ಲೋಕದರ್ಶನ ವರದಿ
ಗೋಕಾಕ 27: ಯಡಿಯೂರಪ್ಪನವರ ಅವಧಿಯಲ್ಲಿ ನಡೆದಿರುವಷ್ಟು ಅಭಿವೃದ್ದಿ ಕಾರ್ಯಗಳು ಯಾವ ಸರ್ಕಾರದಲ್ಲಿಯೂ ನಡೆದಿಲ್ಲ. ಬಿಜೆಪಿಯಿಂದ ಮಾತ್ರ ರಾಜ್ಯದ ಸರ್ವಾ೦ಗಿಣ ಅಭಿವೃದ್ದಿ ಸಾಧ್ಯವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಬುಧವಾರದಂದು ಮೇಲ್ಮನಹಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಮತಯಾಚಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಜನಪ್ರೀಯ ಯೋಜನೆಗಳನ್ನು ವಿವರಿಸಿದರು.
ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಜನಪರ ಹಾಗೂ ರೈತ ಪರವಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೈತರು,ಮಹಿಳೆಯರು,ವಿದ್ಯಾರ್ಥಿಗಳ ಹಿತಕ್ಕಾಗಿ ಸಕರ್ಾರ ಯೋಜನೆಗಳನ್ನು ನೀಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸುಭದ್ರ ಆಡಳಿತ ನೀಡಲಿಕ್ಕೆ ಮುಂದಿನ ಮೂರುವರೆ ವರ್ಷ ಸರ್ಕಾರ ನಡೆಸಲಿಕ್ಕೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟು ಅಭಿವೃದ್ದಿಗೆ ಸಹಕಾರ ನೀಡುವಂತೆ ಕೋರಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗುವುದರಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ನಿಜವಾಗಿಯೂ ರಮೇಶ ಜಾರಕಿಹೊಳಿ ಅವರು ಬಿಜೆಪಿ ಧ್ರುವತಾರೆಯಾಗಿದ್ದಾರೆ. ಎಲ್ಲ ಸಮುದಾಯದವರನ್ನು ಪ್ರೀತಿಸುವ ಇವರು ಅಜಾತಶತ್ರು ಆಗಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರಕ್ಕೆ ಇವರೇ ಆಮ್ಲಜನಕದಂತೆ ಕೆಲಸ ಮಾಡುತ್ತಿದ್ದಾರೆ. ನಾನು ಮಂತ್ರಿಯಾಗಿದ್ದು, ಅಷ್ಟೇ ಅಲ್ಲ, ನಮ್ಮ ಸರ್ಕಾರ ನಡೆಯುತ್ತಿರುವುದು ರಮೇಶ ಅವರ ತ್ಯಾಗ ಹಾಗೂ ಕೃಪೆಯಿಂದಾಗಿ. ಡಿ.5ರಂದು ನಡೆಯುವ ಉಪಚುನಾವಣೆಯಲ್ಲಿ ಕಮಲ ಗುರ್ತಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಅಣ್ತಮ್ಮ ಗೊಂದಲ ಮಾಡ್ಕೋಬೇಡಿ: ಒಂದೇ ಕುಟುಂಬದ ಇಬ್ಬರು ಸಹೋದರರು ಈ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದಾರೆ. ಕಳೆದ 20 ವರ್ಷಗಳಿಂದ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾಂಗ್ರೇಸ ಪಕ್ಷದಲ್ಲಿ ಕೆಲಸ ಮಾಡಿ, ಅವರ ದುರಾಡಳಿತಕ್ಕೆ ಬೇಸತ್ತು ರಮೇಶ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿಗೆ ಬಂದು ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಮತದಾರರು ಗೊಂದಲಕ್ಕಿಡಾಗದೇ ಬಿಜೆಪಿಯ ಕಮಲ ಗುರ್ತಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು. ಶಾಸಕ ಹಾಗೂ ಗೋಕಾಕ ಬಿಜೆಪಿ ಉಸ್ತುವಾರಿ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದಲ್ಲಿ ಬಹಳಷ್ಟು ಜನ ಶಾಸಕರಿದ್ದರೂ ಯಡಿಯೂರಪ್ಪ ಅವರನ್ನು ಸಿಎಂ ಮಾಡುವ ಧೈರ್ಯ ತೋರಲಿಲ್ಲ. ಅಂತಹ ಧೈರ್ಯವನ್ನು ರಮೇಶ ಜಾರಕಿಹೊಳಿ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲಿಕ್ಕೆ ಸರ್ಕಾರದಲ್ಲಿ ಸಚಿವಸ್ಥಾನವನ್ನು ಧಿಕ್ಕರಿಸಿ ಸೂಕ್ತ ನಿರ್ಣಯ ತೆಗೆದುಕೊಂಡು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ರಮೇಶ ಜಾರಕಿಹೊಳಿ ಅವರು ಕೆಚ್ಚದೆಯ ನಾಯಕನೆಂದ ಅವರು, ಯಡಿಯೂರಪ್ಪನವರ ಹಾಗೂ ರಮೇಶ ಜಾರಕಿಹೊಳಿ ಅವರ ಮಧ್ಯೆ ಅನೋನ್ಯ ಬಾಂಧವ್ಯವಿದ್ದು ಸರ್ಕಾರ ಪೂರ್ಣಾವಧಿ ನಡೆಸಲು ರಮೇಶ ಜಾರಕಿಹೊಳಿ ಅವರನ್ನು ಆರಿಸಿ ತರುವಂತೆ ಕೋರಿಕೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ|| ವಿಶ್ವನಾಥ ಪಾಟೀಲ, ಹೂವಿನ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಮಲ್ಲಣ್ಣ ಯಾದವಾಡ, ಲಕ್ಷ್ಮಣ ತಪಸಿ, ಗೋವಿಂದ ಕೊಪ್ಪದ, ಶಾಮಾನಂದ ಪೂಜೇರಿ, ಸುಭಾಸ ಪಾಟೀಲ, ನಿಂಗಪ್ಪ ಕುರುಬೇಟ, ಪ್ರೇಮಾ ಭಂಡಾರಿ, ಶಂಕರ ಬಳೋಬಾಳ, ಜಯಾನಂದ ಮಠದ, ಶಿವಲಿಂಗ ಪ್ರಭುನಟ್ಟಿ, ಈರಪ್ಪ ಪ್ರಭುನಟ್ಟಿ, ಕಾಡಪ್ಪ ಹುಚ್ಚೇಲಿ ಮುಂತಾದವರು ಉಪಸ್ಥಿತರಿದ್ದರು. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಎ.ಎಸ್.ಪಾಟೀಲ ಅವರ ನೇತ್ರತ್ವದ ತಂಡ ಶಿವಾಪೂರ(ಕೋ), ನಂದಗಾಂವ, ಖಾನಾಪೂರ, ಮುತ್ನಾಳ,ಸಾವಳಗಿ ಹಾಗೂ ಕೊಣ್ಣೂರ ಪಟ್ಟಣಕ್ಕೆ ತೆರಳಿ ಮತಯಾಚಿಸಿದರು.