ವಿನಾಯಕ ಎ. ಇವರಿಗೆ ಪಿ ಎಚ್‌ಡಿ ಪದವಿ
ಬಳ್ಳಾರಿ 24 : ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಶ್ರೀ ವಿನಾಯಕ ಎ. ಇವರಿಗೆ ಸಮಾಜ ಕಾರ್ಯದಲ್ಲಿ ಪಿ ಎಚ್‌ಡಿ ಪದವಿಯನ್ನು ಪ್ರಕಟಿಸಿದೆ.ಮೂಲತಃ ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ಪಂಪಣ್ಣ ಅಕ್ಕಸಾಲಿ ಮತ್ತು ಕಸ್ತೂರಿ ಬಾಯಿ ಇವರ ಮಗನಾದ ಶ್ರೀ ವಿನಾಯಕ ಎ. ಇವರು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕುಮಾರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಅನಾಲಿಸಿಸ್ ಆಫ್ ಕಮ್ಯೂನಿಟಿ ಆರ್ಗನೈಸೇಷನ್ ಪ್ರಾಕ್ಟೀಸ್ ಇನ್ ಕರ್ನಾಟಕ: ಎ ಸೋಷಿಯಲ್ ವರ್ಕ್ ಪರ್ಸ್‌ಪೆಕ್ಟೀವ್ಸ್’ ಎಂಬ ಮಹಾಪ್ರಬಂಧಕ್ಕೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿ ಎಚ್‌ಡಿ ಪದವಿಯನ್ನು ಪ್ರಕಟಿಸಿದೆ. ಪ್ರಸ್ತುತ ಶ್ರೀ ವಿನಾಯಕ ಎ. ಇವರು ಸಮಾಜ ಕಾರ್ಯ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ವಿನಾಯಕ ಎ. ಇವರಿಗೆ ಪಿಎಚ್‌ಡಿ ಲಭಿಸಿದ್ದಕ್ಕಾಗಿ ವಿಭಾಗದ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಹಿರಿಯ ಸಹೋದರ ಶ್ರೀ ಅಂಬರೀಶ್ ಅಕ್ಕಸಾಲಿ ಮತ್ತು ಸಹೋದರರು ಹಾಗೂ ಕುಟುಂಬದವರು ಶುಭ ಹಾರೈಸಿದ್ದಾರೆ.