ಆಡಿಲೇಡ್, ನ.30- ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಪಾಕ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 36 ರನ್ ಗಳಿಗೆ ಔಟ್ ಆದರೂ, ದಾಖಲೆಯೊಂದಕ್ಕೆ ತಮ್ಮ ಹೆಸರು ನಮೂದಿಸಿದ್ದಾರೆ.
ಎರಡನೇ ದಿನದ ಆಟದಲ್ಲಿ ಸ್ಮಿತ್ ಕ್ರೀಸ್ ಗೆ ಇಳಿದಾಗ ಎಲ್ಲರ ಕಣ್ಣು ಇವರ ಮೇಲೆ ನೆಟ್ಟಿತು. ಇವರು ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 7000 ರನ್ ದಾಖಲೆ ಬರೆಯುವ ಸನಿಹದಲ್ಲಿದ್ದರು. ಸ್ಮಿತ್ 99.4 ಓವರ್ ನಲ್ಲಿ ಮೊಹಮ್ಮದ್ ಮೂಸಾ ಎಸೆತವನ್ನು ಸ್ಕ್ವೇರ್ ಲೆಗ್ ಗೆ ತಳ್ಳಿ ಒಂದು ರನ್ ಕಲೆ ಹಾಕಿದರು. ಅಲ್ಲದೆ ಟೆಸ್ಟ್ ನಲ್ಲಿ ವೇಗವಾಗಿ ಏಳುಸಾವಿರ ರನ್ ಸಾಧನೆ ಮಾಡಿದ ಹಿರಿಮೆ ತಮ್ಮದಾಗಿಸಿಕೊಂಡರು.
ಇಂಗ್ಲೆಂಡ್ ತಂಡದ ವ್ಯಾಲಿ ಹಮೋಂದ್ 131 ಇನ್ನಿಂಗ್ಸ್ ನಲ್ಲಿ ಏಳು ಸಾವಿರ ರನ್ ಕಲೆ ಹಾಕಿದ್ದರು. ಸ್ಮಿತ್ ಈ ಸಾಧನೆ ಮಾಡಲು 126 ಇನ್ನಿಂಗ್ಸ್ ತೆಗೆದುಕೊಂಡರು. ಟೀಮ್ ಇಂಡಿಯಾದ ವೀರೇಂದ್ರ ಸೆಹ್ವಾಗ್ 134, ಸಚಿನ್ ತೆಂಡೂಲ್ಕರ್ 136, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್138 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.