ವಿಶ್ವ ಬಸವ ಜಯಂತಿ: ಮೇ 4 ರಂದು ಗ್ರಂಥ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ

Vishwa Basava Jayanti: Book launch and state-level poetry conference on May 4th

ಬೈಲಹೊಂಗಲ 28: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರೆ​‍್ಣ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಮೇ 4 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಚೆನ್ನಮ್ಮಾ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಟಗುಡ್ಡ ವಹಿಸುವರು. ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಗ್ರಂಥ ಲೋಕಾರೆ​‍್ಣ ಮತ್ತು ಕವಿಗೋಷ್ಠಿ ಉದ್ಘಾಟನೆ ಮಾಡುವರು. ಬಸವ ಸಮಿತಿಯ ಕೇಂದ್ರ ಸಮಿತಿ ಸದಸ್ಯರಾದ ಮಹಾದೇವಪ್ಪ ಗುರುಲಿಂಗಪ್ಪ ವಾಲಿ, ಬೈಲಹೊಂಗಲದ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ವಿಜಯಲಕ್ಷ್ಮಿ ತೋಟಗಿ, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭೆಯ ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷರಾದ ಡಾ. ಎ.ಎನ್‌. ಬಾಳಿ, ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲೆ ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮಕ್ಕ ಅಂಗಡಿ, ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ.ಚಂದ್ರಶೇಖರ ಗಣಾಚಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್‌.ಆರ್‌.ಠಕ್ಕಾಯಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಸಂತೋಷ ಕೊಳವಿ, ಜಾಗತಿಕ ಲಿಂಗಾಯತ ಮಹಾಸಭಾದ ಬೈಲಹೊಂಗಲ ನಗರ ಘಟಕ ಅಧ್ಯಕ್ಷರಾದ ಮಹೇಶ ಕೋಟಗಿ, ಕನ್ನಡ ಜನಪದ ಪರಿಷತ್ತಿನ ತಾಲೂಕಾಧ್ಯಕ್ಷರಾದ ಚಂದ್ರಶೇಖರ ರುದ್ರ​‍್ಪ ಕೊಪ್ಪದ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಕೋಳಿ, ಚಿಕ್ಕಬೆಳ್ಳಿಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಇಬ್ರಾಹಿಮ್ ಎಮ್‌. ಮುಲ್ಲಾ ಮುಖ್ಯ ಅತಿಥಿಗಳಾಗಿ ಆಗಮಿಸುವರು.    

ಬೀರ​‍್ಪ ಡಿ. ಡಂಬಳಿ, ರಾಜು ಎಂ. ಯಳಮೇಲಿ, ಬಸವರಾಜ ಚೋಳೆನಹಳ್ಳಿ, ಗುಡ್ಡಪ್ಪ ಎನ್‌.ಚಟ್ರಮ್ಮನವರ, ಶಂಕರಬಾಯಿ ನಿಂಬಾಳಕರ, ಸುಭಾಷ ಬಾಬು ಬಸ್ತವಾಡ, ಗೀತಾ ಅಶೋಕ ಶೇಠಿ, ಬಿ.ಡಿ.ಎಸ್‌. ರಾಜಪ್ಪ, ಶೈಲಜಾ ಎಂ. ಕೋರಿಶೆಟ್ಟರ, ಅರುಣಕುಮಾರ ರಾಜಮಾನೆ, ಅಶ್ವಿನಿ ಬಸವರಾಜ ಚಿಪ್ಪಲಕಟ್ಟಿ ಮಹಾಂತೇಶ ಹ ಸೊಪ್ಪಿನವರು, ಸಂದೀಪ ಎಂ.ಪಿ., ಹೇಮಾ ಎನ್‌., ಯಶವಂತ ಮೇತಿ, ಸಂಜಯ ಜಿ. ಕುರಣಿ, ಅಕ್ಕಮಹಾದೇವಿ ನಾಡಗೌಡ, ರೇಖಾ ಜೋಶಿ, ಪ್ರೀತಿ ಪ್ರದೀಪ ತುಳಜಣ್ಣವರ, ಡಾ. ಭವ್ಯ ಅಶೋಕ ಸಂಪಗಾರ, ಮಲ್ಲಿಕಾರ್ಜುನ ಹ. ಕೆರೂಡಿ, ಹೇಮಾ ಮೊರಬ, ಗೌರಾ ಉ. ಹಾಲಭಾವಿ, ಯಶವಂತ ಭರಮಣ್ಣ ಉಚಗಾಂವಕರ, ಮಹಾಂತೇಶ ವೈ ಗೋನಕೊಪ್ಪ, ವಿಜಯಲಕ್ಷ್ಮಿ ಎಂ. ತಿರಕಣ್ಣವರ, ಗುರುಸ್ವಾಮಿ ಎಸ್‌. ಹಿರೇಮಠ, ಅಡಿವೆಪ್ಪ ಬ. ಇಟಗಿ ರಾಜ್ಯ ಮತ್ತು ಅಂತರರಾಜ್ಯದ ವಿವಿಧೆಡೆಯಿಂದ ಕವಿ ಕವಯಿತ್ರಿಯರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರು, ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಎಲ್ಲ ಕನ್ನಡ ಮನಸ್ಸುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬೆಂಗಳೂರಿನ ಬಸವ ಸಮಿತಿಯ ಪದಾಧಿಕಾರಿಗಳು ಕೋರಿದ್ದಾರೆ.