ಮದುಮಗನಿಂದ ಮತ ಚಲಾವಣೆ

ರಾಣೇಬೆನ್ನೂರ ಏ.23: ಹಸೆಮಣೆಗೆ ಏರಬೇಕಾಗಿದ್ದ ಮದುಮಗನೊಬ್ಬ ತನ್ನ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದು ಇತರರಿಗೆ ಮಾದರಿಯಾಗಿದ್ದಾನೆ.

   ಇಲ್ಲಿನ ಉಮಾಶಂಕರ ನಗರದ ನಿವಾಸಿ ಪ್ರಸನ್ನ ಮುದಿಗೌಡ್ರ ಎಂಬ ವ್ಯಕ್ತಿಯೇ ಮದುಮಗನಾಗಿದ್ದು ಏ. 24 ರಂದು ಮದುವೆ ನಿಶ್ಚಯವಾಗಿದ್ದು ತನ್ನ ಬಿಡುವಿಲ್ಲದ ವೇಳೆಯ ನಡುವೆಯೂ ಮತದಾನದ ಹಕ್ಕು ಚಲಾಯಿಸಲು ನಿಶ್ಚಯಿಸಿ ಮತ ಚಲಾಯಿಸಿದ್ದಾನೆ. 

   ಇದೇ ಸಂದರ್ಭದಲ್ಲಿ ಚೋಳಪ್ಪ ಕಸವಾಳ, ದೀಪಕ ಹರಪನಹಳ್ಳಿ, ಪ್ರಕಾಶ ಮಣೇಗಾರ, ನಾಗರಾಜ ಬಿದರಿ ಸೇರಿದಂತೆ ಮತ್ತಿತರರು ಆತನಿಗೆ ಶುಭ ಹಾರೈಸಿದ್ದಾರೆ