ಶಿರಹಟ್ಟಿ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ.ವಂಟಿಗೊಡಿ ಅವರ ಭೇಟಿ
Visit of S.K. Vantigodi, Judicial Member of the State Human Rights Commission, to Kittur Rani Channa
ಗದಗ 17: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆ0ೋಗದ ಗೌರವಾನ್ವಿತ ನ್ಯಾ0ಾಂಗ ಸದಸ್ಯರಾದ ಎಸ್.ಕೆ. ವಂಟಿಗೊಡಿ ಅವರು ಮಾರ್ಚ್ 12 ರಂದು ಗದಗ ಜಿಲ್ಲೆ0ು ಶಿರಹಟ್ಟಿ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಶಾಲೆ0ು ಕಾ0ುರ್ನಿರ್ವಹಣೆ ಮತ್ತು ಸೌಲಭ್ಯಗಳನ್ನು ಕೂಲಂಕುಷವಾಗಿ ಪರೀಶೀಲಿಸಿದರು. ವಸತಿ ಶಾಲೆಗೆ ಆಗಮಿಸಿದ ಎಸ್.ಕೆ. ವಂಟಿಗೊಡಿ ಅವರು ಭೋಜನಾಲ0ುಕ್ಕೆ ಭೇಟಿ ನೀಡಿ ಅಡುಗೆ ಸಿಬ್ಬಂದಿ0ೊಂದಿಗೆ ಮಾತನಾಡುತ್ತಾ ವಸತಿ ಶಾಲೆಯಲ್ಲಿ ದಿ 28-07-2025 ರಂದು ನಡೆದ ಘಟನೆಯಿಂದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಊಟದ ತೊಂದರೆ ಉಂಟಾಗಿರುವ ಕುರಿತು ಹೇಳುತ್ತಾ ಇನ್ನು ಮುಂದೆ ಅಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದರು. ಊಟದ ರುಚಿ0ುನ್ನು ಸ್ವತಃ ಪರೀಕ್ಷಿಸಿ, ಮೆನು ಚಾರ್ಟ್ ಪ್ರಕಾರ ರುಚಿಯಾದ, ಶುಚಿ0ಾದ ಮತ್ತು ಪೌಷ್ಟಿಕ ಆಹಾರವನ್ನು ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಂತರ ದಾಸ್ತಾನು ಕೊಠಡಿಯಲ್ಲಿ ಆಹಾರ ಧಾನ್ಯಗಳನ್ನು ಪರೀಶೀಲಿಸಿದರು.
ವಿದ್ಯಾರ್ಥಿನಿಲ0ುದ ಪ್ರತಿ ಕೊಠಡಿಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳ ಸಂಖ್ಯೆ, ಫ್ಯಾನ್, ಲೈಟ್ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ವಿಚಾರಿಸಿದರು. ಶೌಚಾಲ0ುಗಳ ಸ್ವಚ್ಛತೆಯನ್ನು ವೀಕ್ಷಿಸಿದರು. ಎಲ್ಲವೂ ಸರಿ ಇರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ವಿದ್ಯಾರ್ಥಿನಿಯರಿಗೆ ಬಿಸಿ ನೀರಿನ ಸೌಲಭ್ಯ ಗಳ ಬಗ್ಗೆ ಕೇಳಿದಾಗ ಪ್ರಾಂಶುಪಾಲರು ಸೋಲಾರ ವ್ಯವಸ್ಥೆ ಇರುವುದಾಗಿ ತಿಳಿಸಿದರು. ಶಾಲೆ0ುಲ್ಲಿ ಸೋಲಾರ್ ವ್ಯವಸ್ಥೆ ಇದ್ದರೂ, ಮಳೆಗಾಲದಲ್ಲಿ ಬಿಸೀನೀರಿನ ತೊಂದರೆ0ಾಗದಂತೆ ಗೀಸರ್ಗಳನ್ನು ಅಳವಡಿಸಲು ಸೂಚಿಸಿದರು. ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ವಿಟಮಿನ್-ಸಿ ಮತ್ತು ಕ್ಯಾಲ್ಸಿ0ುಂ ಮಾತ್ರೆಗಳನ್ನು ನೀಡಲಾಗುತ್ತಿದೆ0ೆು ಎಂದು ಖಚಿತಪಡಿಸಿಕೊಂಡರು. ವಿದ್ಯುತ್ ವ್ಯತ್ಯ0ುವಾದಾಗ 0ುುಪಿಎಸ್ ಹಾಗೂ ಜನರೇಟರ್ ಬಳಕೆ ಮಾಡುವ ಬಗ್ಗೆ ಮಾಹಿತಿ ಪಡೆದರು.
