ನವದೆಹಲಿ, 11 ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ವಿಶ್ವಾಸ ಹೊಂದಿರುವ
ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಅವರು ರಾಷ್ಟ್ರೀಯ ಶಿಬಿರದಲ್ಲಿ ಗಮನಾರ್ಹ ಸಮಯವನ್ನು
ಕಳೆಯಬೇಕಾಗುತ್ತದೆ. ಆದರೆ, ಭಾರತೀಯ ಬಾಕ್ಸಿಂಗ್ ಒಕ್ಕೂಟದ ಅವಶ್ಯಕತೆಗಳನ್ನು ಪೂರೈಸಲು ಅವರಿಗೆ ಸಾಧ್ಯವಾಗುತ್ತಿಲ್ಲ
ಎನ್ನಲಾಗುತ್ತಿದೆ.
34ರ ಪ್ರಾಯದ ವಿಜೇಂದರ್ ಸಿಂಗ್ 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದರು. ಆ ಮೂಲಕ ಬಾಕ್ಸಿಂಗ್ ವಿಭಾಗದಿಂದ ದೇಶಕ್ಕೆ ಪದಕ ತಂದು ಕೊಟ್ಟ ಮೊದಲ ಬಾಕ್ಸರ್ ಎಂಬ ಸಾಧನೆ ಇವರ ಹೆಸರಿನಲ್ಲಿದೆ.
ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್‌ನ (ಎಐಬಿಎ) ನಿಯಮಗಳನ್ನು ಸಡಿಲಿಸಿದ ನಂತರ ಮತ್ತೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಇಚ್ಚೆಯ ನ್ನು ವಿಜೇಂದರ್ ವ್ಯಕ್ತಪಡಿಸಿದ್ದಾರೆ. 2015ರಲ್ಲೇ ವಿಜೇಂದರ್ ವೃತ್ಲಿಪರ ಬಾಕ್ಸರ್ ಆಗಿ ಮಾಪಾರ್ಡಾಗಿದ್ದರು. ಹಾಗಾಗಿ, ಅವರು ಕಳೆದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿರಲಿಲ್ಲ.
"ಟೋಕಿಯೊ ಒಲಿಂಪಿಕ್ಸ್ ತಲುಪಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಆದರೆ, ಇದಕ್ಕೆ ಹಲವು ನಿಯಮಗಳು ಮತ್ತು ಷರತ್ತುಗಳಿವೆ. ಎರಡು, ಎರಡೂವರೆ ತಿಂಗಳು ಶಿಬಿರದಲ್ಲಿ ಇರಬೇಕಾಗುತ್ತದೆ ಮತ್ತು ಹಲವಾರು ಇತರ ವಿಧಿವಿಧಾನಗಳ ನ್ನು ಅನುಸರಿಸಬೇಕಾಗುತ್ತದೆ,'' ಎಂದು ವಿಜೇಂದರ್ ಬ್ಯಾಡ್ಮಿಂಟನ್ ಹಿರಿಯ ಆಟಗಾರ್ತಿ ಜ್ವಾಲಾ ಗುಟ್ಟಾ ಅವರ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.