ನವದೆಹಲಿ, ಮೇ 12,ಗುರಿ ಬೆನ್ನತ್ತಿ ತಂಡಕ್ಕೆ ಜಯ ತಂದುಕೊಡುವುದರಲ್ಲಿ ಭಾರತೀಯ ಕ್ರಿಕೆಟ್‌ನ ದಿಗ್ಗಜ ಸಚಿನ್ ತೆಂಡೂಲ್ಕರ್‌ಗಿಂತಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ'ವಿಲಿಯರ್ಸ್ ಹೇಳಿದ್ದಾರೆ."ನಮ್ಮಿಬ್ಬರಿಗೂ ಸಚಿನ್ ಸ್ಪೂರ್ತಿ. ಅವರ ಕಾಲದಲ್ಲಿ ಶ್ರೇಷ್ಠ ಬೌಲರ್‌ಗಳ ಎದುರು ಸಚಿನ್ ಅಬ್ಬರಿಸಿ ದಾಖಲೆಗಳನ್ನು ಮೆಟ್ಟಿನಿಂತದ್ದು ನಮ್ಮೆಲ್ಲರಿಗೂ ಅದ್ಭುತ ಉದಾಹರಣೆಯಾಗಿದೆ," ಎಂದು ಕಾಮೆಂಟೇಟರ್ ಹಾಗು ಮಾಜಿ ಕ್ರಿಕೆಟರ್ ಪಾಮಿ ಎಂಬಾಂಗ್ವಾ ಅವರೊಟ್ಟಿಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಎಬಿಡಿ ಹೇಳಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ "ವಿರಾಟ್ ಅಭಿಪ್ರಾಯವೂ ಅದೆ ಆಗಿದೆ. ಸಚಿನ್ ನಮ್ಮೆಲ್ಲರಿಗೂ ಒಂದು ಗುಣಮಟ್ಟ ಕಾಯ್ದುಕೊಳ್ಳುವ ದರ್ಜೆ ನಿರ್ಮಿಸಿಕೊಟ್ಟಿದ್ದಾರೆ. ಆದರೆ, ವೈಯಕ್ತಿಕವಾಗಿ ಹೇಳುವುದಾದರೆ, ರನ್ ಚೇಸಿಂಗ್ ವೇಳೆ ವಿರಾಟ್ ಕೊಹ್ಲಿಯೇ ಅತ್ಯುತ್ತಮ. ಸಚಿನ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಆಡಿದ್ದಾರೆ. ಆದರೆ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿಯೇ ಅಗ್ರಮಾನ್ಯ," ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.