ಗುತ್ತಿಗೆದಾರರಿಗೆ ಕೆಲಸ ಮಾಡಲು ಗ್ರಾಮಸ್ತರ ಸಹಕಾರ ಮುಖ್ಯ: ಡಾ ಚಂದ್ರು ಲಮಾಣಿ
ಶಿರಹಟ್ಟಿ: ಕಾಮಗಾರಿಯನ್ನು ಆದಷ್ಟು ಬೇಗನೆ ಶುರುಮಾಡಿ, ಅಲ್ಲದೆ ಕಾಮಗಾರಿಯು ಗುಣಮಟ್ಟದಿಂದ ಕೂಡಿರಲಿ, ಗುತ್ತಿಗೆದಾರರಿಗೆ ಗುಣಮಟ್ಟದ ಕೆಲಸ ಮಾಡಲು ಸ್ಥಳಿಯರ ಸಹಕಾರ ಬಹು ಮುಖ್ಯವಾಗಿದೆ ಎಂದು ಶಾಸಕ ಡಾ ಚಂದ್ರು ಲಮಾಣಿ ಹೇಳಿದರು.
ಗುರುವಾರ ತಾಲೂಕಿನ ಮಾಗಡಿ ಜಿಲ್ಲಾ ಮುಖ್ಯ ರಸ್ತೆ ಕಿ.ಮಿ 0.00 ರಿಂದ 7.90 ಕಿ.ಮಿ. ವರೆಗೆ ಆಯ್ದ ಭಾಗಗಳಲ್ಲಿ ಮರು ಡಾಂಬರಿಕರಣದ(ನವೀಕರಣ) ಹಾಗೂ ಖಾನಾಪುರ ಗ್ರಾಮದಿಂದ ಹರಿಪೂರ ಕ್ರಾಸ ವರೆಗೆ ರಸ್ತೆ ಮರುಡಾಂಬರಿಕರಣದ ಭೂಮಿ ಪೂಜೆಯನ್ನು ಶಾಸಕರಾದ ಡಾ ಚಂದ್ರು ಲಮಾಣಿ ನೆರವೇರಿಸಿದರು.
ನಂತರ ಮಾತನಾಡುತ್ತಾ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿ ಹೋಗಿದ್ದು ರಸ್ತೆಗಳು ಹಾಳಾಗುವುದಕ್ಕೆ ಮುಖ್ಯ ಕಾರಣ ಕಲ್ಲು,ಮರಳು,ಹಾಕಿಕೊಂಡು ಓವರ ಲೋಡ್ ಮಾಡಿಕೊಂಡು ಓಡಾಡುತ್ತಿದ್ದಾರೆ. ಆದ್ದರಿಂದ ತಹಶೀಲ್ದಾರ ಹಾಗೂ ಎಸಿಯವರೊಂದಿಗೆ ಮಾತನಾಡಿ ಮುಂದಿನ ದಿನಮಾನಗಳಲ್ಲಿ ಚೆಕಪೋಸ್ಟ್ ಮಾಡುವ ವ್ಯವಸ್ಥೆ ಮಾಡಲಾಗುವುದು. 30-36 ಟನ್ ಓವರ್ ಲೋಡ್ ಹಾಕಿಕೊಂಡು 14-15 ಟನ್ ತೋರಿಸುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ ಆದರಿಂದ ತಾವು ಸ್ವಯಂ ಪ್ರೇರಿತವಾಗಿ ಓವರ್ ಲೋಡ್ ಹಾಕುವುದನ್ನು ನಿಲ್ಲಿಸಿ ಇಲ್ಲ್ ಎಂದರೆ ಮುಂದಿನ ದಿನಮಾನಗಳಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಅಲ್ಲಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುವುದು ಎಂದು ಕ್ರಷರ್ ಮಾಲೀಕರಿಗೆ ಹಾಗೂ ಟಿಪ್ಪರ ಮಾಲಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ, ಬಿ ಡಿ ಪಲ್ಲೇದ, ಸೋಮು ಕದಡಿ, ಜಾನು ಲಮಾಣಿ, ಈಶ್ವರ್ಪ ಕೋಡಿ, ಮೋಹನ ಲಕ್ಷ್ಮೇಶ್ವರ, ಬಸವರಾಜ ಗಾಣಿಗೇರ, ಶ್ರೀಕಾಂತ ಯಲಿಶಿರುಂದ, ಚನ್ನವೀರಗೌಡ ಪಾಟೀಲ್, ಶಿವನಗೌಡ ಕಂಠಿಗೌಡ್ರು, ಶಿವರಾಜಗೌಡ ಪಾಟೀಲ, ಮಂಜುನಾಥ ಕೋಡಿ, ಮುತ್ತು ಸಂಶಿ, ಶೇಖಪ್ಪ ಗುಡಸಲಮನಿ,ಗದಿಗೆಪ್ಪ ಗಾಣಿಗೇರ, ದಾವಲಸಾಬ ನದಾಫ, ಬಸವರಾಜ ಕೋಡಿ, ಈರಯ್ಯ ಹೊನ್ನಪ್ಪನವರ ಬಸಪ್ಪ ಹಡಪದ, ನವೀನ ಅಕ್ಕಿ, ಮಂಜುನಾಥ ಪಾಟೀಲ,ಬಸವರಾಜ ನಾಯ್ಕರ, ಶ್ರೀಕಾಂತ್ ಗಾಣಿಗೇರ್ ಪ್ರಮುಖರು ಮುಖಂಡರು ಯುವಕರು ಉಪಸ್ಥಿತರಿದ್ದರು.