ನವದೆಹಲಿ, ಜ 29 : ವಿಶೇಷ ವರ್ಗದ ಮಹಿಳೆಯರಿಗೆ ಗರ್ಭಪಾತದ ಅವಧಿಯ ಮಿತಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸಲು ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ,
ಇದನ್ನು ವೈದ್ಯಕೀಯ ಮುಕ್ತಾಯದ ಗರ್ಭಪಾತ (ಎಂಟಿಪಿ) ನಿಯಮಗಳ ತಿದ್ದುಪಡಿ ಎಂದು ವ್ಯಾಖ್ಯಾನಿಲಾಗಿದ್ದು, 'ದುರ್ಬಲ ಮಹಿಳೆ, ಅತ್ಯಾಚಾರದಿಂದ ಬದುಕುಳಿದವರು, ಮತ್ತು ವಿಶೇಷ ಚೇತನರು, ಅಪ್ರಾಪ್ತ ವಯಸ್ಸಿಗೆ ತಾಯಿಯಾಗುವ ಬಾಲಕಿಯರಿಗೆ ಇದು ಅನ್ವಯವಾಗಲಿದೆ.ಈ ಮೊದಲು ಇದಕ್ಕೆ ಕಾನೂನಿನಲ್ಲಿ ಅವಕಾಶವಿರಲಿಲ್ಲ ಈಗ ನಾಲ್ಕು ವಾರದ ಹೆಚ್ಚನ ಅವಧಿ ನೀಡಲಾಗಿದೆ.
ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್,ಸುದ್ದಿಗಾರರಿಗೆ ಮಾಹಿತಿ ನೀಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವ ಸಂಪುಟವು ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯ್ದೆ (1971) ಗೆ ತಿದ್ದುಪಡಿ ತರಲು 2020 ರ ವೈದ್ಯಕೀಯ (ತಿದ್ದುಪಡಿ) ಮಸೂದೆಗೆ ಅನುಮೋದನೆ ನೀಡಿದೆ ಎಂದು ಹೇಳಿದರು.
ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಅವರು ಹೇಳಿದರು.