ವೃತ್ತಿಪರ ಬಾಕ್ಸಿಂಗ್ ನಲ್ಲಿ ಅಜೇಯ ಓಟ ಮುಂದುವರಿಸಿದ ವಿಜೇಂದರ್

ದುಬೈ, 23- ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಅವರು ವೃತ್ತಿಪರ ಬಾಕ್ಸಿಂಗ್ ನಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರೆಸಿದ್ದಾರೆ. ಶುಕ್ರವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ವಿಜೇಂದರ್, ಎರಡು ಬಾರಿ ಕಾಮನ್ ವೆಲ್ತ್ ಚಾಂಪಿಯನ್ ಚಾಲಸರ್್ ಅದಮು ಅವರನ್ನು ಸೂಪರ್ ಮಿಡ್ಲ್ ವೇಟ್ ಸ್ಪಧರ್ೆಯಲ್ಲಿ ಮಣಿಸಿದರು.  ಕಳೆದ ನಾಲ್ಕು  ವರ್ಷಗಳಿಂದ ಭರ್ಜರಿ ಪ್ರದರ್ಶನವನ್ನು ನೀಡುತ್ತಿರುವ ವಿಜೇಂದರ್ ಸಿಂಗ್ ಅಭಿಮಾನಿಗಳನ್ನು ರಂಜಿಸಿದರು. 42 ವರ್ಷದ ಎದುರಾಳಿ ಅದಮು ಅವರನ್ನು ಎಂಟು ಸುತ್ತುಗಳ ಪಂದ್ಯದಲ್ಲಿ ಮಣಿಸಿ ಆರ್ಭಟಿಸಿದರು. ಈ ಮೂಲಕ ವೃತ್ತಿ ಪರ ಬಾಕ್ಸಿಂಗ್ ನಲ್ಲಿ 12ನೇ ಗೆಲುವು ದಾಖಲಿಸಿದರು.  ಪಂದ್ಯ ಗೆದ್ದ ಬಳಿಕ ಮಾತನಾಡಿದ ವಿಜೇಂದರ್, ಪಂದ್ಯ ಸಂಘರ್ಷ ಪೂರ್ಣವಾಗಿತ್ತು. ಅದಮು ಅವರ ಪಂಚ್ ಗಳಿಗೆ ಪ್ರತಿ ಪಂಚ್ ನೀಡುವುದನ್ನು ಅಭ್ಯಾಸ ಮಾಡಿದ್ದೇ. ದುಬೈನಲ್ಲಿ ಗೆಲುವು ದಾಖಲಿಸಿದ್ದು ಸಂತಸ ತಂದಿದೆ. ಮೂರು ನಾಲ್ಕು ಸುತ್ತಿನಲ್ಲೇ ಪಂದ್ಯ ವನ್ನು ಮುಗಿಸುವ ಗುರಿಯನ್ನು ಹೊಂದಿದ್ದೆ. ಆದರೆ ಎಂಟನೇ ಸುತ್ತಿನವರೆಗೆ ಜಯದ ಮಾಲೆ ತೊಡಲು ಕಾಯಬೇಕಾಯಿತು ಎಂದಿದ್ದಾರೆ.