ಲೋಕದರ್ಶನ ವರದಿ
ಕೊಪ್ಪಳ 13: ಜಗತ್ತಿನ ಆರಾಧನಾ ಮಂದಿರಗಳಾದ ದೇಗುಲಗಳು, ಶಿಲ್ಪ ಕಲೆಗಳು, ರೈತರಿಗೆ ಬೇಕಾದ ಕೃಷಿ ಉಪಕರಣಗಳು, ಜಾತ್ರೆಗೆ ಬೇಕಾದ ರಥಗಳು, ಮಹಿಳೆಯರಿಗೆ ಬೇಕಾದ ಆಭರಣಗಳು. ಹೀಗೆ ಪಟ್ಟಿ ಮಾಡುತ್ತ ಹೋದರೆ ವಿಶ್ವಕರ್ಮರು ಸಕಲ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಷ್ಟಕ್ಕೂ ಸೃಷ್ಠಿ-ಸ್ಥಿತಿ-ಲಯಗಳಿಗೆ ವಿಶ್ವಕರ್ಮನೇ ಮೂಲ ಪುರುಷ. ಆದ್ದರಿಂದ ವಿಶ್ವದ ಸೃಷ್ಠಿಕರ್ತರು ವಿಶ್ವಕರ್ಮರು ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಭಿಪ್ರಾಯ ಪಟ್ಟರು.
ಅವರು ನಗರದ ಸಿರಸಪ್ಪಯ್ಯನಮಠದ ಆವರಣದಲ್ಲಿ ವಿಶ್ವಕರ್ಮ ಸಮಾಜದಿಂದ ಹಮ್ಮಿಕೊಂಡಿದ್ದ ಜಗದ್ಗುರು ಮೌನೇಶ್ವರ ಜಯಂತಿ ಉತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿಶ್ವಕರ್ಮರ ಆಶೀರ್ವಾದಿಂದ ನಮ್ಮ ತಂದೆಯವರು ಶಾಸಕರಾಗಿದ್ದು ಹಾಗೂ ನಾನು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಸಮಾಜದ ಶ್ರೇಯೋಭಿವೃದ್ದಿಗಾಗಿ ನಮ್ಮ ಸರಕಾರದಿಂದ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವಿಶ್ವಕರ್ಮ ಮಹಾಮಂಡಲದ ರಾಜ್ಯಾಧ್ಯಕ್ಷ ಎಲ್.ನಾಗರಾಜ ಆಚಾರ ಮಾತನಾಡಿ, ಇಲ್ಲಿನ ಸಮಾಜದ ಮುಖಂಡರಾದ ರುದ್ರಪ್ಪ ಬಡಿಗೇರ ಅವರು ಸತತವಾಗಿ 27 ವರ್ಷಗಳ ಕಾಲ, ಸಮಾಜವನ್ನು ಸಂಘಟಿಸಿ ಜಯಂತಿ, ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ ಹಾಗೂ ಉಪನಯನಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಇವರಿಗೆ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಈ ಹಿಂದೆ ಗ್ರಾಮೀಣ ಪ್ರದೇಶದ ಸಮಾಜ ಬಾಂಧವರಿಗೆ ಮನೆಗಳನ್ನು ಮಂಜೂರು ಮಾಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದೇನೆ, ಮುಂದೆಯೂ ಶ್ರಮಿಸುತ್ತೇನೆ ಎಂದು ಹೇಳಿದರು.
ನಂತರ ಸಿರಸಪ್ಪಯ್ಯ ಶ್ರೀಗಳು ಹಾಗೂ ಅಳ್ಳಳ್ಳಿ, ಲೆಕ್ಕಿಹಾಳ, ಹಿರೇಹಾಳ, ಲೇಬಗೇರಿ, ಗಿಣಗೇರಿ, ಮುದ್ದಾಬಳ್ಳಿ, ಶ್ಯಾಡ್ಲಗೇರಿ, ಕಾತರಕಿ-ಗುಡ್ಲಾನೂರು ಹಾಗೂ ವಿವಿಧ ಮಠದ ಸ್ವಾಮಿಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ 22 ಜೋಡಿ ಸಾಮೂಹಿಕ ವಿವಾಹ ಹಾಗೂ 40 ವಟುಗಳಿಗೆ ಉಪನಯನ, ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು. ಇದಕ್ಕೂ ಮುನ್ನ ನಗರದ ರಾಜಬೀದಿಗಳಲ್ಲಿ ಜಗದ್ಗುರು ಮೌನೇಶ್ವರರ ಬೆಳ್ಳಿಮೂತರ್ಿಯನ್ನು ಕುದುರೆಯ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. 101 ಕುಂಭ ಹೊತ್ತ ಮಹಿಳೆಯರು, ವಿಶ್ವಕರ್ಮ ಪ್ರಭುವಿನ ಪಂಚ ಕಸಬುಗಳ ಋಷಿ ಪುಂಗವರ ಸ್ಥಬ್ದ ಚಿತ್ರಗಳು ಈ ಸಮಾರಂಭಕ್ಕೆ ಶೋಭೆ ನೀಡಿದವು.
ವೇದಿಕೆಯಲ್ಲಿ ಕೆಎಂಎಫ್ ನಿದರ್ೇಶಕ ವೆಂಕನಗೌಡ ಹಿರೇಗೌಡರ, ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಗಂಟಿ, ನಿವೃತ್ತ ಜಂಟಿ ನಿದರ್ೇಶಕ ಮಂಟೇಲಿಂಗಾಚಾರ, ವೀರಣ್ಣ ಪಂಚಾಳ, ಗುಂಡಪ್ಪ ಕೆ.ಎಂ., ಸಮಾಜದ ಜಿಲ್ಲಾಧ್ಯಕ್ಷ ಈಶಪ್ಪ ಬಡಿಗೇರ, ಐ.ವಿ.ಪತ್ತಾರ, ಜಿ.ಶಂಕರ್, ಆರ್.ಕೃಷ್ಣಮಾಚಾರ, ಮಂಜುನಾಥ ವಿಶ್ವಕರ್ಮ, ಮಂಜುನಾಥ ಬನ್ನಿಕೊಪ್ಪ, ಪುಷ್ಪಲತಾ ಯೋಗರಾಜ, ಸುಬ್ಬಲಕ್ಷ್ಮೀ ರಾಜಾಚಾರ ಅನೇಕರು ಪಾಲ್ಗೊಂಡಿದ್ದರು. ವಿಶ್ವಕರ್ಮ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎ.ಪ್ರಕಾಶ ನಿರೂಪಿಸಿದರು. ಸಮಾಜದ ಗೌರವಾಧ್ಯಕ್ಷ ರುದ್ರಪ್ಪ ಬಡಿಗೇರ ಸ್ವಾಗತಿಸಿದರು. ಕೊನೆಯಲ್ಲಿ ಶ್ರೀನಿವಾಸ ಬಡಿಗೇರ ವಂದಿಸಿದರು.