ಲೋಕದರ್ಶನ ವರದಿ
ಕೊಪ್ಪಳ: ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಅಂಗವಾಗಿ ಅಖಿಲ ಕನರ್ಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 10ನೇ ಸಮ್ಮೇಳನ ಹಾಗೂ ರಾಮಾಯಣ ಮಹಾ ಕಾವ್ಯದಲ್ಲಿ ಕನ್ನಡ ಒಂದು ಚಿಂತನೆ ಎಂಬ ವಿಚಾರ ಸಂಕೀರ್ಣದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಕೊಡ ಮಾಡಿದ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿಯನ್ನು ನಗರದ ವಿಶ್ವೇಶ್ವರಯ್ಯ ಕಂಪ್ಯೂಟರ್ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷ ಮೊಹ್ಮದ್ ಮೆಹಬೂಬ್ ಹಾಜಿರವರಿಗೆ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಭಾರತ ತರ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜೀನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಕರ್ನಾಟಕ ಬಾಲ ವಿಕಾಸ ಅಕ್ಯಾಡಮಿ ಇವುಗಳ ಸಂಯುಕ್ತಾಶ್ರಯದಲ್ಲಿ ಇದೇ ದಿ: 26 ರಂದು ಸಂಜೆ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ಗುರುವಾರ ಜರುಗಿದ ಕೆಂಪೆಗೌಡ ಕನರ್ಾಟಕ ಸಾಂಸ್ಕೃತಿಕ ಉತ್ಸವ 2019 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳದ ವಿಶ್ವೇಶ್ವರಯ್ಯ ಕಂಪ್ಯೂಟರ್ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷ ಮಹ್ಮದ ಮೆಹಬುಬ್ ಹಾಜಿರವರ ತಾಂತ್ರೀಕ ಶಿಕ್ಷಣ ಹಾಗೂ ಉತ್ತಮ ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ಈ ವಿಶ್ವೇಶ್ವರಯ್ಯ ರಾಜ್ಯಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘಟಕರಾದ ಡಾ. ಸುರೇಶ ಶಮರ್ಾ, ಬಿ.ಹೆಚ್.ಹೊಂಗಲ್ ಹಾಗೂ ರಮೇಶ ಸುವರ್ೆ ಸೇರಿದಂತೆ ಫಕ್ಕಿರೇಶ್ವರ ಸ್ವಾಮಿಜಿಗಳು, ಎ. ದೇವೆಗೌಡ, ಚಲನಚಿತ್ರ ನಟ ಚಿಕ್ಕಹೆಜ್ಜಾಜಿ ಮಹಾದೇವ, ಶಂಕರಭಟ್ಟ್, ಮೀನ್ ಹಾಗೂ ಸಮ್ಮೇಳನ ಅಧ್ಯಕ್ಷ ಬೇಲೂರು ಕೃಷ್ಣಮೂತರ್ಿ ಇತರರು ಭಾಗವಹಿಸಿದ್ದರು.
ವಿಶ್ವೇಶ್ವರಯ್ಯ ಕಂಪ್ಯೂಟರ್ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷ ಮಹ್ಮದ ಮೆಹಬುಬ್ ಹಾಜಿರವರಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ ಲಭ್ಯಿಸಿರುದಕ್ಕೆ ಕೊಪ್ಪಳದ ವಿವಿಧ ಸಂಘಟನೆಗಳು ಸೇರಿದಂತೆ ಅವರಿಂದ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾಥರ್ಿಬಳಗ ಸಂಭ್ರಮಿಸಿ ಸಿಹಿ ಹಂಚಿಸಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.