ಲೋಕದರ್ಶನ ವರದಿ
ಮಾಂಜರಿ ದಿ 13: ಸ್ವಾಮಿ ವಿವೇಕಾನಂದ ಅವರು ಭಾರತದ ಬಗ್ಗೆ ಭವ್ಯವಾದ ಕನಸು ಕಂಡ ಏಕೈಕ ಸನ್ಯಾಸಿ ಸಂತರಾಗಿದ್ದರು. ಸ್ವಾಮಿ ವಿವೇಕಾನಂದರ ಜೀವನ ಸಂದೇಶವೆಲ್ಲ ರಾಷ್ಟ್ರ ಪ್ರೇಮ, ಹಸಿದವನಿಗೆ ಅನ್ನ ಗಳಿಸುವ ದಾರಿ ತೋರಿಸುವುದು, ಗುರಿ ಮುಟ್ಟುವವರೆಗೆ ಛಲಬಿಡದೆ ಪ್ರಯತ್ನಿಸುವುದು, ಯುವ ಜನತೆ ರಾಷ್ಟ್ರೋದ್ಧಾರದ ಸಂಕೇತ ಎಂಬ ಉದಾತ್ತ ಚಿಂತನೆಗಳಿಂದದಲೇ ತುಂಬಿದೆ ಎಂದು ಅಂಕಲಿಯ ಕೆ.ಎಲ್.ಇ. ಸಂಸ್ಥೆಯ ಮಹಾವಿದ್ಯಾಲಯದ ಉಪನ್ಯಾಸಕಿ ಸುಪ್ರಿಯಾ ಅರಬೋಳೆ ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕೆ.ಎಲ್.ಇ. ಸಂಸ್ಥೆಯ ಪದಿವ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು ಆಯೋಜಿಲಾದ ಸ್ವಾಮಿ ವಿವೆಕಾನಂದ ಜಯಂತಿ ಹಾಗೂ ಯುವ ಸಪ್ತಾಹ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತದ್ದರು ವಿದ್ಯಾಥರ್ಿ ಹಾಗೂ ಯುವ ಸಮೂಹ ಓದಿ ಕೇವಲ ಕೆಲಸ ಹುಡುಕುವುದಕ್ಕೆ ಸೀಮಿತವಾಗದೆ ಸಾವಿರಾರು ಮಂದಿಗೆ ಕೆಲಸ ನೀಡುವ ಸ್ವ ಉದ್ಯೋಗಿಗಳಾಗಬೇಕು. ಆ ಘನ ಉದ್ದೇಶದಿಂದಲೇ ಇಂದು ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ಕೇಂದ್ರ ಸ್ಥಾಪನೆಯಾಗುತ್ತಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಿರೆಂದು ಪ್ರತಿಯೊಬ್ಬರೂ ಕೂಡ ಜೀವ ಸಂಕುಲವನ್ನು ಪ್ರೀತಿಸಬೇಕು, ಗೌರವಿಸಬೇಕು. ವ್ಯಕ್ತಿ ತನಗಿರುವ ಅವಕಾಶ ಮತ್ತು ಮಿತಿಗಳ ಒಳಗೆ ತನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ಸೇವೆಯೆಂದು ಅವರು ತಿಳಿಸಿದರು. ಈ ವೇಳೇ ಕೆ.ಎಲ್.ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಪ್ರಚಾರ್ಯ ಸುಧಿರ ಕೋಟಿವಾಲೆ ಮಾತನಾಡಿ, ಭಾರತದಲ್ಲಿರುವ ಶೇ. 65ರಷ್ಟು ಯುವ ಸಂಪತ್ತು ಸ್ವಾಮಿ ವಿವೇಕಾನಂದರು ದೇಶದ ಭವಿಷ್ಯದ ಬಗ್ಗೆ ನಂಬಿಕೆ ಇರಿಸಿದ್ದು, ಈ ಯುವ ಶಕ್ತಿ ದೇಶೋದ್ದಾರಕ್ಕೆ ಶ್ರಮಿಸಬೇಕು ಎಂದರಲ್ಲದೆ, ಅವಕಾಶಗಳಿಗೆ ಕಾಯ್ದು ಸಮಯ ವ್ಯಯಿಸದೇ ಅವಕಾಶ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳುವ ಬೌದ್ಧಿಕವಾಗಿ ಸಂಪನ್ಮೂಲರಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ವಾಮಿ ವಿವೇಕಾನಂದರ ಜೀವನದ ಘಟನೆಗಳು ಒಂದೊಂದು ಬಗೆಯಲ್ಲಿ ಮಾರ್ಗದರ್ಶಕವಾಗಿದ್ದು, ಅವುಗಳನ್ನು ಜೀವನದ ಆದರ್ಶವಾಗಿ ಸ್ವೀಕರಿಸಬೇಕು. ಚಿಂತಿಸದೆ, ಖಿನ್ನರಾಗದೇ ಸತತ ಪರಿಶ್ರಮದಿಂದ ಮುನ್ನುಗ್ಗಬೇಕು. ವಿದ್ಯಾರ್ಥಿಗಳೆಲ್ಲರೂ ಯಶಸ್ಸಿನ ಬೆನ್ನೇರಬೇಕೆಂದು ಅವರು ಆಶಿಸಿದರು.
ವೇದಿಕೆಯ ಮೇಲೆ ಪದವಿ ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್.ಆರ್. ಉಮರಾಣೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ ಆರ್.ಬಿ. ಅಲಂಕೃತಗೊಂಡಿದ್ದರು.ಕಾರ್ಯಕ್ರಮದಲ್ಲಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಬಿ.ಕಾಂ. ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಪ್ರೊ. ಎನ್.ಆರ್. ಉಮರಾಣೆ ಸ್ವಾಗತಿಸಿದರು, ಪ್ರೊ.ಎಸ್.ಎಸ್. ಕೋಠಿವಾಲೆ ಪ್ರಾಸ್ತಾವಿಕ ನುಡಿದರು, ಪ್ರೊ. ಪಿ.ಎ. ಕಾಟೆ ನಿರೂಪಿಸಿದರು, ಪ್ರೊ. ಬಿ.ಜಿ. ಜಾವೂರ ವಂದಿಸಿದರು.