ಕೆರೆಯ ಸ್ವಚ್ಛತೆ, ನಿರ್ವಹಣೆ ಗ್ರಾಮಸ್ಥರು ಮಾಡಬೇಕು : ಸಿ.ಇ.ಓ ರುಚಿ ಬಿಂದಾಲ್
ಶಿಗ್ಗಾವಿ 03: ಧರ್ಮಸ್ಥಳ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯೆಕ್ತಪಡಿಸಿ ಕಡಿಮೆ ಖರ್ಚಿನಲ್ಲಿ ಅತೀ ದೊಡ್ಡ ಕಾಮಗಾರಿ ಮಾಡಿದ್ದು, ಮುಂದಿನ ದಿನಗಳಲ್ಲಿ ಕೆರೆಯ ಸ್ವಚ್ಛತೆ, ನಿರ್ವಹಣೆಯನ್ನು ಗ್ರಾಮಸ್ಥರು ಮಾಡಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್ ಹೇಳಿದರು. ತಾಲ್ಲೂಕಿನ ಹುಲಗುರ ವಲಯದ ಅತ್ತಿಗೆರಿ ಗ್ರಾಮದ ನಾಯಕನ ಕೆರೆಯನ್ನು ನಮ್ಮ ಯೋಜನೆಯ "ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದಲ್ಲಿ ಆಯ್ಕೆ ಮಾಡಿಕೊಂಡು 24 ದಿನಗಳ ಕಾಲ ಕೆರೆ ಕಾಮಗಾರಿಯನ್ನು ಮಾಡಿ, ಇಂದು ಅಧಿಕೃತವಾಗಿ ಗ್ರಾಮ ಪಂಚಾಯತ್ ಮತ್ತು ಕೆರೆ ಅಭಿವೃದ್ಧಿ ಸಮಿತಿ ಹಸ್ತಾಂತರ ಮಾಡಿ ಮಾತನಾಡಿದ ಅವರು ಯೋಜನೆಯ ಸ್ವಸಹಾಯ ಸಂಘಗಳ ಸಂಘಟನೆ ಅತ್ತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರ ಪರಿಣಾಮ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಹಾವೇರಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಪೂರ್ಣ ಕುಂಭ ಹಸ್ತಾಂತರಿಸುವ ಮೂಲಕ ಕೆರೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ ಮತ್ತು ಕೆರೆ ಸಮಿತಿಯವರಿಗೆ ನೀಡಿದರು. ನಂತರ ಮಾತನಾಡಿ ಕೆರೆ ಕಾಮಗಾರಿಯನ್ನು ಯೋಜನೆಯಿಂದ 7,27,102 ಅನುದಾನಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.
ಯೋಜನಾಧಿಕಾರಿ ಉಮಾ ಪ್ರಾಸ್ತವಿಕವಾಗಿ ಮಾತನಾಡಿದರು, ಗ್ರಾಮ ಪಂಚಾಯತ್ ಸದಸ್ಯ ನಿಂಗಪ್ಪ ಬಾರಕೇರ ಮಾತನಾಡಿ ಪೂಜ್ಯರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸಿ, ಕೆರೆಯಲ್ಲಿ ಮುಂದೆ ಆಗಬೇಕಾದ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರಗೌಡ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಸಾಬ್ ತೋಟದ, ಉಪಾಧ್ಯಕ್ಷೆ ಗೀತಾ ಮಂಡಿಗನಾಳ, ಸದಸ್ಯರಾದ ಸೋಮಣ್ಣ ಭೂಸರೆಡ್ಡಿ, ಚಿದಾನಂದ್ ಹುಲಿಕಟ್ಟಿ, ಬಸವರಾಜ ಎರೆಸಿಮಿ, ಮಹಾದೇವಿ ಗಿರಡ್ಡಿ, ಹನುಮಂತಗೌಡ್ರ ಪಾಟೀಲ, ತಾ.ಪಂ.ಇ.ಓ ಕುಮಾರ ಮಣ್ಣವಡ್ಡರ, ಜಿನಗ ಎ.ಇ.ಇ,ಪಿ.ಡಿ.ಓ ರವಿ ಗಾಣಿಗೇರ ಮೇಲ್ವಿಚಾರಕರಾದ ನಿರಂಜನ್, ಮೈಲಾರಿ, ವಲಯದ ಸೇವಾಪ್ರತಿನಿಧಿಗಳುಉಪಸ್ಥಿತರಿದ್ದರು.