ವಸತಿ ಶಾಲೆ0ು ಆವರಣದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ಸಿಮೆಂಟ್ ಬೆಂಚುಗಳನ್ನು ಹಾಕಿಸಲು ಹಾಗೂ ಶಾಲೆ0ು ಆವರಣವನ್ನು ಇನ್ನಷ್ಟು ಸುಂದರಗೊಳಿಸಲು ಗಿಡಗಳನ್ನು ನೆಟ್ಟು ಪೋಷಿಸುವಂತೆ ತಿಳಿಸಿದರು. ಸಿ.ಸಿ. ಕ್ಯಾಮರಾ ಅಳವಡಿಸಿರುವ ಬಗ್ಗೆ ಮಾಹಿತಿಯನ್ನು ಪಡೆಯುತ್ತಾ ವಸತಿ ಶಾಲೆಯ ಸುತ್ತಮುತ್ತಲಿನ ಪ್ರದೇಶವನ್ನು ಕಾಣಿಸುವಂತೆ ಸಿ.ಸಿ. ಕ್ಯಾಮರಾ ಅಳವಡಿಸಲು ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು. ವಸತಿ ಶಾಲೆಯ ಪಾಲಕರು ತಮ್ಮ ಮಕ್ಕಳ ಭೇಟಿಗಾಗಿ ಬಂದಾಗ ಮಕ್ಕಳೊಂದಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಟ್ಟಡದ ವ್ಯವಸ್ಥೆ ಮಾಡಿದರೆ ವಸತಿ ಶಾಲೆಯಲ್ಲಿ ಜರುಗುವ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ. ವಸತಿ ಶಾಲೆಯು ಬಾಲಕಿಯರ ವಸತಿ ಶಾಲೆಯಾಗಿರುವುದರಿಂದ ಕಂಪೌಂಡ್ ಅವಶ್ಯಕವಿದ್ದು , ಸಿ.ಸಿ.ರಸ್ತೆ ಇವೆಲ್ಲವುಗಳ ಕುರಿತು ಬೇಡಿಕಯನ್ನು ಸಲ್ಲಿಸಿದಲ್ಲಿ ಮಾನ್ಯರು ಕೇಂದ್ರ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಬೇಗನೆ ಸರಿಪಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ನಂದಾ ಹಣಬರಟ್ಟ್ಟಿ, ಶಿರಹಟ್ಟಿ ತಹಶೀಲ್ದಾರ್ ರಾಘವೇಂದ್ರ ರಾವ್, ಪಿ.ಎಸ್ಐ ಆ0್. ಆರ್. ರೀತ್ತಿ, ಇ. ಓ ರಾಮಣ್ಣ ದೊಡ್ಮನಿ, ಬಿ.ಇ. ಓ ನಾಣ್ಕಿ ನಾಯಕ, ಸಮಾಜ ಕಲ್ಯಾಣ ಇಲಾಖೆ0ು ಸಹಾಯಕ ನಿರ್ದೇಶಕ ಗೋಪಾಲ ಲಮಾಣಿ, ಗದಗ ಜಿಲ್ಲಾ ವಸತಿ ಶಾಲೆಗಳ ಮತ್ತು ಕಾಲೇಜು ಜಿಲ್ಲಾ ಸಮನ್ವ0ು ಅಧಿಕಾರಿ ಹಾಗೂ ಪ್ರಾಂಶುಪಾಲರು ಶ್ರೀಮತಿ ಸುನೀತಾ ವಾಲಿಶೆಟ್ಟರ್ ಹಾಗೂ ವಸತಿ ಶಾಲೆ0ು ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 