ಕಾಗವಾಡ 03: ಕೃಷ್ಣಾ ನದಿಗೆ ನೀರು ಹರಿಸಲು ಕಾಗವಾಡ ಮತ್ತು ಜಮಖಂಡಿ ಶಾಸಕರು ಮಹಾರಾಷ್ಟ್ರ ನೀರಾವರಿ ಸಚಿವ ಗಿರೀಶ ಮಹಾಜನ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಶುಕ್ರವಾರ ರಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮತ್ತು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಇಂದು ಮುಂಬೈನಲ್ಲಿ ನೀರಾವರಿ ಇಲಾಖೆಯ ಸಚಿವರನ್ನು ಭೇಟಿಯಾಗಿ ಕೃಷ್ಣಾ ನದಿಗೆ ಅವಲಂಬಿತ ಪ್ರದೇಶಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟರು.
ಕೃಷ್ಣಾ ನದಿಯ ಭಾಗದ ನೀರಿನ ಅಭಾವನ್ನು ವಿವರಿಸಿ ಕೋಯ್ನಾ ಜಲಾಶಯದಿಂದ 2 ಟಿ.ಎಂ.ಸಿ ನೀರನ್ನು ಕೃಷ್ಣಾ ನದಿಗೆ ಹರಿಸಬೇಕೆಂದು ಕೇಳಿಕೊಂಡರು.
ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಕಾಶ ಹುಕ್ಕೇರಿಯವರು ಸಹ ಮಹಾರಾಷ್ಟ್ರದ ಸಚಿವರಿಗೆ ದೂರವಾಣಿಯ ಮುಖಾಂತರ ಮಾತನಾಡಿ, ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಕೇಳಿಕೊಂಡರು.
ಮಹಾರಾಷ್ಟ್ರದ ನೀರಾವರಿ ಸಚಿವರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದ್ದು ನೀರು ಬಿಡಲು ಸಮ್ಮತಿ ನೀಡಿದ್ದಾರೆ. ಸದರಿ ಸಮಸ್ಯೆಗೆ ಶಾಶ್ವತವಾದ ಒಂದು ಪರಿಹಾರ ಕಂಡುಕೊಳ್ಳುವ ಬಗ್ಗೆಯೂ ಚಚರ್ೆ ನಡೆಯಿತು. ಎರಡು ರಾಜ್ಯಗಳು ಪರಸ್ಪರ ಕೆಲ ಒಪ್ಪಂದ ಮಾಡಿಕೊಳ್ಳುವ ಮೂಲಕ ಮುಂಬರುವ ದಿನಗಳಲ್ಲಿ ಈ ಶಾಶ್ವತ ಪರಿಹಾರ ಅನುಷ್ಟಾನಗೊಳ್ಳಲಿದೆ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ದೂರವಾಣಿ ಮುಖಾಂತರ ತಿಳಿಸಿದರು. ಉಭಯ ಶಾಸಕರೊಂದಿಗೆ ಕಾಗವಾಡ ಕ್ಷೇತ್ರದ ಮುಖಂಡರಾದ ಆರ್.ಎಂ.ಪಾಟೀಲ, ದಾದಾ ಪಾಟೀಲ ಇದ್ದರು.