ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತರಿಂದ ಜಿಲ್ಲಾ ಆಸ್ಪತ್ರೆಗೆ ಭೇಟಿ

ಹಾವೇರಿ ಜ.17 ಆಸ್ಪತ್ರೆಯಲ್ಲಿ ವಿಶೇಷವಾಗಿ ಮಹಿಳೆಯರಿಗೆ ವಿಕಲಚೇತನರಿಗೆ ಯಾವ ಸೌಲಭ್ಯ   ಕಲ್ಪಿಸಲಾಗಿದೆ.  ಇಲ್ಲಿ ಜನಿಸುವ ಮಕ್ಕಳಲ್ಲಿ ಶೇ.5 ರಷ್ಟು ಮಕ್ಕಳು ವಿಕಲಚೇತನರು ಇರಬಹುದು ಅವರನ್ನು ಹೇಗೆ    ಗುರುತಿಸಲಾಗುತ್ತದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತರಾದ ವಿ.ಎಸ್.ಬಸವರಾಜು ಅವರು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಶುಕ್ರವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಅವರು,  ಮಹಿಳಾ ಘಟಕ್ಕೆ ಭೇಟಿ ನೀಡಿ  ಇಂತಹ ದೊಡ್ಡ ಆಸ್ಪತ್ರೆಯಲ್ಲಿ ಡಿಐಸಿ ಇಲ್ಲ ಎಂದರೆ ಬಡವರು ಎಲ್ಲಿಗೆ ಹೋಗಬೇಕು. ವೈದ್ಯರು ಔಷಧೀಯ ಚೀಟಿ  ಬರೆಯುವುದು, ಬೇರೆ ಆಸ್ಪತ್ರೆಗೆ ರೆಫರ್ ಮಾಡಿದರೆ ಮುಗಿಯಲ್ಲ, ಕಾಳಜಿ ಬೇಕು. ಹುಟ್ಟಿದ ಮಕ್ಕಳಲ್ಲಿ ವಿಕಲತೆ ಕಂಡು ಹಿಡಿಯಬೇಕು, ಪ್ರಾಥಮಿಕ ಹಂತದ ಚಿಕಿತ್ಸೆ ನೀಡಬೇಕು.  ಫಿಜೋರಪಿಸ್ಟ ಹಾಗೂ ಪಿಡಿಯಾಟ್ರಿಸ್ಟ್ ಇದ್ದಾರೆ. ವಿಕಲಚೇತನ ಮಕ್ಕಳಿಗೆ  ಆರಂಭ ಹಂತದಲ್ಲೇ ಚಿಕಿತ್ಸೆ ನೀಡಿದರೆ ಅವರನ್ನು ಸಾಮಾನ್ಯ ಮಕ್ಕಳಂತೆ ಸುಧಾರಿಸಬಹುದು.   ಈವರೆಗೆ ಡಿಐಸಿ ಬೇಕು ಎಂದು ಪ್ರಸ್ತಾವನೆ  ಯಾಕೆ ಸಲ್ಲಿಸಿಲ್ಲ. ಈ ಕೂಡಲೇ  ಪ್ರಸ್ತಾವನೆ ಸಲ್ಲಿಸಿ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸರಿಗೆ ಸೂಚನೆ ನೀಡಿದರು.ಆಸ್ಪತ್ರೆಯಲ್ಲಿ ವಿಕಲಚೇತನ ಮಕ್ಕಳ ಕುರಿತು ಸರಿಯಾದ ಅಂಕಿ ಅಂಶ ಇಲ್ಲ.  ಅವರಿಗೆ ಯೋಜನೆಗಳು ಸರಿಯಾಗಿ ತಲುಪಿಸಲು ಮೊದಲು ಅಂಕಿ ಅಂಶ ಬೇಕು.  ಈ ಹಿನ್ನೆಲೆಯಲ್ಲಿ  ಸಿಡಿಪಿಓ, ಮಹಿಳಾ ಮತ್ತು  ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಯೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು.  ನಾನು ಯಾರನ್ನು ದೂರಲು ಬಂದಿಲ್ಲ, ವ್ಯವಸ್ಥೆಯನ್ನು  ಸರಿಪಡಿಬೇಕಾಗಿದೆ.  ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ  ತರಬೇಕು. 21 ವಿಕಲತಗಳಿವೆ. ಅವುಗಳನ್ನು ಗುರುತಿಸುವ ಕೆಲಸವಾಗಬೇಕು. ವಿಕಲಚೇತನ ಮಕ್ಕಳ ಜನನವಾದರೆ ಅಂತಹ ಮಕ್ಕಳ ಪೋಷಕರಿಗೆ ಸರಿಯಾದ ಮಾಹಿತಿ ನೀಡಿ,  ಅವರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲ ಕಾರ್ಯಗಳು ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಡೆದಾಗ ಮಾತ್ರ ಅವರನ್ನು ತಲುಪಲು ಸಾಧ್ಯ ಎಂದು ಹೇಳಿದರು.