ಎಲ್ಲದಕ್ಕೂ ಹಿಂಸಾಚಾರವೇ ಪರಿಹಾರವಲ್ಲ: ರಜನಿಕಾಂತ

ನ್ನೈ, ಡಿ 20 ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮೌನ ಮುರಿದಿರುವ ನಟ ರಜನಿಕಾಂತ್ ಎಲ್ಲದಕ್ಕೂ ಹಿಂಸೆಯೇ  ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂದು  ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.ಭಾರತೀಯ ಪ್ರಜೆಗಳು ರಾಷ್ಟ್ರದ ಭದ್ರತೆ ಮತ್ತು ಐಕ್ಯತೆ  ಕುರಿತು ಒಗ್ಗಟ್ಟಿನಿಂದಿರಬೇಕು ಮತ್ತು ಜಾಗೃತರಾಗಿರಬೇಕು ಎಂಬುದು ಸರಿ. ಆದರೇ ದೇಶಾದ್ಯಂತ ಹಿಂಸಾಚಾರದ ಘಟನೆ ನಡೆಯುತ್ತಿರುವುದು ಬಹಳ ನೋವು,  ದುಃಖ ತಂದಿದೆ  ಎಂದು ಅವರು ಟ್ವೀಟ್ ಮಾಡಿದ್ದಾರೆ.ಕೆಟ್ಟ ಆಲೋಚನೆಗಳು ಮೊದಲು ನಮ್ಮನ್ನು ಆಕರ್ಷಿಸುತ್ತದೆ, ಜೊತೆಗೆ ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತವೆ. ಅಹಿಂಸೆ ಮತ್ತು ಉತ್ತಮ ಆಲೋಚನೆಗಳು ಆರಂಭದಲ್ಲಿ ನಮಗೆ ಹಿತ ಎನಿಸುವುದಿಲ್ಲ  ಆದರೆ ಅವುಗಳೇ ಸಮಸ್ಯೆಗಳಿಗೆ ನಿಜವಾದ , ಶಾಶ್ವತ  ಪರಿಹಾರ  ಒದಗಿಸಲಿವೆ ಎಂಬುದನ್ನು ಯಾರೊಬ್ಬರು ಮರೆಯಬಾರದು ಎಂದೂ  ಅವರು ಹೇಳಿದ್ದಾರೆ.