2026 ಏಪ್ರಿಲ್ 16 ರಿಂದ 24 ರ ವರೆಗೆ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಗ್ರಾಮದೇವಿಯರ ಜಾತ್ರೆ ಮತ್ತು ಮಹಾ ರಥೋತ್ಸವ
Village Goddess Fair and Maha Rathotsava will be held in Hulakoppa village, Galgi from 16th to 24th
ಧಾರವಾಡ 17 : ಸಮೀಪದ ಗಳಗಿ ಹುಲಕೊಪ್ಪ ಗ್ರಾಮದಲ್ಲಿ 25 ರಿಂದ 30 ವರ್ಷಕ್ಕೊಮ್ಮೆ ನಡೆಯುತ್ತದೆ. 2026 ಏಪ್ರಿಲ್ 16 ರಿಂದ 24 ರ ವರೆಗೆ ಒಟ್ಟು ಒಂಭತ್ತು ದಿನ ಜಾತ್ರೆ ನಡೆಯುತ್ತದೆ. ಮೊದಲದಿನ 16 ರಂದು ಅಂಕಿಹಾಕುವುವ ಕಾರ್ಯಕ್ರಮ. ದಿ: 17 ರಂದು ತವರು ಮನೆಯಾದ ಹುಲಿಕಟ್ಟಿ ಗ್ರಾಮದಲ್ಲಿ ವಾಸ್ತವ್ಯ. ದಿ: 18 ರಂದು ಮರಳಿ ಗಳಗಿ ಹುಲಕೊಪ್ಪ ಗ್ರಾಮಕ್ಕೆ ಆಗಮನ ಮತ್ತ್ತ ಗುರುವಂದನಾ ಕಾರ್ಯಕ್ರಮ. ದಿ:19, 21,22 ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊನ್ನಾಟ ಉತ್ಸವ. ದಿ: 20 ರಂದು ಘಟಗಿ ಬಸವೇಶ್ವರ ದೇವರಿಗೆ ರುದ್ರಾಭಿಷೇಕದೊಂದಿಗೆ ರಥೋತ್ಸವ. ದಿ: 23 ರಂದು ಹೊಂಡದ ಬಸವೇಶ್ವರ ದೇವರಿಗೆ ರುದ್ರಾಭಿಷೇಕದೊಂದಿಗೆ ರಥೋತ್ಸವ. ದಿ: 24ರಂದು ಗ್ರಾಮದೇವಿಯರಾದ ದ್ಯಾಮವ್ವ ಮತ್ತು ದುರ್ಗವ್ವ ದೇವಿಯವರ ಮಹಾ ರಥೋತ್ಸವ ಜರುಗಯತ್ತದೆ.
ಮತ್ತು ರಾತ್ರಿ ಗೊಲ್ಲಭಾವಿ ಗ್ರಾಮದ ರೇಖಾಬಾಯಿ ಗೀಗಿಪದ ಕಲಾವಿದರು ಹಾಗೂ ಕಂಬಾಗಿ ಗ್ರಾಮದ ಸುರೇಶ ಕಂಬಾಗಿ ಗೀಗಿಪದ ಕಲಾವಿದರಿಂದ ಗೀಗಿ ಪದ ಜಗಲಬಂದಿ ನಡೆಯುತ್ತದೆ. ದಿ: 25 ರಂದು ಮಹಾ ರಥೋತ್ಸವಕ್ಕೆ ಕಡಬಿನ ಕಾಳಗ ಮತ್ತು ಸಂಜೆ 5 ಗಂಟೆಗೆ ಹಾರಿಕಾ ಮಂಜುನಾಥ ಅವರಿಂದ ಆಧ್ಯಾತ್ಮಿಕ ಪ್ರವಚನ ಮತ್ತು ಹಂಪಿಹೋಳಿ ರವಿ ಮಾಸ್ಟರ್ ಇವರಿಂದ ರಸಮಂಜರಿ ಇರುತ್ತದೆ. ದಿ: 26 ರಂದು ಬಯಲು ಕುಸ್ತಿ ಕಣ ಮತ್ತು ರಾತ್ರಿವೇಳೆಯಲ್ಲಿ ಮಾರುತಿ ಸೇವಾಬಾಯಿ ಭಜನಾ ಸಂಘ ಚಿಕ್ಕಮರಹಳ್ಳಿ. ದುರ್ಗಾದೇವಿ ಭಜನಾಸಂಘ ದೇವರಕೊಂಡ. ರಾಮೇಶ್ವರ ಭಜನಾ ಸಂಘ ಕನಕೂರು. ಮತ್ತು ಮಾರುತಿ ಭಜನಾ ಸಂಘ ಕಣವಿಹೊನ್ನಾಪೂರ ಇವರಿಂದ ಭಜನಾ ಪದಗಳ ಸವಾಲ ಜವಾಬ್ ಸ್ಪರ್ಧೆಗಳು ನಡೆಯುತ್ತದೆ. ದಿ: 27 ರಂದು ಬಯಲು ಕುಸ್ತಿಗಳು. ಸಂಜೆ ಪಂಡಿತ ಕೃಷ್ಣಪ್ಪ ರಸ್ ಜೋಗಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯುತ್ತದೆ. ವಿವಿದ ಧರ್ಮ ಗರುಗಳಿಂದ ಚಿಂತನೆ ಇರುತ್ತದೆ. ದಿ : 28 ರಂದು ದೇವಿಯವರು ಸೀಮೆಗೆ ಹೋಗುವರು.
