ವೀರೇಂದ್ರ ಡ್ರೆಸ್ ಲ್ಯಾಂಡ್ದೊಂದಿಗೆ ಶಾಲಾ ಸಮವಸ್ತ್ರ ಮಾರಾಟದಲ್ಲಿ ಶಾಮೀಲು ಖಾಸಗಿ ಶಿಕ್ಷಣ ಸಂಸ್ಥೆ, ಇಲಾಖೆ ವಿರುದ್ಧ ಕ್ರಮಕ್ಕೆ ಕಿರಣಗಿ ಒತ್ತಾಯ

ಧಾರವಾಡ 12: ಧಾರವಾಡ ವಿದ್ಯಾಕಾಶಿ, ವಿದ್ಯಾನಗರಿ ಎಂದೆಲ್ಲಾ ಹೇಳುತ್ತಲೇ ಇಲ್ಲಿಯ ಶಿಕ್ಷಣ ಸಂಸ್ಥೆಗಳು ಮನಬಂದಂತೆ ಪ್ರವೇಶ ಶುಲ್ಕ ಪಡೆದುಕೊಳ್ಳುತ್ತಿವೆ. ಹತ್ತನೇ ತರಗತಿಯಲ್ಲಿ ಧಾರವಾಡ ಜಿಲ್ಲೆ 23ನೇ ಸ್ಥಾನಕ್ಕೆ ಕುಸಿದರೂ ಸಹ ಪ್ರವೇಶ ಶುಲ್ಕ ಏನೂ ಕಡಿಮೆ ಆಗಿಲ್ಲ. ಹಾಗಂತ ಅವರು ಗುಣಮಟ್ಟದ ಶಿಕ್ಷಣ ಕೂಡ ನೀಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.  

ಅವುಗಳಿಗೆ ಕಡಿವಾಣ ಹಾಕಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಕ್ಕೆ ಜಾಣ ಕುರುಡುತನ ತೋರಿಸುತ್ತಿವೆ ಎಂಬ ಅನುಮಾನ ನೊಂದ ಪೋಷಕರಿಗೆ ಹಾಗೂ ಪಾಲಕರಿಗೆ ಮೂಡಿಸುತ್ತಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಬಾಲನಂದನ ಟ್ರಸ್ಟ್ ಸದಸ್ಯ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ ನಾಗರಾಜ ಕಿರಣಗಿ ಎಂದು ಆರೋಪಿಸಿದ್ದಾರೆ. 

ಈ ಕುರಿತು ಬುಧವಾರ ಅಪರ್ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರಿಗೆ ಲಿಖಿತ ಮನವಿ ಸಲ್ಲಿಸಿರುವ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯತನದಿಂದಾಗಿ ನಮ್ಮಂತಹ ಬಡ ಪೋಷಕರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಷ್ಟಪಟ್ಟು ದುಡಿದ ಹಣವನ್ನೇಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ   ಹಾಕಬೇಕಾದ ಅನಿವಾರ್ಯ ಪರಿಸ್ಥಿತಿ  ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. 

ಖಾಸಗಿ ಶಿಕ್ಷಣ ಸಂಸ್ಥೆಗಳು ಸಾವಿರಾರು ರೂಪಾಯಿ ಕಟ್ಟಡ ಶುಲ್ಕ, ಟ್ಯೂಶನ್ ಫೀ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದರೂ, ಜಿಲ್ಲಾಡಳಿತ ಈವರೆಗೆ ಅವರ ವಿರುದ್ದ ಯಾವುದೇ ಕಟ್ಟು ನಿಟ್ಟಿನ ಕ್ರಮ  ಸಂಬಂಧ ನಾವು ನೊಂದು ತಮಗೆ ಈ ಪತ್ರ ಬರೆಯುತ್ತಿದ್ದು, ಧಾರವಾಡದ ಸುಭಾಸ ರಸ್ತೆಯಲ್ಲಿರುವ ವೀರೇಂದ್ರ ಡ್ರೆಸ್ ಲ್ಯಾಂಡ್ ಯಲ್ಲಿ ಶಾಲಾ ಸಮವಸ್ತ್ರ ಮಾರಾಟ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಮಾರುಕಟ್ಟೆಯ ದರಕ್ಕಿಂತ ಎರಡು ಪಟ್ಟು ದುಪ್ಪಟ್ಟು ದರಕ್ಕೆ ಮಕ್ಕಳ ಶಾಲಾ ಸಮವಸ್ತ್ರ ಮಾರಾಟ ಮಾಡಲಾಗುತ್ತಿದೆ. 

ಇದಕ್ಕೆ ಒಂದು ಉದಾಹರಣೆಗೆ ಟೀ ಶರ್ಟ್ರ 345 ರೂ. ಮಾರುಕಟ್ಟೆಯಲ್ಲಿ ಅದರ ಬೆಲೆ ಅಬ್ಬಾಬ್ಬ ಅಂದರೆ 150ಯಿಂದ 200 ರೂಪಾಯಿವರೆಗೆ ಇರಬಹುದು. ಇವರು 145 ರೂ ಹೆಚ್ಚುವರಿ ಪಡೆಯುತ್ತಿರುವುದು ಏಕೆ. ಶಾಲೆಯ ಬೆಲ್ಟ್ ಗೆ ಎರಡನೂರು ರೂಪಾಯಿ, ಶಾಕ್ಸ್  ಗಳಿಗೆ 120 ರೂ, ಜಾಕೇಟ್, ಸ್ವೇಟರ್, ಸ್ಕರ್ಟ, ಶರ್ಟ, ಟ್ರಾಕ್ ಪ್ಯಾಂಟ್, ಟೀ  ಶರ್ಟ್ ಸೇರಿದಂತೆ ಹೀಗೆ ವಿವಿಧ ಸಮವಸ್ತ್ರಗಳಿಗೆ ಮನಬಂದಂತೆ ಹಣ ಪಡೆಯಲಾಗುತ್ತದೆ.      

ಇವರಿಗೆ ಧಾರವಾಡದ ಬಹುತೇಕ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಗುತ್ತಿಗೆ ನೀಡಿರುವುದು ನೋಡಿದರೆ ಏನೂ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಪ್ರಶ್ನಿಸಿದರೆ, ಗುಣಮಟ್ಟದ ಬಟ್ಟೆ ಇದೆ. ಬೇಕಿದ್ದರೆ ತೆಗೆದುಕೊಳ್ಳಿ, ಇಲ್ಲದಿದ್ದರೆ ಬೀಡಿ, ನಾವೇನು ನಿಮಗೆ ಬಲವಂತ ಮಾಡುವುದಿಲ್ಲ ಎಂಬ ಅನಿವಾರ್ಯತೆ ಸೃಷ್ಟಿ ಮಾಡುತ್ತಾರೆ. ಏಕೆಂದರೆ ಇವರ ಬಳಿ ಬಿಟ್ಟರೆ ಬೇರೆ ಯಾವ ಅಂಗಡಿಗಳಲ್ಲೂ ಈ ಶಾಲಾ ಸಮವಸ್ತ್ರ ಸಿಗುವುದಿಲ್ಲ. ಹೀಗಾಗಿ ಇವರು ಆಡಿದ್ದೇ ಆಟ ಎನ್ನುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ನಿಮ್ಮ ಶಾಲೆಗಳಿಗೆ ಹೋಗಿ ಹೇಳಿ, ಈ ಬಗ್ಗೆ ನಮಗೇನು ಹೆಚ್ಚಿಗೆ ಕೇಳಬೇಡಿ ಎಂಬ ಸಿದ್ದ ಹಾಗೂ ಉಡಾಫೆ ಉತ್ತರ ವೀರೇಂದ್ರ ಡ್ರೆಸ್ ಲ್ಯಾಂಡ್ ಮಾಲೀಕನಿಂದ ಬರುತ್ತಿದೆ. ಅವರ ನಡೆ, ಪೋಷಕರೊಂದಿಗೆ ಮಾತನಾಡುವ ದಾಟಿ ನೋಡಿದರೆ, ಹಗಲು ದರೋಡೆ ಜೊತೆಗೆ ಪೋಷಕರಿಗೆ ಸೌಜನ್ಯ ತೋರುವ ಬದಲಿಗೆ ದೌರ್ಜನವ್ಯವೆಸಗುವ ರೀತಿ ಇರುತ್ತದೆ. ಹೆದರಿಕೆ ಹಾಕುವ ದಾಟಿಯಲ್ಲಿ ಅವರು ಮಾತನಾಡುವ ಶೈಲಿ ಪೋಷಕರಿಗೆ ಭಯ ಹುಟ್ಟಿಸುವಂತಿದೆ ಎಂದು  ಜನಜಾಗೃತಿ ಸಂಘದ  ಅಧ್ಯಕ್ಷ ಬಸವರಾಜ ಕೊರವರ, ಬಾಲನಂದನ ಟ್ರಸ್ಟ್ ಸದಸ್ಯ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ ನಾಗರಾಜ ಕಿರಣಗಿ ಎಂದು   ಅಧ್ಯಕ್ಷ ಬಸವರಾಜ ಕೊರವರ, ಬಾಲನಂದನ ಟ್ರಸ್ಟ್ ಸದಸ್ಯ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ ನಾಗರಾಜ ಕಿರಣಗಿ ಎಂದು ಮನವಿ ಮಾಡಿದ್ದಾರೆ.