊಸದಾಗಿ ಸೇರ್ಪಡೆಗೊಂಡವರ ಸಂಖ್ಯೆಯಾಗಿರುತ್ತದೆ, ಖಾಯಂ ಆಗಿ ಸ್ಥಳಾಂತರಗೊಂಡಂತಹ 1600 ಮತದಾರರನ್ನು ಕೈಬಿಡಲಾಗಿದೆ. ಇದು ಅಂತಿಮ ಮತದಾರರ ಪಟ್ಟಿಯಾಗಿದ್ದರೂ ಕೂಡಾ ನಾಮಪತ್ರ ಸಲ್ಲಿಕೆಯ ಕೊನೆಯ ಹಂತದವರೆಗೆ ಮತದಾರರ ಹೆಸರು ಸೇರಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಹೇಳಿದರು.

  ಮತದಾರರಿಗೆ ಮಾಹಿತಿ ನೀಡಲು ಉಚಿತ ಸಹಾಯವಾಣಿ ಸಂಖ್ಯೆ 1950 ಗೆ ಇಂದಿನಿಂದ ಚಾಲನೆ ನೀಡಲಾಗಿದ್ದು, ಈ ನಂಬರಗೆ ಸಂಬಂಧಪಟ್ಟ ಜಿಲ್ಲೆಯ ಮತದಾರರು ತಮ್ಮ ಜಿಲ್ಲೆಯ ಪಿನ್ಕೋಡ್ ಸಂಖ್ಯೆ ಬಳಸಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿರುತ್ತದೆ.   [ಉದಾ. ಬೆಳಗಾವಿ ಜಿಲ್ಲೆಯವರು 08311950 ಈ ಟೈಪ್ ಮಾಡಿ ಕೆರೆ ಮಾಡಬಹುದು] ಹಾಗೂ 8277816154 ಮೊಬೈಲ್ ಸಂಖ್ಯೆಗೆ ಎಸ್.ಎಮ್.ಎಸ್. ಮುಖಾಂತರ ಚುನಾವಣೆಗೆ ಸಂಬಂಧಿಸಿದ ದೂರು ಸಲ್ಲಿಸಬಹುದಾಗಿರುತ್ತದೆ ಎಂದು ಮಾಹಿತಿ ನೀಡಿದರು. 

ಜಿಲ್ಲೆಯಲ್ಲಿ 2,200 ಮತದಾರರನ್ನು ಬಿಟ್ಟರೆ ಉಳಿದೆಲ್ಲ ಮತದಾರರ ಭಾವಚಿತ್ರಗಳು ಮತದಾರರ ಪಟ್ಟಿಯಲ್ಲಿ ಲಭ್ಯವಾಗಿರುತ್ತವೆ.  ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸುವ ಸಂದರ್ಭದಲ್ಲಿ ಮತದಾರರ ಚೀಟಿ ಕೊಡುವ ವ್ಯವಸ್ಥೆ ಕೂಡಾ ಮಾಡಲಾಗುವದು ಎಂದು ಹೇಳಿದರು. 

  ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಬಿ ಬೂದೆಪ್ಪ ಉಪಸ್ಥಿತರಿದ್ದರು.