ಸಂಜೆ ಗ್ರಾಮದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ.ಜಾತ್ರಾ ಮಹೋತ್ಸದಲ್ಲಿ ಭಾಗವಹಿಸುವ ಪೂಜ್ಯರಾದ ರೇವಣಸಿದ್ದೇಶ್ವರ ಶಿವಾಚಾರ್ಯರು ಕಲಘಟಗಿ, ಗವಿಸಿದಗದೇಶ್ವರ ಸ್ವಾಮಿಗಳು ಕೊಪ್ಪಳ, ಕಾಡಸಿದ್ದೇಶ್ವರ ಸ್ವಾಮಿಗಳು ಕನ್ನೇರಿಮಠ ಕೊಲ್ಲಾಪುರ, ಮಂಜುನಾಥ ಭಾರತಿ ಸ್ವಾಮಿಗಳು ಬೆಂಗಳೂರು, ಅಭಿನವ ರೆವಣಸಿದಗದೇಶ್ವರ ಸ್ವಾಮಿಗಳು ರಾಯನಾಳ, ರುದ್ರಮುನಿ ಸ್ವಾಮಿಗಳು ಮುಂಡಗೋಡ, ಸದ್ಗುರು ಸುಬ್ರಹ್ಮಣ್ಯ ಸ್ವಾಮಿಗಳು ಕೆ ಕೆ ಹಳ್ಳಿ, ಸದ್ಗುರು ಬಸವಾನಂದ ಸ್ವಾಮಿಗಳು ಹುಬ್ಬಳ್ಳಿ, ರಮಾನಂದ ಭಾರತಿ ಸ್ವಾಮಿಗಳು ಆರೆಬಸನಕೊಪ್ಪ, ಬ್ರಹ್ಮಾನಂದ ಸ್ವಾಮಿಗಳು ಹುಬ್ಬಳ್ಳಿ, ಹಾಗೂ ಜನಪ್ರತಿನಿದಿಗಳಾದ ಸಂತೋಸ ಲಾಡ್, ಪ್ರಲ್ಹಾದ ಜೋಶಿ, ಬಸವರಾಜ ಹೊರಟ್ಟಿ, ಸಲೀಂ ಅಹ್ಮದ, ಎಸ್ ವ್ಗಿ ಸಂಕನೂರು, ಪ್ರದೀಪ್ ಸೆಟ್ಟರ್, ನಾಗರಾಜ ಛಬ್ಬಿ, ಮುಂತಾದವರು ಭಾಗವಹಿಸುತ್ತಿದ್ದಾರೆ.
"ಗ್ರಾಮ ದೇವತೆಗಳ ಮಹತ್ವ"ಗ್ರಾಮದೇವತೆ ಅಥವಾ ಗ್ರಾಮದೇವಿ ಹಿಂದೂ ಧರ್ಮದಲ್ಲಿ, ನಿರ್ದಿಷ್ಟವಾಗಿ ಭಾರತದ ಗ್ರಾಮೀಣ ಭಾಗಗಳಲ್ಲಿ ಅಪಾರ ಮಹತ್ವವನ್ನು ಹೊಂದಿರುವ ದೇವತೆಯಾಗಿದ್ದಾಳೆ. ಗ್ರಾಮದೇವಿಯು ಗ್ರಾಮದ ಅಧಿಷ್ಠಾತ್ರಿ ದೈವವಾಗಿದ್ದು, ಗ್ರಾಮದ ರಕ್ಷಕಿ ಎಂದು ನಂಬಲಾಗಿದೆ.ಗ್ರಾಮ ದೇವಿಯ ಮಹತ್ವ ಏನೆದರೆ,ಗ್ರಾಮದ ರಕ್ಷಣೆ: ಗ್ರಾಮದೇವತೆಗಳು ಗ್ರಾಮದ ನಿವಾಸಿಗಳನ್ನು ರೋಗರುಜಿನಗಳು, ಡಕಾಯಿತರು, ಬರಗಾಲ ಮತ್ತು ನೈಸರ್ಗಿಕ ವಿಕೋಪಗಳಿಂದ ರಕ್ಷಿಸುವ ತಾಯಿಯಾಗಿ ಪೂಜಿಸಲ್ಪಡುತ್ತಾರೆ.ಸಾಮಾಜಿಕ ಐಕ್ಯತೆ: ಗ್ರಾಮದೇವತೆಯ ಜಾತ್ರೆ, ಹಬ್ಬ ಹರಿದಿನಗಳು ಊರಿನ ಜನರೆಲ್ಲರನ್ನೂ ಒಂದೆಡೆ ಸೇರಿಸುತ್ತವೆ, ಇದು ಸಾಮಾಜಿಕ ಬಾಂಧವ್ಯ ಮತ್ತು ಏಕತೆಯನ್ನು ಬಲಪಡಿಸುತ್ತದೆ.