ವಿವೇಕಾನಂದರ ಚಿಕ್ಯಾಗೋ ಭಾಷಣದ 125ನೇ ವಷರ್ಾಚರಣೆಯ ಸಂಭ್ರಮದ ಕಾರ್ಯಕ್ರಮ

ಲೋಕದರ್ಶನ ವರದಿ

                ಸಿಂದಗಿ 19 : ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದವರು ಸ್ವಾಮಿವಿವೇಕಾನಂದರು ಎಂದು ಯುವ ಬ್ರಿಗೇಡ್ನ ಮಾರ್ಗದರ್ಶಕ ಚಕ್ರವತರ್ಿ ಸೂಲಿಬೆಲೆ ಹೇಳಿದರು.

                ಸೋಮವಾರ ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಯುವ ಬ್ರಿಗೇಡ್ ಸಿಂದಗಿ ಶಾಖೆ ಹಮ್ಮಿಕೊಂಡ ಮತ್ತೊಮ್ಮೆ ದಿಗ್ವಿಜಯ, ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣದ 125ನೇ ವಷರ್ಾಚರಣೆಯ ಸಂಭ್ರಮದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

                ಜಗತ್ತಿನಲ್ಲಿ ಯಾರದಾದರು ಭಾಷಣದ 125ನೇ ವಷರ್ಾಚರಣೆ ಮಾಡುತ್ತಿದ್ದರೆ ಅದು ಸ್ವಾಮಿವಿವೇಕಾನಂದ ಭಾಷಣವಾಗಿದೆ. ನಾವು ಭಾರತೀಯರು ಹೆಮ್ಮೆಪಡಬೇಕು. ಸ್ವಾಮಿವಿವೇಕಾನಂದರು ಚಿಕ್ಯಾಗೋದ ಸರ್ವಧರ್ಮಸಮ್ಮೇಳನದಲ್ಲಿ ಮೂರುವರೆ ನಿಮಿಷ ಮಾಡಿದ ಭಾಷಣ ಜಗತ್ತಿಗೆ ಭಾರತೀಯ ಸಂಸ್ಕೃತಿ, ಸನಾತನ ಹಿಂದು ಧರ್ಮದ ಬಗ್ಗೆ ಪರಿಚಯಿಸಿತು. ಅಂದಿನಿಂದ ವಿದೇಶಿಯರು ಭಾರತ ದೇಶದ ಬಗ್ಗೆ ನೋಡುವ ದೃಷ್ಠಿಕೋನ ಬದಲಾಯಿತು ಎಂದು ಹೇಳಿದರು.

                ಸೋದರಿ ನಿವೇದಿತಾ ಅವರ ಸೇವೆ ಭಾರತೀಯರು ಎಂದು ಮರೆಯಬಾರದು. ಆದರೆ ಇಂದು ನಾವು ಭಾರತೀಯರು ಸೇವೆ ಎಂದರೆ ಮದರ ತೆರೆಸಾರನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಮದರ ತೆರೆಸಾಗಿಂತಲು ಹೆಚ್ಚಿನ ಸೇವೆ ಮಾಡಿದ ಸೋದರಿ ನಿವೇದಿತಾಳನ್ನು ನೆನಪಿಸಿಕೊಳ್ಳುತ್ತಿಲ್ಲ. ದೇಶ ಸೇವೆ ಮಾಡಿದವರ, ಸ್ವಾತಂತ್ರಕ್ಕಾಗಿ ಹೋರಾಡದಿವರ ಜೀವನ ಚರಿತ್ರೆ ಇಂದು ನಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳದೇಯಿರುವುದು, ಯಾಚ ಚಲನ್ದವರು ದಾರವಾಹಿ ತಗೆಯದೇಯಿರುವುದು ವಿಪರ್ಯಾಸವಾಗಿದೆ ಎಂದರು.

                ಯುವಕರು ಸ್ವಾಮಿವಿವೇಕಾನಂದವರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಅವರ ಜೀವನ ಅರಿತು ಪಾಲಿಸಬೇಕು. ಯುವಕರು ದುಶ್ಚಟಗಳಿಂದ ದೂರವಿರಬೇಕು. ವ್ಯಸನಮುಕ್ತ ಜೀವನ ನಡೆಸಬೇಕು. ದೇಶ ಕಟ್ಟುವ ಕೆಸಲ ಮಾಡಬೇಕು ಎಂದರು.

                ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಿನ ಯಂಕಂಚಿ ಹಿರೇಮಠದ ಶ್ರೀ ಅಭಿನವರುದ್ರಮುನಿ ಶಿವಾಚಾರ್ಯರು ಮಾತನಾಡಿ, ಸ್ವಾಮಿ ವಿವೆಕಾನಂದರು ನಮ್ಮ ಸಂಸ್ಕೃತಿ, ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವದರ ಮೂಲಕ ಯುವಕರಲ್ಲಿ ಹಿಂಧೂತ್ವವನ್ನು ಪ್ರತಿಪಾಧಿಸಿ ಮಹಾನ ವ್ಯಕ್ತಿ ಎಂದರು.

                ತಾಲೂಕಿನ ಆಲಮೇಲ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ತಾಲೂಕಿನ ಕೊರಳ್ಳಿಯ ಶ್ರೀ ಶಾಂತವೀರ ಶ್ರೀಗಳು, ಕಡಕೋಳ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.

                ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಡಾ.ಅಂಬೇಡ್ಕರ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ದಿಗ್ವಿಜಯ ರಥೋತ್ಸವಕ್ಕೆ ಸಿಂದಗಿಯ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ಹಾಗೂ ಬಿಜೆಪಿ ದುರೀಣ ಅಶೋಕ ಅಲ್ಲಾಪುರ, ಯುವ ಬ್ರಿಗೆಡ್ನ್ ತಾಲೂಕು ಸಂಚಾಲಕ ರಾಜು ಪಾಟೀಲ, ಪಿಎಸೈ ನಿಂಗಣ್ಣ ಪೂಜಾರ ಚಾಲನೆ ನೀಡಿದರು.

                ಮಾಜಿ ಶಾಸಕ ರಮೇಶ ಭೂಸನೂರ, ತಾಲೂಕು ಸಂಚಾಲಕ ರಾಜು ಪಾಟೀಲ, ಎಂ.ಎಸ್.ಮಠ, ಅಶೋಕ ಅಲ್ಲಾಪುರ, ಶ್ರೀಶೈಲಗೌಡ ಬಿರಾದಾರ, ಸಿದ್ದು ಬುಳ್ಳಾ, ಸಂತೋಷ ಪಾಟೀಲ, ಬಸು ಸಜ್ಜನ್, ಅಶೋಕ ಸುಲ್ಪಿ, ಯುವ ಬ್ರಿಗೇಡ್ ಕಾರ್ಯಕರ್ತರು ಸೇರಿದಂತೆ ಸಾವಿರಾರು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಥೋತ್ಸವ : ಪಟ್ಟಣದ ಡಾ.ಅಂಬೇಡ್ಕರ ವೃತ್ತದಿಂಧ ಪ್ರಾರಂಭವಾದ ದಿಗ್ವಿಜಯ ರಥೋತ್ಸವಕ್ಕೆ ಪಟ್ಟಣದ ಸಾರಂಗಮಠ-ಗಚ್ಚಿನಮಠದ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರು ಚಾಲನೆ ನೀಡಿದರು. ರಥೋತ್ಸವವು ಡಾ.ಅಂಬೇಡ್ಕರ ವೃತ್ತದಿಂದ, ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪಿತು.