ನವದೆಹಲಿ, ಡಿ ೦೭- ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಗತಿಯಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಆಚರಣೆಯನ್ನು ಯಶಸ್ವಿಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ, "ಇಂದು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸುತ್ತಿನ ಮತದಾನವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಈ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ನಾನು ಎಲ್ಲ ಮತದಾರರನ್ನು ಕೋರುತ್ತೇನೆ. ” ಎಂದಿದ್ದಾರೆ
ಜಾರ್ಖಂಡ್‌ನಲ್ಲಿ, ಇಪ್ಪತ್ತು ಸ್ಥಾನಗಳಿಗೆ ಎರಡನೇ ಹಂತದ ಮತದಾನ ಭದ್ರತಾ ವ್ಯವಸ್ಥೆಗಳ ನಡುವೆ ಬೆಳಿಗ್ಗೆ ಏಳು ಗಂಟೆಗೆ ಪ್ರಾರಂಭವಾಯಿತು.
ಬೆಹರಗೋರಾ, ಘಟ್ಶಿಲಾ (ಎಸ್‌ಟಿ), ಪೊಟ್ಕಾ (ಎಸ್‌ಟಿ), ಜುಗ್ಸಲೈ (ಎಸ್‌ಸಿ), ಜಮ್‌ಶೆಡ್ಪುರ ಪೂರ್ವ, ಜಮ್‌ಶೆಡ್ಪುರ ಪಶ್ಚಿಮ, ಸರೈಕೆಲಾ (ಎಸ್‌ಟಿ), ಖರ್ಸವಾನ್ (ಎಸ್‌ಟಿ), ಮಂಜಗಾಂವ್ (ಎಸ್‌ಟಿ), ಜಗನಂತ್‌ಪುರ (ಎಸ್‌ಟಿ), ಮನೋಹರ್‌ಪುರ (ಎಸ್‌ಟಿ), ಚಕರ್ಧರ್‌ಪುರ (ಎಸ್‌ಟಿ), ತಮರ್ (ಎಸ್‌ಟಿ), ಮಂದಾರ್ (ಎಸ್‌ಟಿ), ಟೊರ್ಪಾ (ಎಸ್‌ಟಿ), ಖುಂಟಿ (ಎಸ್‌ಟಿ), ಸಿಸಾಯ್ (ಎಸ್‌ಟಿ), ಸಿಮ್ಡೆಗಾ (ಎಸ್‌ಟಿ) ಮತ್ತು ಕೊಲಿಬೆರಾ (ಎಸ್‌ಟಿ). ಈ ೨೦ ಸ್ಥಾನಗಳು ರಾಂಚಿ ಸಿಮ್ಡೆಗಾ ಖುಂಟಿ ಗುಮ್ಲಾ ಪೂರ್ವ ಸಿಂಗ್‌ಭೂಮ್ ಪಶ್ಚಿಮ ಸಿಂಗ್‌ಭೂಮ್ ಮತ್ತು ಸರೈಕೆಲಾ-ಖರ್ಸವಾನ್ ಸೇರಿದಂತೆ ೭ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿರುವ ಕ್ಷೇತ್ರಗಳಾಗಿವೆ.
ಈ ೨೦ ಸ್ಥಾನಗಳಲ್ಲಿ ೧೮ ಸ್ಥಾನಗಳಲ್ಲಿ ಬೆಳಗ್ಗೆ ೭ ಗಂಟೆಯಿಂದ ೩ ಗಂಟೆಗಳವರೆಗೆ ಮತದಾನ ನಡೆಯಲಿದ್ದು, ನಗರ ಪ್ರದೇಶಗಳಲ್ಲಿರುವ ಮತ್ತು ಎಡಪಂಥೀಯ ಉಗ್ರಗಾಮಿತ್ವದ ನೆರಳುಗಳಿಂದ ಮುಕ್ತವಾಗಿರುವ ಜಮ್ಶೆಡ್ಪುರ ಪೂರ್ವ ಮತ್ತು ಜಮ್ಶೆಡ್ಪುರ ಪಶ್ಚಿಮದಲ್ಲಿ ೭ ಗಂಟೆಗಳಿಂದ ೫ ಗಂಟೆಯವರೆಗೆ ನಡೆಯಲಿದೆ.