ಕೃಷಿ ಸಮೃದ್ಧಿ: ಗ್ರಾಮದೇವತೆಯನ್ನು ಕೃಷಿ, ಪಶುಸಂಪತ್ತು ಮತ್ತು ಗ್ರಾಮದ ಫಲವತ್ತತೆಯ ದೇವತೆಯಾಗಿ ಪೂಜಿಸಲಾಗುತ್ತದೆ. ಉತ್ತಮ ಮಳೆ ಮತ್ತು ಬೆಳೆಗಾಗಿ ಗ್ರಾಮದೇವತೆಯಲ್ಲಿ ಪ್ರಾರ್ಥಿಸಲಾಗುತ್ತದೆ.
ಸ್ಥಳೀಯ ದೈವತ್ವ: ಗ್ರಾಮದೇವತೆಗಳು ಸಾಮಾನ್ಯವಾಗಿ ಗ್ರಾಮದ ಹೊರವಲಯದಲ್ಲಿ, ಗಡಿ ಭಾಗದಲ್ಲಿ ನೆಲೆಸಿರುತ್ತಾರೆ, ಇದು ದುಷ್ಟಶಕ್ತಿಗಳು ಗ್ರಾಮವನ್ನು ಪ್ರವೇಶಿಸದಂತೆ ತಡೆಯುತ್ತದೆ ಎಂಬ ನಂಬಿಕೆ ಇದೆ.ಆಧ್ಯಾತ್ಮಿಕ ಶಕ್ತಿ: ದೇವಿಯು ಪ್ರತಿಯೊಬ್ಬರಲ್ಲೂ ಪ್ರಜ್ಞೆಯಾಗಿ ನೆಲೆಸಿದ್ದಾಳೆ ಎಂಬ ’ಯಾ ದೇವಿ ಸರ್ವ ಭೂತೇಷು’ ಎಂಬ ಮಂತ್ರದಂತೆ, ಆಕೆ ಸರ್ವವ್ಯಾಪಿಯಾಗಿದ್ದಾಳೆ.ಸಾಂಸ್ಕೃತಿಕ ಪರಂಪರೆ: ಗ್ರಾಮದೇವತೆಗಳ ಪೂಜಾ ವಿಧಾನಗಳು, ಜಾನಪದ ಕಥೆಗಳು ಮತ್ತು ಆಚರಣೆಗಳು ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಗ್ರಾಮದೇವಿ ಕೇವಲ ಮೂರ್ತಿಯಲ್ಲ, ಬದಲಾಗಿ ಆ ಊರಿನ ಜನರ ಪಾಲಿಗೆ ರಕ್ಷಕ ಕವಚ ಮತ್ತು ಸಾಂಸ್ಕೃತಿಕ ಕೇಂದ್ರಬಿಂದುವಾಗಿದ್ದಾಳೆ. ಈ ಜಾತ್ರಾ ಮಹೋತ್ಸವದಲ್ಲಿ ಸುಮಾರು (50,000) ಐವತ್ತು ಸಾವಿರ ಜನರು ಭಾಗವಹಿಸುವ ನೀರಿಕ್ಷೆ ಇದೆ. ಮತ್ತು ಅವರಿಗೆ ಪ್ರತಿದಿನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಕವಿ ಸಾಹಿತಿ ಚಿಂತಕ ಲೇಖಕ ನಾರಾಯಣ ಭಜಂತ್ರಿ ತಿಳಸಿದ್ದಾರೆ.ಇಂದ.ನಾರಾಯಣ ಭಜಂತ್ರಿಕವಿ, ಸಾಹಿತಿಗಳು, ಲೇಖಕರು ಗಳಗಿ ಹುಲಕೊಪ್ಪ,
ಬೆಳಗಾವಿಯಲ್ಲಿ ನ್ಯಾಯವಾದಿ ಮನೆ ಮೇಲೆ ಗುಂಡಿನ ದಾಳಿ, ಹತ್ಯೆಗೆ ಯತ್ನ : ಅತಂಕದಲ್ಲಿ ಜನ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 