ಲೋಕದರ್ಶನ ವರದಿ
ವಿಜಯಪುರ 18: ದೊಡ್ಡವರು ಅಥವಾ ಹಿರಿಯರು ಎನ್ನಿಸಿಕೊಳ್ಳುವ ನಾವೆಲ್ಲರೂ ಗಾಂಭಿರ್ಯವಾದಂತಹ ಮುಖವಾಡಗಳನ್ನು ಧರಿಸುವುದರಿಂದ ನಮ್ಮ ಮತ್ತು ಹದಿಹರಿಯದವರ ಮಧ್ಯೆ ಅಂತರ ಹೆಚ್ಚುತ್ತಿದೆ. ಇದು ಅತ್ಯಂತ ಕಳವಳದ ಸಂಗತಿ ಈ ನಿಟ್ಟಿನಲ್ಲಿ ಹದಿಹರಿಯದವರ ನೆಲೆಗಟ್ಟಿನಲ್ಲಿನ ವಿಚಾರಗಳು, ರಚನಾತ್ಮಕ ಕಾರ್ಯಗಳು ವರದಿಗಳ ರೂಪದಲ್ಲಿ ಮೂಡಿಬರಬೇಕು. ತಾರುಣ್ಯದ ದಿನಗಳು ಅವರ ಭವಿಷ್ಯತ್ತಿನ ಬದುಕಿಗೆ ದಾರಿ ದೀಪವಾಗಬೇಕು ಎಂದು ಪ್ರೋ.ಸಬಿಹಾ ಭೂಮಿಗೌಡ ಅಭಿಪ್ರಾಯಪಟ್ಟರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಹೈದರಾಬಾದ್ ಯುನಿಸೇಫ್ ಸಹಯೋಗದೊಂದಿಗೆ "ಹದಿಹರಿಯದವರ ಮೇಲೆ (ಕಿಶೋರಾವಸ್ಥೆ) ಅಭಿವೃದ್ಧಿ ವರದಿಗಾರಿಕೆ" ಕುರಿತು ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದಂತಹ ನಾಗಮನಿ.ಸಿ.ಎನ್ ಅವರು ಮಾತನಾಡಿ, ಹದಿಹರಿಯ ಮಕ್ಕಳಲ್ಲಿ ಇರುವ ಅವಕಾಶಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಕೆಲಸ ನಾವು ಮಾಡಬೇಕಾಗಿದೆ. 10-19 ವರ್ಷದ ಮಕ್ಕಳನ್ನು ಹದಿಹರಿಯದವರು ಎಂದು ಹೇಳಬಹುದು. ಹೊಸದಾಗಿ ಆಲೋಚನೆಗಳನ್ನು ಅವರು ನೋಡುತ್ತಿರುತ್ತಿರುವುದು ಹೆಚ್ಚು. ಬದುಕಿನಲ್ಲಿ ಮುಂದೆ ಏನು ಎಂಬುದು ನಮಗೆ ಗೊತ್ತಿಲ್ಲ ಎನ್ನುವ ಗೊಂದಲ ಹದಿಹರಿಯದವರಲ್ಲಿ ಉಂಟಾಗುತ್ತಿದೆ ಎಂದು ಹೇಳಿದರು.
ಕಾಯರ್ಾಗಾರದ ಸಂಚಾಲಕಿ ಡಾ.ಎಮ್.ಎಸ್.ಸಪ್ನಾ ಮಾತನಾಡಿ, ಯುನಿಸೇಪ್ನ ಮೂಲಕ ಇಂತಹ ಹಲವಾರು ಕಾಯರ್ಾಗಾರವನ್ನು ಗ್ರಾಮೀಣಮಟ್ಟದಲ್ಲಿ ಹಮ್ಮಿಕೊಳ್ಳುವ ಮೂಲಕ ಸಾಕಷ್ಟು ಸಹಕಾರಿಯಾಗುತ್ತಿದೆ. ಇಂದಿನ ಈ ಕಾರ್ಯಾಗಾರ ನಿಮ್ಮೆಲ್ಲ ವರದಿಗಾರರಲ್ಲಿ ಮತ್ತಷ್ಟು ಹೊಸ ವಿಷಯಗಳನ್ನು ತಿಳಿಸಿಕೊಡುವಲ್ಲಿ ಯಾವ ಸಂದೇಹವೂ ಇಲ್ಲ ಎಂದರು.
ಜಿಲ್ಲೆಯ ವಿವಿಧ ಭಾಗದ ಗ್ರಾಮೀಣ ಮಟ್ಟದ ವರದಿಗಾರರು, ವಿಭಾಗದ ವಿದ್ಯಾಥರ್ಿನಿಯರು ಭಾಗವಹಿಸಿದ್ದರು.
ಆಶಿಕಾ ಎಮ್.ಎಸ್.ನಿರೂಪಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೋ.ಓಂಕಾರ ಕಾಕಡೆ ವಂದಿಸಿದರು.