ವಿಜಯಪುರ: ಸಾಮೂಹಿಕ ಯೋಗದಲ್ಲಿ ವಿದ್ಯಾರ್ಥಿಗಳ ವಿಶ್ವ ದಾಖಲೆ

ಲೋಕದರ್ಶನ ವರದಿ

ವಿಜಯಪುರ 11: ವಿಜಯಪುರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರಕಾರಿ ಬಾಲಕರ ಬಾಲಮಂದಿರ (ಕಿರಿಯ) ಟಕ್ಕೆಯ ವಿದ್ಯಾರ್ಥಿಗಳು ಬೆಂಗಳೂರಲ್ಲಿ ಆಯೋಜಿಸಿದ್ದ ನಿರಂತರ 108 ಸೂರ್ಯನಮಸ್ಕಾರಗಳು ಹಾಗೂ 3ಜಿ ಯೋಗ ಕ್ರಿಯೇಯಲ್ಲಿ ಸಾಮೂಹಿಕ ವಿಶ್ವ ದಾಖಲೆ ನಿಮರ್ಿಸಿದ್ದಾರೆ.

 ಬೆಂಗಳೂರಿನ ವಿಶ್ವ ಸಾಂಕೃತಿಕ ಸಂಭ್ರಮ (ವಿ.ಎಸ್.ಎಮ್) ಯೋಗ ಮಂದಿರದಿಂದ ದಿನಾಂಕ: 02-02-2020 ರಂದು ಆಯೋಜಿಸಿದ್ದ ರತಸಂಪ್ತಮಿ ಪ್ರಯುಕ್ತ 12 ಗಂಟೆಗಳ ಕಾಲ 108 ಸೂರ್ಯನಮಸ್ಕಾರಗಳು ಹಾಗೂ 3ಜಿ ಯೋಗ ಕ್ರಿಯೇಗಳಲ್ಲಿ ಸಾಮೂಹಿಕ ನೋಬೆಲ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ವಿಜಯಪುರದ ಟಕ್ಕೆ ಬಾಲಮಂದಿರದ ಮಕ್ಕಳಾದ ಅಲ್ಲಪ್ಪ ಮನಗೂಳಿ, ಶಿವರಾಜ ಹೂಗಾರ, ಆಕಾಶ ಪವಾರ, ನಾಗಪ್ಪ ಸಾಲೋಟಗಿ, ಶಿವು ಮಾಹೂರ ಇವರು ಯಶಸ್ವಿಯಾಗಿ ಭಾಗವಹಿಸಿ ಪೂರ್ಣ ಪ್ರಕ್ರಿಯೇಗಳನ್ನು ಪೂರ್ಣಗೊಳಿಸಿ ನೋಬೆಲ್ ವಿಶ್ವ ದಾಖಲೆಯ ಪ್ರಮಾಣ ಪತ್ರ ಮತ್ತು ಪದಕವನ್ನು ಪಡೆದುಕೊಂಡಿದ್ದಾರೆ. 

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಯೋಗ ಗುರುಗಳು ಆಗಮಿಸಿದ್ದು, ಸ್ವಾಮೀ ವಿವೇಕಾನಂದ ಯೋಗ ಸಂಸ್ಥೆಯ ಮುಖ್ಯಸ್ಥಾರ ಡಾ|| ಯೋಗಿ ದೇವರಾಜರವರು ಅಮೇರಿ ಕ್ಲೋರಿನ್ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಸೇರಿದಂತೆ ಇತರರಿದ್ದರು.