ಗದಗ 25: ಚುನಾವಣೆಗಳು ಬಂದಾಗ ಮನೆಯಲ್ಲಿ ಕುಳಿತು ಕಾಲಹರಣ ಮಾಡದೆ ಮತಗಟ್ಟೆಗೆ ಬಂದು ಮತದಾನ ಮಾಡಿದಾಗ ಮಾತ್ರ ದೇಶವು ಉತ್ತಮ ನಾಯಕತ್ವ ಹೊಂದಲು ಸಾಧ್ಯ. ಇದಕ್ಕೆ ಮತದಾನದ ಕುರಿತು ಎಲ್ಲ ಮತದಾರರು ಸಾಕ್ಷರತೆ ಹೊಂದಿರುವದು ಬಹುಮುಖ್ಯವಾಗಿದೆ ಎಂದು ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಸ್.ಸಂಗ್ರೇಶಿ ನುಡಿದರು.
ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. 1950 ಜನೇವರಿ 25ರಂದು ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿದ್ದು ಇದು ಸಾರ್ವಜನಿಕ ಚುನಾವಣೆ ಸಂದರ್ಭದಲ್ಲಿ 8.5 ಲಕ್ಷ ಮತಗಟ್ಟೆಗಳಲ್ಲಿ ಮತದಾರರು ಸಂವಿಧಾನಾತ್ಮಕವಾದ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿರುವದು ವಿಶ್ವದಲ್ಲೇ ಅಪೂರ್ವ ಸಂಗತಿಯಾಗಿದೆ. ಮತದಾರರಿಗೆ ಅವರ ಹಕ್ಕಿನ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2011ರಿಂದ ಡಿಸೆಂಬರ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಸಾಕ್ಷರ ಮತದಾರರಿಂದ ದೇಶದ ಸರ್ಮೋತಮುಖ ಅಭಿವೃದ್ಧಿಗೆ ಉತ್ತಮ ಆಡಳಿತ ವ್ಯವಸ್ಥೆ ದೊರಕುವದರಿಂದ 18ವರ್ಷ ಪೂರ್ಣಗೊಂಡ ದೇಶದ ಪ್ರತಿಯೊಬ್ಬರು ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾದೀಶರು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ.ಪಲ್ಲೇದ ಅವರು ಮಾತನಾಡಿ ದೇಶದ ಸಂವಿಧಾನ ನಮ್ಮ ಮಾತೃ ಕಾನೂನುವಾಗಿದ್ದು ಅದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಚುನಾವಣಾ ಆಯೋಗದ ವಜ್ರ ಮಹೋತ್ಸ 2011 ರಲ್ಲಿ ಜರುಗಿದ್ದು ಮತದಾರರ ಮತದಾನದ ಪಾವಿತ್ರ್ಯತೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. 29 ರಾಜ್ಯ, 7 ಕೇಂದ್ರಾಡಳಿತ ಪ್ರದೇಶಗಳು, 66,428 ಜಾತಿ ಪಂಗಡಗಳು ಹಾಗೂ 1618 ಭಾಷೆಗಳು ಇರುವ ಭಾರತ ದೇಶ ಒಂದೇ ಸಂವಿಧಾನದಲ್ಲಿ ಆಡಳಿತ ವ್ಯವಸ್ಥೆ ಹೊಂದಿರುವದು ಇಡೀ ವಿಶ್ವದಲ್ಲೇ ಶ್ರೇಷ್ಠತೆ ಆಗಿದೆ. ಈ ವ್ಯವಸ್ಥೆಯನ್ನು ಬಲಗೊಳಿಸಲು ನಾವು ಮತದಾನದ ಕುರಿತು ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ ಮತದಾನದಿಂದ ಯಾರೂ ವಂಚಿತರಾಗಬಾರದು ಎನ್ನುವುದು ಭಾರತ ಚುನಾವಣಾ ಆಯೋಗದ ಮೂಲ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಅರ್ಹತೆ ದಿನದಂದು 18 ವರ್ಷ ಪೂರ್ಣಗೊಳಿಸಿದ ಯುವ ಮತದಾರರು ತಮ್ಮ ಹೆಸರನ್ನು ಆನಲೈನ್ ಮೂಲಕ ಅಥವಾ ಸಮೀಪದ ತಹಶೀಲ್ದಾರ ಕಚೇರಿಗೆ ಅಜರ್ಿ ಹಾಗೂ ದಾಖಲೆಗಳನ್ನು ನೀಡುವ ಮೂಲಕ ತಪ್ಪದೇ ಹೆಸರನ್ನು ನೋಂದಾಯಿಸಬೇಕು. ಮನೆಯಲ್ಲಿ ಹಾಗೂ ವಾಸಿಸುವ ಪ್ರದೇಶಗಳಲ್ಲಿ ಅರ್ಹತೆ ಇದ್ದು ಮತದಾರರ ಪಟ್ಟಿಯಲ್ಲಿ ಹೆಸರು ಇರದವರಿಗೆ ಮಾಹಿತಿ ನೀಡಿ ಅವರ ಹೆಸರನ್ನು ಕೂಡ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಮತದಾರರ ಜಾಗೃತಿ ಅಂಗವಾಗಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ. ಅವರು ಸರ್ವರಿಗೂ ಮತದಾರರ ಪ್ರತಿಜ್ಞೆಯನ್ನು ಬೋಧಿಸಿದರು.
18 ವರ್ಷ ಪೂರ್ಣಗೊಳಿಸಿದ ಯುವ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿಯನ್ನು ಸಮಾರಂಭದಲ್ಲಿ ವಿತರಿಸಲಾಯಿತು. ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಾದ ರತ್ನಾ ಎಂ. ಕುಲಕಣರ್ಿ, ಎಸ್.ಎಚ್.ವಾಲಿಕರ, ಈರಪ್ಪ ಕಳಸನ್ನವರ, ಆರಾಧ್ಯಮಠ, ಮಾರುತಿ ಚಲವಾದಿ ಹಾಗೂ ಅತ್ಯುತ್ತಮ ಮತದಾರರ ಸಾಕ್ಷರತಾ ಸಂಘ ಕಾರ್ಯಕ್ಕಾಗಿ ಸರಕಾರಿ ಹೆಣ್ಣು ಮಕ್ಕಳ ಶಾಲೆ ಬೆಳ್ಳಟ್ಟಿ, ಸರಕಾರಿ ಪದವಿಪೂರ್ವ ಕಾಲೇಜು ಗದಗ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಗದಗ ಇವರಿಗೆ ಸನ್ಮಾನಿಸಲಾಯಿತು.
10ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಯುವ ಮತದಾರರ ಜಾಗೃತಿಗಾಗಿ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತ್ತಕೋತ್ತರ ವಿಭಾಗಗಳಲ್ಲಿ ರಸಪ್ರಶ್ನೆ, ಕನ್ನಡ ಮತ್ತು ಇಂಗ್ಲೀಷ ಪ್ರಬಂಧ ಸ್ಪರ್ಧೆ ಹಾಗೂ ನಾಟಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಜಿ.ಪಂ. ಸಿ.ಇ.ಓ. ಡಾ.ಆನಂದ ಕೆ., ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಉಪವಿಭಾಗಾಧಿಕಾರಿ ಹಾಗೂ ಮತದಾರರ ನೋಂದಣಿ ಅಧಿಕಾರಿ ರಾಯಪ್ಪ ಹುಣಸಗಿ, ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ಶಿಕ್ಷಕ ವೃಂದ ಹಾಗೂ ಬಹುಸಂಖ್ಯೆಯಲ್ಲಿ ಆಗಮಿಸಿದ ವಿಧ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಪಂಚಾಕ್ಷರಿ ಗವಾಯಿ ಸಂಗೀತ ಪಾಠ ಶಾಲೆ ವಿಧ್ಯಾಥರ್ಿಗಳಿಂದ ನಾಡಗೀತೆ ಪ್ರಸ್ತುತವಾಯಿತು, ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.