ವಾಯ್ಸ್ ಆಪ್ ಉತ್ತರ ಕನರ್ಾಟಕ ಅಡಿಷನ್ ಪೋಸ್ಟರಗಳ ಬಿಡುಗಡೆ

ಲೋಕದರ್ಶನ ವರದಿ

ಬೈಲಹೊಂಗಲ 6: ಕಲೆ, ಸಾಹಿತ್ಯ, ಮನರಂಜನೆ ಎಲ್ಲಾದರೂ ಜೀವಂತವಾಗಿದೆ ಎನ್ನುವುದಾದರೆ ಅದು ಉತ್ತರ ಕನರ್ಾಟಕದಲ್ಲಿ ಮಾತ್ರ ಎನ್ನುವುದನ್ನು ಎಲ್ಲರು ಮನಗಾಣಬೇಕು ಎಂದು ಚಿತ್ರನಟ ಶಿವರಂಜನ ಬೋಳನ್ನವರ ಹೇಳಿದರು.

    ಪಟ್ಟಣದ ಕೆಎಲ್ಇ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಬುಡರಕಟ್ಟಿ ವತಿಯಿಂದ ಉತ್ತರ ಕನರ್ಾಟಕದ ಪ್ರತಿಭೆಗಳಿಗೋಸ್ಕರ ಹಮ್ಮಿಕೊಂಡಿರುವ ವಾಯ್ಸ್ ಆಫ್ ಉತ್ತರ ಕನರ್ಾಟಕ ಅಡಿಷನ್ 2020 ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ,  ಕಲೆ, ಕಲಾವಿದರನ್ನು ಗುರುತಿಸಿ ಗೌರವಿಸಬೇಕು. 

ಹೊಸ, ಹೊಸ ಪ್ರತಿಭೆಗಳನ್ನು ಹೆಚ್ಚಾಗಿ ಪರಿಚಯಿಸಬೇಕು. ಈ ಕಾರ್ಯವನ್ನು ಎಲ್ಲರು ಕೂಡಿ ಯಶಸ್ವಿಗೊಳಿಸಬೇಕು ಎಂದರು. ಪ್ರೊ.ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆವಹಿಸಿದ್ದರು. 

     ಸ್ಪಧರ್ಾಳುಗಳಿಗೆ ಉದ್ಯಮಿ ಸುನೀಲ ಮರಕುಂಬಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಜಗದೀಶ ಬೂದಿಹಾಳ ಪ್ರಥಮ ಬಹುಮಾನ 30,001, ಟ್ರೋಫಿ, ದ್ವಿತೀಯ ಬಹುಮಾನ ಪ್ರವೀಣ ಕುಂಬಾರ 20,001, ತೃತೀಯ ಬಹುಮಾನ ಪ್ರಾಚಾರ್ಯ ಎಸ್.ಎಸ್.ಬಡ್ಲಿ 10,000 ಟ್ರೋಪಿ ಘೋಷಿಸಿದರು. ಒಟ್ಟು 10 ಬಹುಮಾನಗಳನ್ನು ವಿತರಿಸಲಾಗುವುದು.   ಉಪನ್ಯಾಸಕ ಹೆಚ್.ಐ.ಸಂಕನ್ನವರ, ರಾಜಶೇಖರ ವಾರಿ, ಸಂತೋಷ ಹಡಪದ ವೇದಿಕೆಯಲ್ಲಿ ಇದ್ದರು. ಸಿದ್ಧಾರೂಢ ಹೊಂಡಪ್ಪನವರ ನಿರೂಪಿಸಿದರು. ಸಿದ್ದಲಿಂಗ ಕುಂಬಾರ ಸ್ವಾಗತಿಸಿದರು. ಪ್ರವೀಣ ಅಳಗುಂಡಿ ವಂದಿಸಿದರು.