ಲೋಕದರ್ಶನ ವರದಿ
ಬೆಳಗಾವಿ 11: ಬೆಳಗಾವಿ ಶಿಕ್ಷಣ ಸಂಸ್ಥೆಯ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ವಾಷರ್ೀಕ ಕ್ರೀಡಾ ಕೂಟ ಎರಡು ದಿನಗಳ ಕಾಲ ದಿ. 12, 13 ರಂದು ಆಯೋಜಿಸಲಾಗಿದೆ. ವಾಷರ್ಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭವನ್ನು ಬಿ. ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಶಾರೀರಿಕ ಶಿಕ್ಷಣ ಉಪನ್ಯಾಸಕರಾದ ರಿಚಾ ರಾವ ಮಂಗಳವಾರ ರಂದು ಉದ್ಘಾಟಿಸಿ, ದ್ವಜಾರೋಹಣ ನೆರೆವೆರಿಸಿದರು. ಶಾಂತಿಗೆ ಪ್ರತೀಕವಾದ ಪಾರಿವಾಳಗಳನ್ನು ಅತಿಥಿಗಳು ಹಾರಿಸಿ, ನಂತರ ದೀಪಾ ಪಾಟೀಲ ಕ್ರೀಡಾ ಜ್ಯೋತಿಯನ್ನು ಚಲಿಸುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ ನಗರ ವಲಯದ ದೈಹಿಕ ಶಿಕ್ಷಣ ಅಧಿಕಾರಿಗಳಾದ ಎಲ್. ಬಿ. ನಾಯಕ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ರವಿ ಮಾಲಶೇಟ ಹಾಗೂ ಅದ್ಯಕ್ಷರಾಗಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಸುಧೀರ ಕುಲಕಣರ್ಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ. ಎಮ್. ಕೆ. ಮಾದಾರ ಪ್ರಾಸ್ತಾವಿಕ ಭಾಷಣದೊದಿಂಗೆ ಕ್ರೀಡಾಕೂಟದ ಮಹತ್ವ ತಿಳಿಸಿದರು. ಮುಖ್ಯ ಅತಿಥಿಗಳು ಕ್ರೀಡಾಕೂಟದ ಕುರಿತು "ವಿದ್ಯಾಥರ್ಿನಿಯರು ಯಾವುದೇ ಕ್ಷೇತ್ರದಲ್ಲಿ ಹಿಂದುಳಿದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿ ತಾವೂ ಸಬಲರು ಎಂದು ತೋರಿಸಲು ಕ್ರೀಡಾಕೂಟ ಒಂದು ಸುವರ್ಣ ಅವಕಾಶ" ಎಂದು ರಿಚಾ ರಾವ ಹೇಳಿದರು.
ಕಾರ್ಯಕ್ರಮವನ್ನು ಮುಖ್ಯೋಪಾದ್ಯಾಯರಾದ ಎಮ್. ಕೆ. ಮಾದಾರ ಸ್ವಾಗತಿಸಿ, ಶ್ರಿದೇವಿ ಇಟಗಿಕರ ನಿರೂಪಿಸಿ, ಪಿ. ಈ. ಶಿಕ್ಷಕ ಆರ್. ಕೆ. ಪಾಟೀಲ ವಂದಿಸಿದರು. ಶಾಲಾ ಶಿಕ್ಷಕವೃಂದ ಕ್ರೀಡಾಕೂಟ ಯಶಸ್ವಿಗೊಳಿಸುವಲ್ಲಿ ಪಾತ್ರರಾದರು.