ಜಿಲ್ಲಾ ಮಟ್ಟದಲ್ಲಿ ಅರಳಿದ ಹಳ್ಳಿ ಪ್ರತಿಭೆಗಳು: ಬಸವರಾಜ ಉಣಚಗಿ

ಲೋಕದರ್ಶನ ವರದಿ

ಮಹಾಲಿಂಗಪುರ 20: ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಗ್ರಾಮೀಣ ಪ್ರದೇಶದ ತೋಟದ ಮನೆಗಳಲ್ಲಿ ಬೆಳೆದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಮ್ಮ ಪ್ರತಿಭೆ ಮೆರೆದು ಪ್ರಥಮ ಸ್ಥಾನ ಗಳಿಸಿದ ಮಕ್ಕಳ ಸಾಧನೆ ಮತ್ತು ಮಖ್ಯೋಪಾಧ್ಯಾಯರು, ಮಾರ್ಗದರ್ಶಕ ಶಿಕ್ಷಕರ ಶ್ರಮ ಶ್ಲಾಘನೀಯ ಎಂದು ರನ್ನಬೆಳಗಲಿ ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಉಣಚಗಿ ಕೊಂಡಾಡಿದರು.

ಬಾಗಲಕೋಟೆಯ ಆದರ್ಶ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಹಿರಿಯ ಪ್ರಾಥಮಿಕ ವಿಭಾಗದ ಕೋಲಾಟ ನೃತ್ಯ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದ ಕು.ಪ್ರತೀಕ್ಷಾ ಪರೀಟ ಮತ್ತು ಸಂಗಡಿಗರು  ಹಾಗೂ ಪ್ರೌಢ ವಿಭಾಗದ ಕಲೋತ್ಸವದ ಜಾನಪದ ನೃತ್ಯ ಸ್ಪಧರ್ೆಯಲ್ಲಿ ತೃತೀಯ ಸ್ಥಾನ ಪಡೆದ ಕು.ರೇಣುಕಾ ಕಣಬೂರ ಮತ್ತು ಸಂಗಡಿಗರನ್ನು ಮತ್ತು ಶಿಕ್ಷಕರನ್ನು ಅಭಿನಂದಿಸುತ್ತಾ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಜನತಾ ಪ್ಲಾಟ್,ರನ್ನಬೆಳಗಲಿಯಲ್ಲಿ ಅವರು ಮಾತನಾಡಿದರು. 

ಮುಖ್ಯೋಪಾಧ್ಯಾಯ ದೇವೇಂದ್ರ ಎಚ್.ಗುಡಿಮನಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮುತ್ತಪ್ಪಣ್ಣ ಯಡಳ್ಳಿ ಹಾಗೂ ಸದಸ್ಯರು ಮತ್ತು ಊರಿನ ಗಣ್ಯರು ಮಕ್ಕಳು ಮತ್ತು ಗುರುವೃಂದವನ್ನು ಅಭಿನಂದಿಸಿದ್ದಾರೆ.