ಯೋಗ ಉತ್ಸವ ಸ್ಥಳಕ್ಕೆ ವಚನಾನಂದ ಸ್ವಾಮೀಜಿ ಭೇಟಿ

ಲೋಕದರ್ಶನ ವರದಿ

ಅಥಣಿ 01:  ಪೂರ್ವಭಾವಿ ಯೋಜನೆಯಂತೆ ಇಂದು ದಿ. 1 ಡಿಸೆಂಬರದಿಂದ 6 ರವರೆಗೆ ನಡೆಯಲಿರುವ ಯೋಗ ಶಿಬಿರ ಸ್ಥಳಕ್ಕೆ ಶ್ವಾಸಗುರು ವಚನಾನಂದ ಸ್ವಾಮೀಗಳು ಭೇಟ್ಟಿನೀಡಿ ಪರಿಶೀಲನೆ ಮಾಡಿದರು.

ದಿ.30ರಂದು ಸಾಯಂಕಾಲ ಇಲ್ಲಿಯ ಭೋಜರಾಜ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ, ಧ್ವನಿವರ್ಧಕ ಹಾಗೂ ಶಿಬಿರಾಥರ್ಿಗಳು ಕುಳಿತುಕೊಳ್ಳುವ ಸ್ಥಳದ ಬಗ್ಗೆ ಸಂಘಟಕರಿಗೆ ಮಾರ್ಗದರ್ಶನ ನೀಡಿದರು. ಪೂರ್ವಭಾವಿ ಸಿದ್ಧತೆಯ ನಡದ ಬಗ್ಗೆ ಸಮಾಧಾನ ವ್ಯಕ್ತ ಪಡಿಸಿದರು. ಈ ಸಮಯದಲ್ಲಿ ಎಸ್. ಕೆ ಹೊಳೆಪ್ಪನವರ, ಶಿವಪುತ್ರ ಯಾದವಾಡ, ಚಿಕ್ಕಟ್ಟಿ, ಅಪ್ಪಾಸಾಹೇಬ ತಾಂಬಟ, ಶಿವಾನಂದ ಮಾಲಗಾವಿ, ಸಿ. ಎಸ್ ಕೋಟ್ಯಾಳ, ಬಸವರಾಜ ಅಂಬಿ, ಅಶೋಕ ಜಗದೇವ, ಶ್ರೀಶೈಲ ಪಾಟೀಲ, ಅಶೋಕ ಗೌರಗೊಂಡ, ಶಿವಗೌಡ ಜಗದೇವ, ಮಹೇಶ ಪಾಟೀಲ ಹಾಗೂ ವಿಶಾಲಾಕ್ಷಿ ಅಂಬಿ ಉಪಸ್ಥಿತರಿದ್ದರು.