ನೂತನ ಸಚಿವ ಶ್ರೀಮಂತ ಪಾಟೀಲರಿಗೆ ಗ್ರಾಮಸ್ಥರ ಅಭಿನಂದನೆ

ಲೋಕದರ್ಶನ ವರದಿ

ಕಾಗವಾಡ 6:  ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಾ ಇವರ ಸಚಿವ ಸಂಪೂಟದಲ್ಲಿ ಕ್ಯಾಬಿನೇಟ್ ದಜರ್ೆ ಸಚಿವ ಸ್ಥಾನ ದೊರೆತಿದ್ದರಿಂದ ಅವರನ್ನು ಕುಸನಾಳ, ಮೊಳವಾಡ, ಶೇಡಬಾಳ, ಉಗಾರ, ಐನಾಪೂರ, ಕೆಂಪವಾಡ ಸೇರಿದಂತೆ ಕ್ಷೇತ್ರದ ಸುಮಾರು 2000 ಕಾರ್ಯಕರ್ತರು ಬೆಂಗಳೂರಿನ ಪ್ರಮಾಣವಚನಕ್ಕೆ ಸಾಕ್ಷಿಯಾಗಿ ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಗುರುವಾರ ರಂದು ಬೆಂಗಳೂರಿನಲ್ಲಿ ಶಾಸಕ ಶ್ರೀಮಂತ ಪಾಟೀಲರು ಪ್ರಮಾಣವಚನ ಸ್ವೀಕರಿಸುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರು ರವಾನಿಸಿದ್ದರು. ಕಳೇದ 30 ವರ್ಷಗಳ ಬಳಿಕ ಕಾಗವಾಡ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಲಭಿಸಿದ್ದು. ಇದು ನಾವು ನಮ್ಮ ಕಣ್ಣು ತುಂಬಿಕೊಂಡು ಸಂತಸ ವ್ಯಕ್ತಪಡಿಸಿದ್ದೇವೆ ಎಂದು ಕಾರ್ಯಕರ್ತರು ಹಾಗೂ ಕುಸನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಜೈಪಾಲ ಯರೆಂಡೋಲೆ, ಚಿದಾನಂದ ಅಥಣಿ, ಅಶೋಕ ಅಥಣಿ, ಅಮೀತ ಪಾಟೀಲ, ಕುಸನಾಳ-ಮೋಳವಾಡ ಗ್ರಾಮದ ಅನೇಕ ಕಾರ್ಯಕರ್ತರು ನೂತನ ಸಚಿವರನ್ನು ಸನ್ಮಾನಿಸಿದರು.

ಇದೇ ರೀತಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕ ಉಪಾಧ್ಯಕ್ಷ ವಿನಾಯಕ ಬಾಗಡಿ, ನಂದಿಣಿ ಹಾಲು ಉತ್ಪಾದಕ ಜಿಲ್ಲಾ ಸಂಚಾಲಕ ಅಪ್ಪಾಸಾಹೇಬ ಅವತಾಡೆ, ಸಂಜಯ ತೇಲಸಂಗ, ಅಬ್ದುಲಬಾರಿ ಮುಲ್ಲಾ, ದಾದಾ ಪಾಟೀಲ, ಶಿವಾನಂದ ಮಗದುಮ್, ಕೃಷ್ಣಾ ಶಿಂದೆ, ಮಹಾದೇವ ಕೋರೆ, ಭರತೇಶ ಪಾಟೀಲ, ಅಣ್ಣಾಗೌಡಾ ಪಾಟೀಲ, ಮಹಾವೀರ ಪಾಟೀಲ, ಉತ್ಕರ್ಶ ಪಾಟೀಲ, ಸಂಜಯ ಪಾಟೀಲ,ಪ್ರಫುಲ್ಲ್ ಥೋರುಶೆ,ಸುಭಾಷ ಕಠಾರೆ, ಸುಭಾಷ ಮೋನೆ, ರವೀಂದ್ರ ರಾಜಮಾನೆ, ಶೀತಲ ಪಾಟೀಲ, ಪ್ರಕಾಶ ಚೌಗುಲೆ, ಮುನ್ನೋಳೆ, ಸೇರಿದಂತೆ ಅನೇಕ ಕಾರ್ಯಕರ್ತರು ಸಚಿವರ ಸುಪುತ್ರ ಶ್ರೀನಿವಾಸ ಪಾಟೀಲ ಹಾಗೂ ಸಚಿವರಿಗೆ ಬೆಂಗಳೂರಿನಲ್ಲಿ ಸನ್ಮಾನಿಸಿದರು.