ವಿರೋಧಿ ಬಣದಿಂದ ಸತ್ತವರ ಹೆಸರಲಿ ಮತ: ಶೀಲವಂತ ಆರೋಪ

ಲೋಕದರ್ಶನವರದಿ

ಗುಳೇದಗುಡ್ಡ14: ಇಲ್ಲಿನ ಪ್ರತಿಷ್ಠಿತ ಲಕ್ಷ್ಮೀ ಸಹಕಾರಿ ಬ್ಯಾಂಕಿನ ನಿದರ್ೇಶಕ ಮಂಡಳಿ ಚುನಾವಣೆಗೆ ಫೆ.16 ರಂದು ಮತದಾನ ನಡೆಯಲಿದ್ದು,  ಬ್ಯಾಂಕಿನ ಕೆಲ ನಿಯಮಗಳ ಪ್ರಕಾರ 863 ಜನರ ಮತದಾನವನ್ನು ರದ್ದು ಪಡಿಸಲಾಗಿತ್ತು. ಆದರೆ ಈ ಬಗ್ಗೆ ನಮ್ಮ ತಂಡದಿಂದ ಉಚ್ಚ ನ್ಯಾಯಾಲಯಕ್ಕೆ ರಿಟ್ ಅಜರ್ಿಸಲ್ಲಿಸಿದ್ದರಿಂದ ನ್ಯಾಯಾಲಯವು 863ಜನರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು. 

    ಅವರು ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, 2209ಜನರಿಗೆ ಚುನಾವಣಾ ಕಮೀಶನರ್ ಅವರು ಮತ ಚಲಾಯಿಸಲು ಹಕ್ಕು ಕೊಟ್ಟಿದ್ದರು, ಮತದಾರರ ಅಭಿಲಾಷೆಯಂತೆ ಮತದಾರರನ್ನು ವಿಂಗಡಿಸಿದ್ದು, ಸಾಧ್ಯವಿರುವ ವರ್ಷದಲ್ಲಿ ಒಂದು ವ್ಯವಹಾರದ ವ್ಯಾಪ್ತಿಗೆ ಬರದವರ ಮನೆಗೆ ತೆರಳಿ, ಅವರ ವಕಾಲತ್ತು ಪಡೆದು ವಿಜಯಕುಮಾರ ಶೀಲವಂತ ಅವರ ಮೂಲಕ ದಾವಾ ಸಲ್ಲಿಸಿದ್ದೇವೋ ವಿರೋಧಿ ಗುಂಪು ಕೂಡಾ ಅಜರ್ಿ ಸಲ್ಲಿಸಿತ್ತು. ಆದರೆ ನಾವು ಸಲ್ಲಿಸಿದ ಪಟ್ಟಿಯಂತೆ ನ್ಯಾಯಾಲಯ ಮಾನ್ಯ ಮಾಡಿ, 863ಜನರಿಗೆ ಮತ ಚಲಾವಣೆಗೆ ಹಕ್ಕು ಕೊಟ್ಟಿದೆ ಎಂದು ಹೇಳಿದರು. 

   ವಿರೋಧಿ ಗುಂಪಿನವರು ಸಲ್ಲಿಸಿದ ಶೇರುದಾರರು ಕೊಟ್ಟಿ ಮೃತರ ಸಹಿ ಧೃಡಪಡಿಸಿ ಸಂಪೂರ್ಣ ಕಾಯ್ದೆ ಬಾಹಿರವೆಂದು ಅಜರ್ಿ ಸಲ್ಲಿಸಿದ ವಕೀಲರಿಗೆ ಸೂಚಿಸಿತು. ಅಲ್ಲದೇ ನೀವು ಸಲ್ಲಿಸಿದ ಅಜರ್ಿ ವಾಪಸ್ ಪಡೆಯಿರಿ ಇಲ್ಲದಿದ್ದರೇ ದಂಡ ಹಾಕಲಾಗುವುದು ಎಂದು ಸೂಚಿಸಿದ್ದರಿಂದ ವಿರೋಧಿ ಗುಂಪಿನವರು ಅಜರ್ಿ ಹಿಂಪಡೆದರು. ವಿರೋಧಿ ಗುಂಪಿನವರು ಸತ್ತವರ ಹೆಸರಿನಲ್ಲಿ ಖೋಟ್ಟಿ ಮತಕ್ಕೆ ಅಜರ್ಿ ಸಲ್ಲಿಸಿದ್ದರು, ಈ ರೀತಿಯ ವಿಕೃತ ವಿಚಾರವಿರಬಾರದು ಎಂದು ಹೇಳಿದರು. 

    ನಾವು ಅಜರ್ಿ ಸಲ್ಲಿಸಿದ 863 ಮತದಾರರಿಗೆ ಕೋಟರ್್ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಒಟ್ಟು 3072ಜನರಿಗೆ ಮತದಾನದ ಅವಕಾಶವಿದ್ದು, ಬ್ಯಾಂಕಿನ ಅಭಿವೃದ್ಧಿಗೆ ನಮ್ಮ ಗುಂಪಿನ 14 ಜನರಿಗೆ ಮತ ನೀಡಿ ಗೆಲ್ಲಿಸುವಂತೆ ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.

   ಈ ಸಂದರ್ಭದಲ್ಲಿ ಕಮಲಕಿಶೋರ  ಮಾಲಪಾಣಿ, ವೀರಣ್ಣ ಕುರಹಟ್ಟಿ, ಗಣೇಶ ಶೀಲವಂತ, ಮುರಗೇಶ ರಾಜನಾಳ, ಸಂಜಯ ಕಾರಕೂನ, ಪರಶು ತಳವಾರ, ಮೃತ್ಯುಂಜಯ ಕರನಂದಿ, ಸಂಗಣ್ಣ ಹುನಗುಂದ , ಪರಶುರಾಮ ಪವಾರ, ಸಿದ್ಧು ಅರಕಾಲಚಿಟ್ಟಿ ಸೇರಿದಂತೆ ಇತರರು ಇದ್ದರು.