ಲೋಕದರ್ಶನ ವರದಿ
ವಿಜಯಪುರ 05; ವಿಶ್ವಗುರು ಬಸವಣ್ಣನವರು ಅಂದು ಆಯುರ್ವೇದ ಶಾಸ್ತ್ರದ ವೈಶಿಷ್ಟತೆಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ಮಾಡಿದ್ದರು. ಅದರಂತೆ ಆಧುನಿಕ ಯುಗದಲ್ಲಿ ಆಯುರ್ವೇದ ಶಾಸ್ತ್ರದ ಕುರಿತು ಪ್ರತಿಯೊಬ್ಬರಿಗೆ ತಲುಪಿಸುವ ಕಾರ್ಯವನ್ನು ದೇಶದ ಸಂತ ಮಹಾಂತರು ಮಾಡಿಬೇಕಿದೆ ಎಂದು ನವದೆಹಲಿಯ ಭಾರತೀಯ ವೈದ್ಯ ಪದ್ದತಿ ಪರಿಷತ್ ಸದಸ್ಯ ಡಾ.ಶ್ರೀನಿವಾಸ ಬನ್ನಿಗೋಳ ತಿಳಿಸಿದರು.
ಬಿ.ಎಲ್.ಡಿ.ಇ ಎ.ವಿ.ಎಸ್ ಆಯುರ್ವೇದ ಕಾಲೇಜಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ವೈಜ್ಞಾನಿಕ ಲೇಖನ ಮತ್ತು ಪ್ರಬಂಧ ಪ್ರಕಟಣೆ ಕುರಿತ ಕಾರಿರ್ಯಾಗಾರದಲ್ಲಿ ಮಾತನಾಡಿದ ಅವರು ಅಧ್ಯಾಪಕರು ವಿದ್ಯಾಥರ್ಿಗಳಿಗೆ ಆಯುರ್ವೇದ ಪದ್ಧತಿಗಳ ವಿಶೇಷತೆಗಳನ್ನು ತಿಳಿ ಹೇಳಿ ಮುಂದಿನ ಪೀಳೆಗೆಗೂ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.
ಸಿಸಿಐಎಂ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಆನಂದ ಕಿರಿಶಾಳ ಮಾತನಾಡಿ ಕೊರೊನಾ ಎಂಬ ಮಹಾಮಾರಿ ಇಂದು ಕಾಲಿರಿಸಿದ್ದು, ಈ ವೈರಸ್ ಜೊತೆ ಹೋರಾಡುವ ಅಸ್ತ್ರ ಆಯುರ್ವೇದ ಶಾಸ್ತ್ರಕ್ಕೆ ಇದೆ ಎಂಬುದನ್ನು ಅರಿತು ಆಯುಷ ಇಲಾಖೆ ಆಯುವರ್ೆದಲ್ಲಿರುವ ವಿಶೇಷ ಔಷಧಿಗಳನ್ನು ಅಳವಡಿಕೆಯ ಬಗ್ಗೆ ಲೇಖನ ರೂಪದಲ್ಲಿ ಜನ ಸಮುದಾಯಕ್ಕೆ ನೀಡಬೇಕಿದೆ ಎಂದರು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ಡಾ.ಆನಂದ ಕಟ್ಟಿ ಪ್ರಸಕ್ತ ದಿನಮಾನದಲ್ಲಿ ಎಲ್ಲರೂ ಒಪುವಂತ ದೃಷ್ಠಿಕೋನ ಒಳಗೊಂಡ ಲೇಖನಗಳನ್ನು ಹೊರತರುವಂತಹ ಕಾರ್ಯದಲ್ಲಿ ಪ್ರವೃತ್ತರಾಗಬೇಕು ಎಂದರು.
ಮೈಸೂರ ಸರಕಾರಿ ಆಯುವರ್ೆದ ಕಾಲೇಜು ಪ್ರಾಧ್ಯಾಪಕರಾದ ಡಾ.ರಾಜೇಂದ್ರ ವಿ, ಡಾ.ಶ್ರೀವತ್ಸ, ಹಾಸನದ ಎಸ್.ಡಿ.ಎಂ ನ ಡಾ.ಗಿರೀಶ ಕೆ.ಜೆ ಸೇರಿದಂತೆ ಉತ್ತರ ಕನರ್ಾಟಕದ ಆಯುಷ ವಿಭಾಗದ 20ಮಹಾವಿದ್ಯಾಲಯಗಳಿಂದ 100ಕ್ಕೂ ಹೆಚ್ಚು ಸಹಾಯಕ ಅಧ್ಯಾಪಕರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕಣರ್ಿ, ಪ್ರಾಚಾರ್ಯ ಸಂಜಯ ಕಡ್ಲಿಮಟ್ಟಿ, ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.