ಬಾಗಲಕೋಟೆ: ಭಾರತ ಚುನಾವಣಾ ಆಯೋಗದ ಆದೇಶದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ಮತದಾರ ಪಟ್ಟಿ ಪರಿಶೀಲನೆಗಾಗಿ ಅಸೆಂಬ್ಲಿ ಲೆವೆಲ್ ಮಾಸ್ಟರ ಟ್ರೈನರ್ಸ್ಗಳಿಗೆ ಶುಕ್ರವಾರ ತರಬೇತಿ ಕಾಯರ್ಾಗಾರ ನಡೆಯಿತು.
ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡ ತರಬೇತಿ ಕಾಯರ್ಾಗಾರವನ್ನು ಅರಪ ಜಿಲ್ಲಾಧಿಕಾರಿಗಳಾದ ದುಗರ್ೇಶ ರುದ್ರಾಕ್ಷಿ ಉದ್ಘಾಟಿಸಿ ಮಾತನಾಡಿದ ಅವರು ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯದ ಬಗ್ಗೆ ಸಂಪೂರ್ಣವಾಗಿ ತರಬೇತಿ ಪಡೆದುಕೊಂಡು ಬಿ.ಎಲ್.ಓಗಳಿಗೆ ತರಬೇತಿ ನೀಡಬೇಕು.
ನೂರಕ್ಕೆ ನೂರರಷ್ಟು ಮತದಾರರ ಪಟ್ಟಿ ಪರಿಷ್ಕರಣೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಎಎಲ್ಎಂಟಿಗಳು ಬಿಎಲ್ಓಗಳಿಗೆ ಸಂಪೂರ್ಣ ಪರಿಶೀಲನಾ ತರಬೇತಿ ನೀಡಲು ಸಜ್ಜಾಗಬೇಕು ಎಂದರು.
ಯಾವುದೇ ತಿದ್ದು ಪಡಿ ಇದಲ್ಲಿ ಭಾರತೀಯ ಪಾಸಪೋರ್ಟ, ಚಾಲನಾ ಪರವಾಣಿಗೆ, ಆಧಾರ ಪತ್ರ, ಪಡಿತರ ಚೀಟಿ, ಸರಕಾರಿ/ಅರೆ ಸರಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ ಪಾಸ್ ಬುಕ್, ರೈತರ ಗುರುತಿನ ಚೀಟಿ, ಚುನಾವನಾ ಆಯೋಗ ಅನುಮೋದಿಸಿರುವ ಯಾವುದೇ ಇತರೆ ದಾಖಲೆಗಳನ್ನು ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದರು.
ಬೂತ್ ಮಟ್ಟದ ಅಧಿಕಾರಿಗಳು ಸಪ್ಟಂಬರ 15 ರವರೆಗ ಪ್ರತಿ ಮನೆ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿ ಕುಟುಂಬದ ಸದಸ್ಯರ ವಿವರಗಳನ್ನು ಪರಿಶೀಲನೆ ಮಾಡಲಿದ್ದಾರೆ. ಅದಕ್ಕಾಗಿ ಸಾರ್ವಜನಿಕರು ಸಹಕರಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ತರಬೇತುದಾರರಾದ ಸಂಪತ್ ಲಮಾಣಿ ಅವರು ಮೊಬೈಲ್ ಆಫ್ ಬಳಸುವ ಮೂಲಕ ಮತದಾರರ ಪಟ್ಟಿ ಪರಿಶೀಲನೆ ಕಾರ್ಯವನ್ನು ವಿವವರವಾಗಿ ತಿಳಿಸಿಕೊಟ್ಟರು.
ಚುನಾವಣಾ ಆಯೋಗವು ಮತದಾರ ಪಟ್ಟಿ ಪರಿಶೀಲನೆಗಾಗಿಯೇ ಮೊಬೈಲ್ ಆಪ್ಗಳನ್ನು ರೂಪಿಸಿದ್ದು, ಇವಿಬಿ ಮತ್ತು ಎಸ್ಎಸ್ಆರ್ಗಳ ಮೊಬೈಲ್ ಆಪ್ಗಳ ಮೂಲಕ ಹೇಗೆ ಪರಿಶೀಲಿಸಬೇಕು ಎಂಬುದನ್ನು ತಿಳಿಸಿಕೊಟ್ಟರು.
ಇವಿಪಿ ಆಫ್ ಮೂಲಕ ಮತದಾರರ ಪಟ್ಟಿ ಇನ್ನಷ್ಟು ಉತ್ತಮ ಪಡಿಸಬಹುದಾಗಿದ್ದು ಜೊತೆಗೆ ಎನ್ವ್ಹಿಎಸ್ಪಿ ಆಫ್ನ ಮೂಲಕ ಮತದಾರರ ನೋಂದಣಿ ಮಾಡಿಕೊಳ್ಳಬಹುದು. ಅದಕ್ಕಾಗಿ ಮತದಾರರ ಪಟ್ಟಿಯಲ್ಲಿ ಸರಿಯಾಗಿ ನೋಂದಣಿಯಾಗದಿದ್ದಲ್ಲಿ ಕುಟುಂಬ ಸದಸ್ಯರುಗಳ ಹೆಸರುಗಳನ್ನು ತಿತಿತಿ.ಟಿತಠಿ.ಟಿ ಮೂಲಕ ಮತ್ತು ಮತದಾರರ ಸಹಾಯವಾಣಿ ಮುಬೈಲ್ ಆಪ್, 1950 ಮತದಾರರ ಸಹಾಯವಾಣಿಗೆ ಕರೆಮಾಡುವ ಮೂಲಕ, ಸಾಮಾನ್ಯ ಸೇವಾ ಕೇಂದ್ರ, ಮತದಾರ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ, ಅಟಲ್ ಜನಸೇಹ್ನಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಮತಗಟ್ಟೆ ಅಧಿಕಾರಿಗಳನ್ನು ಕೂಡಾ ಸಂಪಕರ್ಿಸಿ ಮಾಹಿತಿ ಪಡೆಯ ಬಹುದಾದ ಮಾಹಿತಿಯನ್ನು ತರಬೇತಿಯಲ್ಲಿ ತಿಳಿಸಲಾಯಿತು. ತರಬೇತಿ ಕಾಯರ್ಾಗಾರದಲ್ಲಿ 42 ಎಎಲ್ಎಂಟಿಗಳಿಗೆ ತರಬೇತಿ ನೀಡಲಾಯಿತು.