ವಿಶ್ವಕ್ಕೆ ಸಹೋದರತೆಯ ಸಂದೇಶ ಸಾರಿದ ಮಹಾಪುರುಷ’ವಿವೇಕಾನಂದರು: ಪೂಜಾರ
ಬ್ಯಾಡಗಿ 13: ಸ್ವಾಮಿ ವಿವೇಕಾನಂದರು ಭಾರತೀಯರ ಬಗ್ಗೆ ವಿದೇಶಿಗರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ವಿಶ್ವಕ್ಕೆ ಸಹೋದರತೆಯ ಸಂದೇಶ ಸಾರಿದ ಮಹಾಪುರುಷ’ ಎಂದು ಮಂಜುನಾಥ ಪೂಜಾರ ಅಭಿಪ್ರಾಯಪಟ್ಟರು.ರವಿವಾರ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಸಂಘಟನೆಯ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಸ್ಮಾಮಿ ವಿವೇಕಾನಂದರ ದಿವ್ಯವಾಣಿಗಳು ಯುವಜನತೆಗೆ ಸ್ಫೂರ್ತಿ ನೀಡುತ್ತವೆ. ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಐತಿಹಾಸಿಕವಾಗಿದೆ.ನಿಮ್ಮನ್ನು ನೀವು ಜಯಿಸಿ,ಇಡೀ ಜಗತ್ತೇ ನಿಮ್ಮದಾಗುತ್ತದೆ. ಏಳಿ.. ಎದ್ದೇಳಿ.. ಗುರಿ ಮುಟ್ಟುವ ತನಕ ನಿಲ್ಲದಿರಿ.
ಇಂತಹ ಮುಖ್ಯ ಸಂದೇಶಗಳನ್ನು ನೀಡಿ, ಮನುಕುಲವನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಮುನ್ನಡೆಸಿದ ಮಹಾನ ಚೇತನ. ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರೆಂದರು.ಶಿವಕುಮಾರ ಮೋಟೆಬೆನ್ನೂರ ಮಾತನಾಡಿ ಸ್ವಾಮಿ ವಿವೇಕಾನಂದರುಭಾರತವನ್ನು ಪ್ರತಿನಿಧಿಸಿದ್ದರು ತಮ್ಮ ಉದಾತ್ತ ಮಾತುಗಳಿಂದಲೇ ದೇಶದ ಘನತೆ ಎತ್ತಿ ಹಿಡಿದ ಮಹಾನ್ ದಾರ್ಶನಿಕರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ಕಟ್ಟಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ರವೀಂದ್ರ ಬೆಟದೂರು, ರಾಜಪ್ಪ ವಡ್ಡರ, ಆನಂದ್ ಪಾಟೀಲ,ಮುಕ್ತಿಯಾರ ದೊಡ್ಡಮನಿ,ಬೀರ್ಪ ಪೂಜಾರ ಸೇರಿದಂತೆ ಇತರರಿದ್ದರು.